‘ಬಾಡಿಗಾರ್ಡ್ಸ್​ ಇಲ್ಲದೇ ಬನ್ನಿ’​ ಎಂದು ರಶ್ಮಿಕಾಗೆ ಕರಣ್​ ಜೋಹರ್​ ಆಹ್ವಾನ: ನಂತರ ಏನಾಯ್ತು?

‘ಬಾಡಿಗಾರ್ಡ್ಸ್​ ಇಲ್ಲದೇ ಬನ್ನಿ’​ ಎಂದು ರಶ್ಮಿಕಾಗೆ ಕರಣ್​ ಜೋಹರ್​ ಆಹ್ವಾನ: ನಂತರ ಏನಾಯ್ತು?
ರಶ್ಮಿಕಾ ಮಂದಣ್ಣ, ಕರಣ್​ ಜೋಹರ್

Rashmika Mandanna: ಹಿಂದಿಯ ಹಲವು ಚಿತ್ರಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಆ ಮೂಲಕ ಅವರು ಬಾಲಿವುಡ್​ ಮಂದಿಗೆ ಹೆಚ್ಚು ಹತ್ತಿರ ಆಗುತ್ತಿದ್ದಾರೆ.

TV9kannada Web Team

| Edited By: Madan Kumar

May 29, 2022 | 3:32 PM

ಕರಣ್​ ಜೋಹರ್ (Karan Johar) ಅವರು ಬಾಲಿವುಡ್​ನ ಪ್ರಭಾವಿ ವ್ಯಕ್ತಿ. ಅನೇಕರಿಗೆ ಅವರೇ ಗಾಡ್​ ಫಾದರ್​. ಸ್ಟಾರ್​ ಕಿಡ್​ಗಳನ್ನು ಲಾಂಚ್​ ಮಾಡುವಲ್ಲಿ ಕರಣ್​ ಜೋಹರ್ ಫೇಮಸ್​. ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿರುವ ಅವರು ಹಲವರಿಗೆ ಅವಕಾಶ ನೀಡುತ್ತಾರೆ. ನಿರ್ದೇಶಕನಾಗಿ, ನಿರೂಪಕನಾಗಿಯೂ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಅವರು 50ನೇ ವರ್ಷಕ್ಕೆ ಕಾಲಿಟ್ಟರು. ಕರಣ್​ ಜೋಹರ್​ ಬರ್ತ್​ಡೇ (Karan Johar Birthday) ಪಾರ್ಟಿ ಎಂದರೆ ಬಿ-ಟೌನ್​ ಸೆಲೆಬ್ರಿಟಿಗಳ ಪಾಲಿಗೆ ಏನೋ ಒಂಥರಾ ಕ್ರೇಜ್​. ಪ್ರತಿ ವರ್ಷ ಅವರು ಭರ್ಜರಿಯಾಗಿ ಔಟಣ ಕೂಟ ಏರ್ಪಡಿಸುತ್ತಾರೆ. ಅದರಲ್ಲಿ ಅನೇಕ ಮಂದಿ ಸೆಲೆಬ್ರಿಟಿಗಳು ಭಾಗಿ ಆಗುತ್ತಾರೆ. ಈ ಬಾರಿ ನಟಿ ರಶ್ಮಿಕಾ ಮಂದಣ್ಣ ಅವರಿಗೂ ಈ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಆದರೆ ಕರಣ್​ ಜೋಹರ್​ ಒಂದು ಕಂಡೀಷನ್​ ಹಾಕಿದ್ದರು ಎನ್ನಲಾಗಿದೆ. ಏನದು? ಯಾವುದೇ ಬಾಡಿಗಾರ್ಡ್ಸ್​ ಇಲ್ಲದೇ ಈ ಪಾರ್ಟಿಗೆ ಬರಬೇಕು. ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಮಾತ್ರವಲ್ಲದೇ ಬಾಲಿವುಡ್​ನ ಎಲ್ಲ ಸೆಲೆಬ್ರಿಟಿಗಳಿಗೂ ಕರಣ್​ ಜೋಹರ್​ ಈ ಕಂಡೀಷನ್​ ಹಾಕಿದ್ದರು ಎಂದು ‘ಪಿಂಕ್​ ವಿಲ್ಲಾ’ ವೆಬ್​ಸೈಟ್​ ವರದಿ ಮಾಡಿದೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹೊರಗಡೆ ಹೋಗುವಾಗ ಬಾಡಿಗಾರ್ಡ್ಸ್​ ಇಟ್ಟುಕೊಳ್ಳುತ್ತಾರೆ. ಜನಜಂಗುಳಿ ಪ್ರದೇಶಗಳಲ್ಲಿ ಅಭಿಮಾನಿಗಳು ಮುಗಿಬೀಳುತ್ತಾರೆ ಎಂಬ ಕಾರಣಕ್ಕೆ ಬಾಡಿಗಾರ್ಡ್ಸ್​ ಇಲ್ಲದೇ ಯಾರೂ ಕೂಡ ವಿಶೇಷ ಸಮಾರಂಭಗಳಿಗೆ ತೆರಳುವುದಿಲ್ಲ. ಆದರೆ ಈ ಬಾರಿ ಕರಣ್​ ಜೋಹರ್​ ಅವರು ಎಲ್ಲರಲ್ಲೂ ಒಂದು ಮನವಿ ಮಾಡಿಕೊಂಡಿದ್ದರು. ಬಾಡಿಗಾರ್ಡ್ಸ್​ ಇಲ್ಲದೇ ಬಂದರೆ ವಾತಾವರಣ ಚೆನ್ನಾಗಿ ಇರುತ್ತದೆ ಎಂಬುದು ಅವರ ಅಭಿಪ್ರಾಯ. ಅವರ ಮನವಿಗೆ ಎಲ್ಲರೂ ಸ್ಪಂದಿಸಿದರು ಎನ್ನಲಾಗಿದೆ. ರಶ್ಮಿಕಾ ಮಂದಣ್ಣ, ಸಲ್ಮಾನ್​ ಖಾನ್​, ಶಾರುಖ್​ ಖಾನ್​ ಮುಂತಾದವರು ಕೂಡ ಅಂಗರಕ್ಷಕರನ್ನು ತಮ್ಮೊಂದಿಗೆ ಕರೆತರದೇ ಪಾರ್ಟಿಯಲ್ಲಿ ಪಾಲ್ಗೊಂಡರು ಎಂದು ವರದಿ ಪ್ರಕಟ ಆಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಖಂಡಿತಾ ಇಷ್ಟ ಆಗಲಿದೆ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ; ಕಾರಣ ಏನು?

ರಶ್ಮಿಕಾ ಮಂದಣ್ಣ ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್​ನಿಂದಲೂ ಅವರಿಗೆ ಹಲವು ಅವಕಾಶಗಳು ಹರಿದು ಬರುತ್ತಿವೆ. ‘ಮಿಷನ್​ ಮಜ್ನು’, ‘ಗುಡ್​ಬೈ’ ಚಿತ್ರಗಳಲ್ಲಿ ನಟಿಸುವ ಮೂಲಕ ಅವರು ಬಾಲಿವುಡ್​ ಮಂದಿಗೆ ಹೆಚ್ಚು ಹತ್ತಿರ ಆಗುತ್ತಿದ್ದಾರೆ. ಹಾಗಾಗಿ ಅವರಿಗೆ ಕರಣ್​ ಜೋಹರ್​ ಬರ್ತ್​ಡೇ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಇತ್ತ ದಕ್ಷಿಣ ಭಾರತದಲ್ಲೂ ರಶ್ಮಿಕಾ ತುಂಬ ಬ್ಯುಸಿ ಆಗಿದ್ದಾರೆ. ಅವರು ನಟಿಸುತ್ತಿರುವ ‘ಪುಷ್ಪ 2’ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮನೆ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada