ಪಾರ್ಟಿಯಲ್ಲಿ ಸಲ್ಮಾನ್​ ಖಾನ್​ ಕಂಡು ಗಂಡನಿಂದಲೇ ಅಂತರ ಕಾಯ್ದುಕೊಂಡ ಐಶ್ವರ್ಯಾ ರೈ?

ಶಾರುಖ್ ಖಾನ್, ಆಮಿರ್ ಖಾನ್​, ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ ಸೇರಿ ಅನೇಕರು ಈ ಪಾರ್ಟಿಗೆ ಆಗಮಿಸಿದ್ದರು. ಅಂತೆಯೇ ಸಲ್ಲು, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಕೂಡ ಈ ಪಾರ್ಟಿಯಲ್ಲಿ ಸೇರಿದ್ದರು.

ಪಾರ್ಟಿಯಲ್ಲಿ ಸಲ್ಮಾನ್​ ಖಾನ್​ ಕಂಡು ಗಂಡನಿಂದಲೇ ಅಂತರ ಕಾಯ್ದುಕೊಂಡ ಐಶ್ವರ್ಯಾ ರೈ?
ಐಶ್ವರ್ಯಾ-ಅಭಿಷೇಕ್​-ಸಲ್ಲು
Follow us
| Edited By: Rajesh Duggumane

Updated on: May 29, 2022 | 8:14 AM

ಐಶ್ವರ್ಯಾ ರೈ (Aishwarya Rai) ಹಾಗೂ ಸಲ್ಮಾನ್ ಖಾನ್ ಒಂದು ಕಾಲದಲ್ಲಿ ಒಟ್ಟಾಗಿ ಸುತ್ತಾಡಿದ್ದರು. ಇಬ್ಬರ ನಡುವೆ ಪ್ರೀತಿ ಮೊಳೆತಿತ್ತು. ಆದರೆ, ಇದು ಮದುವೆವರೆಗೆ ಹೋಗಲೇ ಇಲ್ಲ. ಇಬ್ಬರ ಪ್ರೀತಿ ಅರ್ಧದಲ್ಲೇ ಕಟ್ ಆಯಿತು. ಇದಕ್ಕೆ ಕಾರಣ ಏನು ಎಂಬುದು ಇನ್ನೂ ನಿಗೂಢ. ಸಲ್ಮಾನ್ ಖಾನ್ ಇನ್ನೂ ಬ್ಯಾಚುಲರ್. ಐಶ್ವರ್ಯಾ ರೈ ಅವರು ಅಭಿಷೇಕ್ ಬಚ್ಚನ್ (Abhishek Bachchan) ಅವರನ್ನು ಮದುವೆ ಆಗಿದ್ದಾರೆ. ಅವರಿಗೆ ಆರಾಧ್ಯ ಹೆಸರಿನ ಮಗಳು ಇದ್ದಾಳೆ. ಸಲ್ಮಾನ್ ಹಾಗೂ ಐಶ್ವರ್ಯಾ ಒಂದೇ ಇಂಡಸ್ಟ್ರಿಯಲ್ಲಿ ಇರುವವರು. ಈ ಕಾರಣಕ್ಕೆ ಇಬ್ಬರೂ ಅನೇಕಬಾರಿ ಎದುರಾಗುವು ಪರಿಸ್ಥಿತಿ ಬಂದೊದಗುತ್ತದೆ. ಇತ್ತೀಚೆಗೆ ನಡೆದ ಕರಣ್ ಜೋಹರ್ (Karan Johar) ಪಾರ್ಟಿಯಲ್ಲೂ ಹಾಗೆಯೇ ಆಗಿದೆ. ಸಲ್ಲುನ ಕಂಡು ಐಶ್ವರ್ಯಾ ಮುಜುಗರಕ್ಕೆ ಒಳಗಾದರು ಎಂದು ವರದಿ ಆಗಿದೆ.

ಮೇ 25ರಂದು ಕರಣ್ ಜೋಹರ್ ಬರ್ತ್​​ಡೇ ಆಚರಿಸಿಕೊಂಡರು. ಇದು ಅವರ 50ನೇ ವರ್ಷದ ಬರ್ತ್​ಡೇ ಆದ್ದರಿಂದ ದೊಡ್ಡ ಮಟ್ಟದಲ್ಲೇ ಪಾರ್ಟಿ ಇತ್ತು. ಬಹುತೇಕ ಬಾಲಿವುಡ್​ ಸೆಲೆಬ್ರಿಟಿಗಳು ಇಲ್ಲಿ ಹಾಜರಿ ಹಾಕಿದ್ದರು. ಶಾರುಖ್ ಖಾನ್, ಆಮಿರ್ ಖಾನ್​, ವಿಜಯ್​ ದೇವರಕೊಂಡ, ರಶ್ಮಿಕಾ ಮಂದಣ್ಣ ಸೇರಿ ಅನೇಕರು ಈ ಪಾರ್ಟಿಗೆ ಆಗಮಿಸಿದ್ದರು. ಅಂತೆಯೇ ಸಲ್ಲು, ಐಶ್ವರ್ಯಾ ರೈ, ಅಭಿಷೇಕ್ ಬಚ್ಚನ್ ಕೂಡ ಈ ಪಾರ್ಟಿಯಲ್ಲಿ ಸೇರಿದ್ದರು.

ಇದನ್ನೂ ಓದಿ: 1992ರಲ್ಲಿ ಐಶ್ವರ್ಯಾ ರೈ ಪಡೆದ ಸಂಭಾವನೆ ಎಷ್ಟು? ನೀವು ಅಚ್ಚರಿ ಪಡೋದು ಗ್ಯಾರಂಟಿ  

ಇದನ್ನೂ ಓದಿ

ಅಭಿಷೇಕ್ ಹಾಗೂ ಐಶ್ವರ್ಯಾ ರಾತ್ರಿ 12.30ಕ್ಕೆ ಪಾರ್ಟಿಗೆ ಬಂದಿದ್ದಾರೆ. 1.15ರ ಸುಮಾರಿಗೆ ಸಲ್ಲು ಎಂಟ್ರಿ ಆಗಿದೆ. ಸಲ್ಮಾನ್ ಕಂಡ ತಕ್ಷಣ ಅಭಿಷೇಕ್ ಅವರು ಹೋಗಿ ಹಗ್ ಮಾಡಿದ್ದಾರೆ. ಈ ವೇಳೆ ಏನು ಮಾಡಬೇಕು ಎಂದು ತಿಳಿಯದ ಐಶ್ವರ್ಯಾ ಅವರು, ಸಲ್ಮಾನ್ ಖಾನ್​ ಅವರಿಂದ ಅಂತರ ಕಾಯ್ದುಕೊಂಡರು. ಸಲ್ಲು ಹಾಗೂ ಅಭಿಷೇಕ್ ಇಬ್ಬರೂ ಒಟ್ಟಾಗಿ ಡ್ಯಾನ್ಸ್ ಮಾಡಿದರು. ಸಲ್ಮಾನ್ ಖಾನ್ ಇದ್ದಿದ್ದರಿಂದ ಪತಿಯ ಜತೆ ಇರಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ, ಸಲ್ಲು-ಅಭಿಷೇಕ್​ ಒಟ್ಟಿಗೆ ಇರುವಷ್ಟು ಹೊತ್ತು ಪತಿಯಿಂದಲೂ ಅವರು ಅಂತರ ಕಾಯ್ದುಕೊಂಡು ದೂರ ನಿಂತಿದ್ದರು ಎಂದು ವರದಿ ಆಗಿದೆ.

ಇದನ್ನೂ ಓದಿ: ಕರಣ್ ಜೋಹರ್​ ಬರ್ತ್​ಡೇ ಪಾರ್ಟಿಯಲ್ಲಿ ಟೆಂಪ್ರೇಚರ್ ಹೆಚ್ಚಿಸಿದ ರಶ್ಮಿಕಾ

ಈ ಪಾರ್ಟಿಗೆ ಕತ್ರಿನಾ ಕೈಫ್ ಹಾಗೂ ರಣಬೀರ್ ಕಪೂರ್ ಕೂಡ ಬಂದಿದ್ದರು. ಇಬ್ಬರೂ ಈ ಮೊದಲು ಪ್ರೀತಿಯಲ್ಲಿದ್ದರು. ಆದರೆ, ಈಗ ಇಬ್ಬರಿಗೂ ಮದುವೆ ಆಗಿದೆ. ತಮ್ಮದೇ ಸಂಸಾರದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ, ಇಬ್ಬರೂ ಮುಖಾಮುಖಿ ಆದರೂ ಒಬ್ಬರಿಗೊಬ್ಬರು ಮಾತನಾಡಲಿಲ್ಲ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ