Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​

Karan Johar | Alia Bhatt: ‘17ನೇ ವಯಸ್ಸಿನಲ್ಲಿ ಆಲಿಯಾ ಭಟ್​ ನನ್ನ ಆಫೀಸ್​ಗೆ ಬಂದಿದ್ದಳು. ಈಗ ಅವಳಿಗೆ 29ರ ಪ್ರಾಯ. ಕಳೆದ 12 ವರ್ಷಗಳು ನಮ್ಮಿಬ್ಬರಿಗೂ ಮ್ಯಾಜಿಕಲ್​ ಆಗಿತ್ತು’ ಎಂದು ಕರಣ್​ ಜೋಹರ್​ ಹೇಳಿದ್ದಾರೆ.

Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​
ಆಲಿಯಾ ಭಟ್, ಕರಣ್ ಜೋಹರ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 06, 2022 | 7:44 AM

ನಟಿ ಆಲಿಯಾ ಭಟ್​ (Alia Bhatt) ಅವರು ಬದುಕಿನ ಹೊಸ ಘಟ್ಟದಲ್ಲಿ ಇದ್ದಾರೆ. ಕೇವಲ ಎರಡೂವರೆ ತಿಂಗಳ ಹಿಂದೆ ಅವರ ಮದುವೆ ಆಯಿತು. ಪ್ರಿಯಕರ ರಣಬೀರ್​ ಕಪೂರ್ (Ranbir Kapoor)​ ಜೊತೆ ಅವರು ಸಪ್ತಪದಿ ತುಳಿದರು. ಅದರ ಬೆನ್ನಲ್ಲೇ ಅವರು ಗುಡ್​ ನ್ಯೂಸ್​ ನೀಡಿದರು. ಆಲಿಯಾ ಭಟ್​ ಈಗ ಪ್ರೆಗ್ನೆಂಟ್​ ಎಂಬುದು ಜಗಜ್ಜಾಹೀರಾಗಿದೆ. ಈ ವಿಷಯ ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮದುವೆ ಆಗಿ ಕೇವಲ ಎರಡೂವರೆ ತಿಂಗಳಿಗೆ ಗರ್ಭಿಣಿ ಆಗಿಬಿಟ್ರಾ ಎಂದು ಕಣ್ಣರಳಿಸಿದವರೂ ಇದ್ದಾರೆ. ಆದರೆ ನಿರ್ಮಾಪಕ ಕರಣ್​ ಜೋಹರ್​ (Karan Johar) ಅವರ ರಿಯಾಕ್ಷನ್​ ಬೇರೆ ಇತ್ತು. ಆಲಿಯಾ ಭಟ್​ ಪ್ರೆಗ್ನೆಂಟ್​ ಎಂದು ಮೊದಲ ಬಾರಿಗೆ ಗೊತ್ತಾದಾಗ ಕರಣ್​ ಜೋಹರ್​ ಕಣ್ಣೀರು ಹಾಕಿದ್ದರು.

ಆಲಿಯಾ ಭಟ್​ ಮತ್ತು ಕರಣ್​ ಜೋಹರ್​ ನಡುವೆ ಉತ್ತಮ ಬಾಂಧವ್ಯ ಇದೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ, ನಿರೂಪಕನಾಗಿ ಕರಣ್​ ಅವರು ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಆಲಿಯಾ ಹೀರೋಯಿನ್​ ಆಗಿ ನಟಿಸಿದ ಮೊದಲ ಸಿನಿಮಾಗೆ ಬಂಡವಾಳ ಹೂಡಿ, ನಿರ್ದೇಶನ ಮಾಡಿದ್ದೇ ಕರಣ್​ ಜೋಹರ್​. ಆ ದಿನಗಳಿಂದಲೂ ಇಬ್ಬರೂ ಆಪ್ತವಾಗಿ ಇದ್ದಾರೆ. ಇತ್ತೀಚೆಗೆ ಟೈಮ್ಸ್​ ಆಫ್​ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಕರಣ್​ ಜೋಹರ್​ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಅಂದು ಆಲಿಯಾ ಭಟ್​ ನನ್ನ ಆಫೀಸ್​ಗೆ ಬಂದು ಈ ವಿಷಯ ಹೇಳಿದಾಗ ನಾನು ಅತ್ತುಬಿಟ್ಟೆ. ಅದೇ ನನ್ನ ಮೊದಲ ರಿಯಾಕ್ಷನ್​ ಆಗಿತ್ತು. ಆಗ ಆಕೆ ನನ್ನನ್ನು ತಬ್ಬಿಕೊಂಡಳು. ನೀನು ತಾಯಿ ಆಗುತ್ತಿದ್ದೀಯ ಎಂಬುದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಅಂತ ಆಕೆಗೆ ಹೇಳಿದೆ. ನಿಮ್ಮ ಮಗುವಿಗೆ ಮಗು ಆಗುತ್ತಿದೆ ಎಂಬಂತಹ ಸಂದರ್ಭವಿದು. ಇದು ತುಂಬಾ ಭಾವನಾತ್ಮಕ ವಿಷಯ’ ಎಂದು ಕರಣ್​ ಜೋಹರ್​ ಹೇಳಿದ್ದಾರೆ.

ಇದನ್ನೂ ಓದಿ
Image
ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?
Image
ಮದುವೆ ಬಳಿಕ ಕೆಲಸಕ್ಕೆ ಹೊರಟ ಆಲಿಯಾ ಭಟ್​; ವಿಮಾನ ನಿಲ್ದಾಣದ ಎದುರು ಕಾಣಿಸಿಕೊಂಡ ಸುಂದರಿ
Image
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ
Image
ಹೆಣ್ಣಿನ ಕಡೆಯವರು ಕೇಳಿದ್ದು 11 ಕೋಟಿ ರೂ; ರಣಬೀರ್ ಕೊಟ್ಟಿದ್ದು 1 ಲಕ್ಷ ಮಾತ್ರ: ಆಲಿಯಾ ಮದುವೆ ಇನ್​ಸೈಡ್​​ ವಿಷಯ

‘ಚಿಕ್ಕ ಹುಡುಗಿ ಆಗಿದ್ದಾಗಿನಿಂದ ಹಿಡಿದು, ಅದ್ಭುತ ನಟಿಯಾಗಿ ಬೆಳೆಯುವವರೆಗೂ ಆಕೆಯನ್ನು ನಾನು ಕಂಡಿದ್ದೇನೆ. 17ನೇ ವಯಸ್ಸಿನಲ್ಲಿ ಆಲಿಯಾ ನನ್ನ ಆಫೀಸ್​ಗೆ ಬಂದಿದ್ದಳು. ಈಗ ಅವಳಿಗೆ 29ರ ಪ್ರಾಯ. ಕಳೆದ 12 ವರ್ಷಗಳು ನಮ್ಮಿಬ್ಬರಿಗೂ ಮ್ಯಾಜಿಕಲ್​ ಆಗಿತ್ತು. ಆಕೆಯ ಮಗುವನ್ನು ಎತ್ತಿಕೊಳ್ಳಲು ನಾನು ಕಾಯುತ್ತಿದ್ದೇನೆ. ನನ್ನ ಸ್ವಂತ ಮಕ್ಕಳನ್ನೇ ಎತ್ತಿಕೊಂಡಂತಹ ಭಾವನೆ ಅದು’ ಎಂದು ಕರಣ್​ ಜೋಹರ್​ ಹೇಳಿದ್ದಾರೆ. ಸದ್ಯ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಆಲಿಯಾ ಭಟ್​ ಹಾಗೂ ರಣವೀರ್​ ಸಿಂಗ್​ ನಟಿಸುತ್ತಿದ್ದು, ಅದಕ್ಕೆ ಕರಣ್​ ಜೋಹರ್​ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೊದಲ ರಾತ್ರಿ ಎಂಬುದೆಲ್ಲ ಇರುವುದಿಲ್ಲ, ಏಕೆಂದರೆ ನೀವು ಸುಸ್ತಾಗಿರುತ್ತೀರಿ ಎಂದ ಆಲಿಯಾ ಭಟ್

ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?

Published On - 7:15 am, Wed, 6 July 22

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ