ಮಲಗಿದ್ದ ರಣವೀರ್ ಸಿಂಗ್ ಮೇಲೆ ದಾಳಿ ಮಾಡಲು ಬಂತು ಕರಡಿ; ಇದೆಂಥ ಹುಚ್ಚು ಸಾಹಸ?

Ranveer Vs Wild: ಬೇರ್​ ಗ್ರಿಲ್ಸ್ ಜತೆ ರಣವೀರ್ ಸಿಂಗ್ ಸಾಹಸಕ್ಕೆ ಮುಂದಾಗಿದ್ದಾರೆ. ಈ ಎಪಿಸೋಡ್ ಜುಲೈ 8ರಂದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದ್ದು, ಇದರ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.

ಮಲಗಿದ್ದ ರಣವೀರ್ ಸಿಂಗ್ ಮೇಲೆ ದಾಳಿ ಮಾಡಲು ಬಂತು ಕರಡಿ; ಇದೆಂಥ ಹುಚ್ಚು ಸಾಹಸ?
ರಣವೀರ್ ಸಿಂಗ್
TV9kannada Web Team

| Edited By: Apurva Kumar Balegere

Jun 10, 2022 | 7:46 PM

ರಣವೀರ್ ಸಿಂಗ್ (Ranveer Singh) ನಿಜ ಜೀವನದ ವ್ಯಕ್ತಿತ್ವದ ಬಗ್ಗೆ ಅನೇಕರಿಗೆ ಪರಿಚಯ ಇದೆ. ಯಾವ ವಿಚಾರವನ್ನೂ ಅವರು ಗಂಭೀರವಾಗಿ ಸ್ವೀಕರಿಸುವುದಿಲ್ಲ. ಸದಾ ಚಿಲ್ ಮೋಡ್ ಆನ್ ಮಾಡಿಕೊಂಡಿರುತ್ತಾರೆ. ಚಿತ್ರ ವಿಚಿತ್ರ ಬಟ್ಟೆ ಧರಿಸಿ ಪ್ರತ್ಯಕ್ಷವಾಗುತ್ತಾರೆ. ಈ ಕಾರಣಕ್ಕೂ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಕೆಲವೊಮ್ಮೆ ಈ ವಿಚಾರಕ್ಕೆ ಅವರು ಟ್ರೋಲ್ ಆಗಿದ್ದು ಕೂಡ ಇದೆ. ಆದರೆ, ಈ ಬಗ್ಗೆ ರಣವೀರ್ ಸಿಂಗ್ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಈಗ ರಣವೀರ್ ಸಿಂಗ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರ ಮೇಲೆ ಕರಡಿ ಒಂದು ದಾಳಿಗೆ ಇಳಿದಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ರಣವೀರ್ ಸಿಂಗ್ ಈ ರೀತಿಯ ಹುಚ್ಚು ಸಾಹಸಕ್ಕೆ ಇಳಿದಿದ್ದು ಬೇರ್ ಗ್ರಿಲ್ಸ್​ ಅವರ ‘ಮ್ಯಾನ್​ vs ವೈಲ್ಡ್​’ ಶೋಗಾಗಿ. ಬ್ರಿಟನ್ ಸಾಹಸಿ ಬೇರ್​ ಗ್ರಿಲ್ಸ್ ಸಖತ್ ಫೇಮಸ್. ಅವರು ಕಾಡುಗಳಲ್ಲಿ ಯಾವುದೇ ಭಯ ಇಲ್ಲದೆ ಸುತ್ತಾಟ ನಡೆಸುತ್ತಾರೆ. ಸಿಕ್ಕ ಸಿಕ್ಕ ಕೀಟಗಳನ್ನು ಹಿಡಿದು ತಿಂದು ತೇಗುತ್ತಾರೆ. ಕೆಲವರಿಗೆ ಇದು ವಾಕರಿಕೆ ತರಿಸಿದ್ದೂ ಇದೆ. ಈಗ ಬೇರ್​ ಗ್ರಿಲ್ಸ್ ಜತೆ ರಣವೀರ್ ಸಿಂಗ್ ಸಾಹಸಕ್ಕೆ ಮುಂದಾಗಿದ್ದಾರೆ. ಈ ಎಪಿಸೋಡ್ ಜುಲೈ 8ರಂದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿದ್ದು, ಇದರ ಪ್ರೋಮೋವನ್ನು ಹಂಚಿಕೊಳ್ಳಲಾಗಿದೆ.

ಇದಕ್ಕೆ ‘ರಣವೀರ್ vs ವೈಲ್ಡ್​’ ಎಂದು ಹೆಸರು ಇಡಲಾಗಿದೆ. ಈ ವಿಡಿಯೋದಲ್ಲಿ ರಣವೀರ್ ಅವರು ಬೇರ್​ ಗ್ರಿಲ್ಸ್​ ಜತೆ ಭಯಾನಕ ಕಾಡಿನಲ್ಲಿ ಸುತ್ತಾಟ ನಡೆಸಿದ್ದಾರೆ. ಹಂಚಿಕೊಂಡಿರುವ ವಿಡಿಯೋದಲ್ಲಿ ರಣವೀರ್ ಅವರನ್ನು ಕರಡಿಯೊಂದು ಬೆನ್ನುಹತ್ತಿ ಬಂದಿದೆ. ಅತಿ ದುರ್ಗಮ ಪ್ರದೇಶಗಳಲ್ಲಿ ರಣವೀರ್ ಸಿಂಗ್ ಸುತ್ತಾಟ ನಡೆಸಿದ್ದಾರೆ. ಅವರು ಮಲಗಿದ್ದಾಗ ಪಕ್ಕದಲ್ಲೇ ಕರಡಿಯೊಂದು ಬಂದು ನಿಂತಿರುವುದು ಕೂಡ ಈ ವಿಡಿಯೋದಲ್ಲಿದೆ. ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗಲಿರುವ ಈ ಥ್ರಿಲ್ಲಿಂಗ್​ ಶೋಗಾಗಿ ಫ್ಯಾನ್ಸ್ ಕಾದಿದ್ದಾರೆ.

ಇದನ್ನೂ ಓದಿ: ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ರಣವೀರ್​ ಸಿಂಗ್​ ಹೊಸ ಸಿನಿಮಾ ಲೀಕ್​; ‘ಜಯೇಶ್​ಭಾಯ್​’ಗೆ 2 ಆಘಾತ

ರಣವೀರ್ ಸಿಂಗ್ ಅವರ ನಟನೆಯ ‘ಜಯೇಶ್​ಭಾಯ್​ ಜೋರ್ದಾರ್’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದು ಫ್ಲಾಪ್ ಆಯಿತು. ಈಗ ಅವರು ‘ಸರ್ಕಸ್​’ ಹಾಗೂ ‘ರಾಕಿ ಔರ್ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada