ಮೊದಲ ರಾತ್ರಿ ಎಂಬುದೆಲ್ಲ ಇರುವುದಿಲ್ಲ, ಏಕೆಂದರೆ ನೀವು ಸುಸ್ತಾಗಿರುತ್ತೀರಿ ಎಂದ ಆಲಿಯಾ ಭಟ್

ಕರಣ್ ಜೋಹರ್ ಅವರು ನಡೆಸಿಕೊಡುವ ‘ಕಾಫಿ ವಿತ್ ಕರಣ್​’ ಕಾರ್ಯಕ್ರಮದಲ್ಲಿ ಸಾಕಷ್ಟು ನೇರ ಪ್ರಶ್ನೆಗಳು ಎದುರಾಗುತ್ತವೆ. ಇದರಿಂದ ಹಲವು ವಿವಾದಗಳು ಹುಟ್ಟಿಕೊಂಡಿದ್ದೂ ಇದೆ.

ಮೊದಲ ರಾತ್ರಿ ಎಂಬುದೆಲ್ಲ ಇರುವುದಿಲ್ಲ, ಏಕೆಂದರೆ ನೀವು ಸುಸ್ತಾಗಿರುತ್ತೀರಿ ಎಂದ ಆಲಿಯಾ ಭಟ್
ಕರಣ್-ಆಲಿಯಾ
TV9kannada Web Team

| Edited By: Rajesh Duggumane

Jul 05, 2022 | 9:55 PM

ಕರಣ್ ಜೋಹರ್ (Karan Johar) ಅವರು ‘ಕಾಫಿ ವಿತ್ ಕರಣ್ ಸೀಸನ್ 7’ (Koffee With Karan 7) ನಡೆಸಿಕೊಡಲು ರೆಡಿ ಆಗಿದ್ದಾರೆ. ಈ ಈ ಕಾರ್ಯಕ್ರಮದ ಹಲವು ಪ್ರೋಮೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಪ್ರತಿ ಬಾರಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಈ ಶೋ ಈ ಬಾರಿ ನೇರವಾಗಿ ಒಟಿಟಿ ಹಾದಿ ಹಿಡಿದಿದೆ. ಮೊದಲ ಎಪಿಸೋಡ್​ಗೆ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ (Alia Bhatt) ಆಗಮಿಸಲಿದ್ದಾರೆ. ಇದರ ಪ್ರೋಮೋವನ್ನು ಕರಣ್ ಜೋಹರ್ ಹಂಚಿಕೊಂಡಿದ್ದಾರೆ. ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಜುಲೈ 7ರಂದು 7 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಕಾಣಲಿದೆ.

ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ‘ಗಲ್ಲಿ ಬಾಯ್​’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಗೆದ್ದಿತ್ತು. ಈಗ ಇಬ್ಬರೂ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಕರಣ್ ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಕಾರಣದಿಂದ ಮೊದಲ ಅತಿಥಿಯಾಗಿ ರಣವೀರ್ ಹಾಗೂ ಆಲಿಯಾ ಬಂದಿದ್ದಾರೆ. ಈ ವೇಳೆ ಆಲಿಯಾ ಭಟ್​ಗೆ ಕೆಲ ನೇರ ಪ್ರಶ್ನೆಗಳನ್ನು ಕೇಳಲಾಗಿದೆ.

‘ಮದುವೆ ನಂತರ ಅರ್ಥವಾದ ಒಂದು ವಿಚಾರ ಯಾವುದು ಹೇಳಿ’ ಎಂದು ಆಲಿಯಾಗೆ ಕರಣ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಆಲಿಯಾ ‘ಮೊದಲ ರಾತ್ರಿ ಎಂಬುದು ಇರುವುದಿಲ್ಲ. ನೀವು ಸುಸ್ತಾಗಿರುತ್ತೀರಿ’ ಎಂದಿದ್ದಾರೆ. ಇದನ್ನು ಕೇಳಿ ರಣವೀರ್ ಸಿಂಗ್ ಬಿದ್ದುಬಿದ್ದು ನಕ್ಕಿದ್ದಾರೆ.

ಕರಣ್ ಜೋಹರ್ ಅವರು ನಡೆಸಿಕೊಡುವ ‘ಕಾಫಿ ವಿತ್ ಕರಣ್​’ ಕಾರ್ಯಕ್ರಮದಲ್ಲಿ ಸಾಕಷ್ಟು ನೇರ ಪ್ರಶ್ನೆಗಳು ಎದುರಾಗುತ್ತವೆ. ಇದರಿಂದ ಹಲವು ವಿವಾದಗಳು ಹುಟ್ಟಿಕೊಂಡಿದ್ದೂ ಇದೆ. ಈ ಶೋನಿಂದ ಕೆಲ ಸೆಲೆಬ್ರಿಟಿಗಳು ತಮ್ಮ ಘನೆತೆಗೆ ದಕ್ಕೆ ಬಂದಿದೆ ಎಂದು ಆರೋಪಿಸಿದ್ದರು.

ಆಲಿಯಾ ಭಟ್ ಶೀಘ್ರದಲ್ಲೇ ತಾಯಿ ಆಗುತ್ತಿದ್ದಾರೆ. ಮದುವೆ ಆದ ಕೇವಲ ಎರಡೂವರೆ ತಿಂಗಳಿಗೆ ಅವರು ಪ್ರೆಗ್ನೆಂಟ್ ಆದ ವಿಚಾರ ಸಾಕಷ್ಟು ಟ್ರೋಲ್ ಆಗಿದೆ. ಪ್ರೆಗ್ನೆಂಟ್ ವಿಚಾರದ ಬಗ್ಗೆ ‘ಕಾಫಿ ವಿತ್ ಕರಣ್’ ಶೋನಲ್ಲಿ ಅವರು ಮಾತನಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಗಂಗೂಬಾಯಿ ಕಾಠಿಯಾವಾಡಿ: ಆಲಿಯಾ ಭಟ್​ಳಂತೆ ಕಾಣಿಸಿಕೊಂಡ ಬೆಕ್ಕು ಫುಲ್ ವೈರಲ್: ನೆಟ್ಟಿಗರು ಫಿದಾ

ಪ್ರೆಗ್ನೆನ್ಸಿ ಘೋಷಣೆಗೂ ಮೊದಲು ಆಲಿಯಾ ಭಟ್ ತೆಗೆದುಕೊಂಡಿದ್ರು ಒಂದು ಮಹತ್ವದ ನಿರ್ಧಾರ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada