‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ

Karan Johar: ಒಂದು ವೇಳೆ ಬಾಲಿವುಡ್​ನವರು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ದರೆ ವಿಮರ್ಶಕರ ಕಟುವಾದ ಟೀಕೆಯಿಂದ ಚಿತ್ರ ಸೋಲುತ್ತಿತ್ತು. ಯಾಕೆಂದರೆ ಹಿಂದಿ ಚಿತ್ರರಂಗದವರಿಗೆ ವಿಮರ್ಶಕರು ಹೆಚ್ಚು ಸ್ವಾತಂತ್ರ್ಯ ನೀಡಿಲ್ಲ ಎಂಬುದು ಕರಣ್​ ಜೋಹರ್​ ಅಭಿಪ್ರಾಯ.

‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ
ಯಶ್​, ಕರಣ್​ ಜೋಹರ್​
Follow us
TV9 Web
| Updated By: ಮದನ್​ ಕುಮಾರ್​

Updated on:Jun 19, 2022 | 9:35 AM

ಹಲವು ದಶಕಗಳಿಂದಲೂ ಭಾರತೀಯ ಚಿತ್ರರಂಗದ ಬಾಕ್ಸ್​ ಆಫೀಸ್​ ಮೇಲೆ ಹಿಡಿತ ಸಾಧಿಸಿದ್ದ ಬಾಲಿವುಡ್​ (Bollywood) ಈಗ ಕೊಂಚ ಮಂಕಾಗಿದೆ. ಹಿಂದಿ ಸಿನಿಮಾಗಳಿಗಿಂತಲೂ ದಕ್ಷಿಣ ಭಾರತದ ಭಾಷೆಗಳ ಸಿನಿಮಾಗಳೇ ಹೆಚ್ಚು ಕಲೆಕ್ಷನ್​ ಮಾಡುತ್ತಿವೆ. ಇದರಿಂದ ಸೌತ್​ ಸಿನಿಮಾ ವರ್ಸಸ್​ ಬಾಲಿವುಡ್​ ಎಂಬ ಚರ್ಚೆ ಕೂಡ ಶುರುವಾಗಿದೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2), ‘ಆರ್​ಆರ್​ಆರ್​’, ‘ಪುಷ್ಪ’ ಸಿನಿಮಾಗಳು ಮಾಡಿದ ಸಾಧನೆಯನ್ನು ಉತ್ತರ ಭಾರತದ ಮಂದಿ ಕೂಡ ಹೊಗಳಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ/ನಿರ್ದೇಶಕ ಕರಣ್​ ಜೋಹರ್​ (Karan Johar) ಕೂಡ ‘ಕೆಜಿಎಫ್​ 2’ ಸಿನಿಮಾವನ್ನು ಮೆಚ್ಚಿಕೊಂಡರು. ಆದರೆ ಈಗ ಅವರೊಂದು ಭಿನ್ನವಾದ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಬಾಲಿವುಡ್​ನವರು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ದರೆ ಕಟುವಾದ ಟೀಕೆ ವ್ಯಕ್ತವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

‘ಫಿಲ್ಮ್​ ಕಂಪ್ಯಾನಿಯನ್​’ಗೆ ನೀಡಿದ ಸಂದರ್ಶನದಲ್ಲಿ ಕರಣ್​ ಜೋಹರ್​ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನಾನು ಕೆಜಿಎಫ್​ ಚಿತ್ರದ ವಿಮರ್ಶೆ ಓದಿದಾಗ, ಒಂದು ವೇಳೆ ನಾವು ಇಂಥ ಸಿನಿಮಾ ಮಾಡಿದ್ದರೆ ನಮ್ಮ ಮೇಲೆ (ವಿಮರ್ಶಕರಿಂದ) ಹಲ್ಲೆ ಆಗುತ್ತಿತ್ತು ಎನಿಸಿತು. ಆದರೆ ಈಗ ಇದೊಂದು ಸೆಲೆಬ್ರೇಷನ್​ ಎಂಬ ರೀತಿ ಎಲ್ಲರೂ ಹೇಳಿದರು. ನನಗೂ ಸಿನಿಮಾ ಇಷ್ಟ ಆಯ್ತು. ಅದನ್ನೇ ನಾವು ಮಾಡಿದ್ದರೆ ಏನಾಗುತ್ತಿತ್ತು ಎಂಬ ಪ್ರಶ್ನೆ ಮೂಡುತ್ತದೆ’ ಎಂದು ಕರಣ್​ ಜೋಹರ್​ ಹೇಳಿದ್ದಾರೆ.

ಇದನ್ನೂ ಓದಿ: Top 10 Indian Movies: 2022ರ ಟಾಪ್​ 10 ಭಾರತೀಯ ಚಿತ್ರಗಳಲ್ಲಿ ಸ್ಥಾನ ಪಡೆದ 7 ಸೌತ್​ ಸಿನಿಮಾಗಳು; ನಂಬರ್​ ಒನ್​ ಯಾವುದು?

ಇದನ್ನೂ ಓದಿ
Image
‘ನನ್ನನ್ನೇಕೆ ದೂಷಿಸುತ್ತೀರಿ?’; ಏಕಾಏಕಿ ಸಿಟ್ಟಾದ ನಿರ್ಮಾಪಕ ಕರಣ್​ ಜೋಹರ್
Image
ಕರಣ್​ ಜೋಹರ್​ ಬರ್ತ್​ಡೇ ಪಾರ್ಟಿಗೆ ಬಂದ 55 ಮಂದಿಗೆ ಕೊರೊನಾ ಪಾಸಿಟಿವ್​? ಶಾಕಿಂಗ್​ ಸುದ್ದಿ ವೈರಲ್​
Image
‘ಬಾಡಿಗಾರ್ಡ್ಸ್​ ಇಲ್ಲದೇ ಬನ್ನಿ’​ ಎಂದು ರಶ್ಮಿಕಾಗೆ ಕರಣ್​ ಜೋಹರ್​ ಆಹ್ವಾನ: ನಂತರ ಏನಾಯ್ತು?
Image
‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

ಒಂದು ವೇಳೆ ಬಾಲಿವುಡ್​ನವರು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ದರೆ ವಿಮರ್ಶಕರ ಕಟುವಾದ ಟೀಕೆಯಿಂದ ಸಿನಿಮಾ ಸೋಲುತ್ತಿತ್ತು. ಹಿಂದಿ ಚಿತ್ರರಂಗದವರಿಗೆ ವಿಮರ್ಶಕರು ಹೆಚ್ಚು ಸ್ವಾತಂತ್ರ್ಯ ನೀಡಿಲ್ಲ ಎಂಬುದು ಕರಣ್​ ಜೋಹರ್​ ಅವರ ಅಭಿಪ್ರಾಯ. ಅದನ್ನು ಅವರು ಈ ರೀತಿಯಾಗಿ ಹೇಳಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ.

‘ಕೆಜಿಎಫ್​: ಚಾಪ್ಟರ್​ 2’ ತಂಡದ ಜೊತೆ ಕರಣ್​ ಜೋಹರ್​ ಅವರು ತುಂಬ ಆತ್ಮೀಯತೆ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಈ ಸಿನಿಮಾದ ಟ್ರೇಲರ್​ ಲಾಂಚ್​ ಆದಾಗ ಕರಣ್​ ಜೋಹರ್​ ಅವರೇ ಬಂದು ನಿರೂಪಣೆ ಮಾಡಿದ್ದರು. ಸದ್ಯ ಅವರು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ 6 ವರ್ಷಗಳ ಬಳಿಕ ಕರಣ್​ ಜೋಹರ್​ ಅವರು ನಿರ್ದೇಶಕನ ಕ್ಯಾಪ್​ ಧರಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:35 am, Sun, 19 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ