Viral Video: 50ರ ಹುಟ್ಟುಹಬ್ಬದ ಸಂಭ್ರಮಾಚರಣೆ, ನಿರ್ಮಾಪಕ ಕರಣ್ ಜೋಹರ್ ಡಾನ್ಸ್ ವಿಡಿಯೋ ವೈರಲ್

Viral Video: 50ರ ಹುಟ್ಟುಹಬ್ಬದ ಸಂಭ್ರಮಾಚರಣೆ, ನಿರ್ಮಾಪಕ ಕರಣ್ ಜೋಹರ್ ಡಾನ್ಸ್ ವಿಡಿಯೋ ವೈರಲ್
ಕರಣ್ ಜೋಹರ್

ತಮ್ಮ 50ನೇ ಹುಟ್ಟುಹಬ್ಬದ ಸಂಭ್ರದಲ್ಲಿ ನಿರ್ದೇಶಕ ಕರಣ್ ಜೋಹರ್ ಅವರು ಸಂಭ್ರಮಾಚರಣೆ ಆಯೋಜಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ವೇಳೆ ಅವರು ಡಾನ್ಸ್ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ.

TV9kannada Web Team

| Edited By: Rakesh Nayak

May 27, 2022 | 8:56 AM

ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಎರಡು ದಿನ ಹಿಂದೆ ತಮ್ಮ ಹುಟ್ಟುಹಬ್ಬ (Birthday)ವನ್ನು ಆಚರಿಸಿದ್ದರು. ಇದೀಗ ಅದೇ ಸಂಭ್ರಮದಲ್ಲಿ ಮಾಡಿದ ಡಾನ್ಸ್ (Dance) ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಲು ಪ್ರಾರಂಭವಾಗಿದೆ. ಅಷ್ಟಕ್ಕೂ ಈ ಡಾನ್ಸ್ ಮಾಡಿರುವುದು 50ನೇ ಹುಟ್ಟುಹಬ್ಬದ ಪ್ರಯುಕ್ತ ಸ್ವತಃ ಅವರೇ ಸಂಭ್ರಮಾಚರಣೆಯನ್ನು ಆಯೋಜಿಸಿದ್ದರು. ಈ ವೇಳೆ ಬಾಲಿವುಡ್ ನಟ-ನಟಿಯರು ಮುಂತಾದವರು ಆಗಮಿಸಿದ್ದರು. ಅಲ್ಲದೆ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಗೋವಿಂದ ನಾಮ್ ಮೇರಾ, ಜಗ್ ಜಗ್ ಜೀಯೋ ಫಿಲ್ಮ್ಸ್, ಲಿಗರ್, ಬ್ರಹ್ಮಾಸ್ತ್ರ ಮತ್ತು ಯೋಧಾ ಸೇರಿದಂತೆ ಮುಂಬರುವ ಚಿತ್ರಗಳ ತಂಡವೂ ಭಾಗಿಯಾಗಿತ್ತು.

ಯಾರೂ ನೋಡದ ಹಾಗೆ ನೃತ್ಯ ಮಾಡಲು ಇಷ್ಟಪಡುವ ಕರಣ್ ಜೋಹರ್, ತಮ್ಮ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಆಯೋಜಿಸಿದ ಸಂಭ್ರಮಾಚರಣೆಯಲ್ಲಿ ಡಾಫ್ಲಿವಾಲೆ ಸಾಂಗ್​ಗೆ ಸ್ಟೆಪ್ ಹಾಕಿದ್ದಾರೆ. ಇವರೊಂದಿಗೆ ನೀತಾ ಕಪೂರ್ (Neetu Kapoor) ಅವರೂ ಸೇರಿಕೊಂಡು ಕುಣಿದು ಸಂಭ್ರಮಿಸಿದ್ದಾರೆ. ರಣಬೀರ್ ಅವರ ತಾಯಿ ನೀತು ಕಪೂರ್ ಕೂಡ ಜಗ್ ಜಗ್ ಜೀಯೋ ಶೀರ್ಷಿಕೆಯ ಧರ್ಮ ಪ್ರೊಡಕ್ಷನ್ಸ್ ಬೆಂಬಲಿತ ಯೋಜನೆಯಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ: Trending: ಕಾಫಿ ಬೀಜಗಳ ಮೇಲೆ ಎಚ್ಚರಿಕೆಯಿಂದ ಕಣ್ಣಾಡಿಸಿ, ಈಗ ನೀವು ಏನನ್ನು ಗುರುತಿಸಿದ್ದೀರಾ?

ಕರಣ್ ಜೋಹರ್ ಜೊತೆ ಡಾನ್ಸ್ ಮಾಡಿದ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ನೀತು ಕಪೂರ್, ನನ್ನ ನೆಚ್ಚಿನ ಕರಣ್ ಜೋಹರ್ ಅವರೊಂದಿಗೆ ಡಾಫ್ಲಿವಾಲೆ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಡಾಫ್ಲಿವಾಲೆ ಹಾಡು ಇಲ್ಲಿ ವಿಶೇಷ ಏಕೆಂದರೆ, ಕರಣ್ ಜೋಹರ್ ಅವರು 2012ರಲ್ಲಿ ನಿರ್ದೇಶಿಸಿದ ಸ್ಟೂಡೆಂಟ್ ಆಫ್ ದಿ ಇಯರ್‌ ಸಿನಿಮಾದಲ್ಲಿ ನೀತು ಕಪೂರ್ ಅವರ ದಿವಂಗತ ಪತಿ ರಿಷಿ ಕಪೂರ್ ಹಾಡಿನಲ್ಲಿ ನಟಿಸಿದ್ದರು.

ಕರಣ್ ಜೋಹರ್ ಅವರ ಅಭಿಮಾನಿಗಳ ತಂಡವೊಂದು ಅವರ ನೃತ್ಯದ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಚಲಿಸುವ ವೇಳೆಯೇ ಮುರಿದು ಬಿದ್ದ Ola S1 Pro ಎಲೆಕ್ಟ್ರಿಕ್ ಸ್ಕೂಟರ್​ನ ಮುಂಭಾಗ | ಫೋಟೋ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada