AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending: ಚೆಂಡು ಕಳೆದುಕೊಂಡು ದುಃಖಿತವಾಗಿರುವ ಮುದ್ದಿನ ಶ್ವಾನವನ್ನು ಸಮಾಧಾನ ಮಾಡುತ್ತಿರುವ ವಿಡಿಯೋ ವೈರಲ್

ಪಾರ್ಕ್​ನಲ್ಲಿ ಆಡುತ್ತಿದ್ದಾಗ ಚೆಂಡು ಕಳೆದುಕೊಂಡ ಮುದ್ದಿನ ಸಾಕುನಾಯಿಯನ್ನು ಮಾಲೀಕ ಸಮಾಧಾನ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಸೂರೆಗೊಳಿಸುತ್ತಿದೆ.

Trending: ಚೆಂಡು ಕಳೆದುಕೊಂಡು ದುಃಖಿತವಾಗಿರುವ ಮುದ್ದಿನ ಶ್ವಾನವನ್ನು ಸಮಾಧಾನ ಮಾಡುತ್ತಿರುವ ವಿಡಿಯೋ ವೈರಲ್
ದುಃಖಿತವಾಗಿರುವ ನಾಯಿಯನ್ನು ಸಮಧಾನ ಮಾಡುತ್ತಿರುವುದುImage Credit source: Instagram
Follow us
TV9 Web
| Updated By: Rakesh Nayak Manchi

Updated on:May 27, 2022 | 9:52 AM

ಮೂಕ ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿದರೆ ಅದು ಕೂಡ ಮನಷ್ಯರಂತೆ ವರ್ತಿಸುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಇದಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳನ್ನು ಕಾಣಬಹುದು. ಪ್ರಾಣಿಗಳಿಗೂ ಭಾವನೆಗಳಿವೆ. ಅವುಗಳು ಭಾವನೆಯನ್ನು ಪ್ರೀತಿಪಾತ್ರರಲ್ಲಿ ತೋರಿಸಿಕೊಳ್ಳುತ್ತವೆ. ಅದರಂತೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದ್ದು, ಶ್ವಾನ ಪ್ರಿಯರ ಹೃದಯ ಕರಗುವಂತಿದೆ. ಗೋಲ್ಡನ್ ರಿಟ್ರೈವರ್ (golden retriever) ನಾಯಿಗಳು ಫ್ಯಾಮಿಲಿ ಡಾಗ್ (Family Dog)​ಗಳು. ಇವುಗಳು ಎಲ್ಲರೊಂದಿಗೂ ಪ್ರೀತಿಯಿಂದ ನಡೆದುಕೊಳ್ಳುತ್ತದೆ. ಈ ನಾಯಿಗೆ ಸಂಬಂಧಿಸಿದ ವಿಡಿಯೋ (Video)ವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಎಲ್ಟನ್ ಉದ್ಯಾನವನದಲ್ಲಿ ಆಡುತ್ತಿದ್ದಾಗ ನಾಯಿ ಚೆಂಡನ್ನು ಕಳೆದುಕೊಂಡಿದೆ. ಇದರಿಂದ ಆ ನಾಯಿ ತುಂಭಾ ದುಃಖಿತವಾಗಿದ್ದು, ಸಣ್ಣ ಮಕ್ಕಳಂತೆ ಬೇಸರ ಮಾಡಿಕೊಂಡು ಕೂತಿದೆ. ಈ ನಾಯಿಯನ್ನು ಮಾಲೀಕ, ತನ್ನ ಮಡಿಲಿನಲ್ಲಿ ಮಲಗಿಸಿಕೊಂಡು ಸಮಾಧಾನ ಮಾಡಿದ್ದಾರೆ. ಬೇಸರದಲ್ಲಿರುವ ನಾಯಿಯ ತಲೆ ಸವರುತ್ತಾ, ಚುಂಬಿಸುತ್ತಾ ಸಮಾಧಾನ ಮಾಡುತ್ತಿರುವ ವಿಡಿಯೋ ಶ್ವಾನ ಪ್ರಿಯರ ಮನಸು ಕರಗುವಂತೆ ಮಾಡುತ್ತಿದೆ. ಈ ವಿಡಿಯೋ ಬಹಳಷ್ಟು ಮೆಚ್ಚುಗೆಯನ್ನೂ ಪಡೆದುಕೊಂಡಿದೆ.

ಇದನ್ನೂ ಓದಿ: Viral Video: 50ರ ಹುಟ್ಟುಹಬ್ಬದ ಸಂಭ್ರಮಾಚರಣೆ, ನಿರ್ಮಾಪಕ ಕರಣ್ ಜೋಹರ್ ಡಾನ್ಸ್ ವಿಡಿಯೋ ವೈರಲ್

ಈ ವಿಡಿಯೋವನ್ನು ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಲಾಗಿದ್ದು, ಸುಮಾರು 4,000ಕ್ಕೂ ಹೆಚ್ಚು ಮೆಚ್ಚುಗೆಗಳು ವ್ಯಕ್ತವಾಗಿವೆ. ಕಾಮೆಂಟ್​ ಬಾಕ್ಸ್​ನಲ್ಲಿ ನೆಟ್ಟಿಗರು, ಆ ನಾಯಿಗೆ ಹೊಸ ಚೆಂಡು ಖರೀದಿಸುವಂತೆ ಸೂಚಿಸಿದ್ದಾರೆ. ಇನ್ನೊಂದಷ್ಟು ಮಂದಿ ಆ ನಾಯಿಯನ್ನು ತಾವು ಕೂಡ ಅಪ್ಪುಗೆ ನೀಡಲು ಬಯಸುತ್ತೇವೆ ಎಂದಿದ್ದಾರೆ.

ವಾರಗಳ ಹಿಂದೆ ಇಂತಹದ್ದೇ ನಾಯಿಯಿಂದು, ತಾನು ಆಡುತ್ತಿದ್ದ ಆಟಿಕೆಯನ್ನು ಅಜ್ಜಿ ಸರಿಪಡಿಸಿಕೊಡುವವರೆಗೂ ಶಾಂತವಾಗಿ ಇದ್ದುಕೊಂಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಸೂರೆಗೊಳಿಸಿತ್ತು.

ಇದನ್ನೂ ಓದಿ: Trending: ದ್ವಿಚಕ್ರ ವಾಹನದಲ್ಲಿ ಆರು ಮಂದಿಯ ಸಂಚಾರ: ರೂಲ್ಸ್ ಬ್ರೇಕರ್ಸ್​ ಯುವಕರ ದುಸ್ಸಾಹಸದ ವಿಡಿಯೋ ವೈರಲ್

ಇದನ್ನೂ ಓದಿ: Karnataka Rain Photos: ಕರ್ನಾಟಕದಲ್ಲಿ ವಿವಿಧ ಜಿಲ್ಲೆಗಳ ಮಳೆ ಅವಾಂತರ ಫೋಟೋಗಳು ಇಲ್ಲಿವೆ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:42 am, Fri, 27 May 22

ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ
ಮಾಕ್​ಡ್ರಿಲ್: ಬೆಂಗಳೂರಿನಲ್ಲಿ ಮೊಳಗಿದ ಸೈರನ್ ಶಬ್ಧ, ನೀವು ಕೇಳಿಸಿಕೊಳ್ಳಿ