AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಹೆಂಡತಿ ಮಾರಾಟಕ್ಕಿದ್ದಾಳೆ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ಗಂಡ; ಪತ್ನಿ ಮಾಡಿದ್ದೇನು?

ಏಪ್ರಿಲ್‌ನಲ್ಲಿ ಸಾರಾ ರಜೆಗೆ ಊರಿಗೆ ಹೋಗಿದ್ದಾಗ ತಮಾಷೆಗಾಗಿ ಆಕೆಯ ಗಂಡ ರಾಬಿ ಫೇಸ್​ಬುಕ್​ನಲ್ಲಿ ವೈಫ್ ಫಾರ್ ಸೇಲ್ ಎಂದು ಪೋಸ್ಟ್​ ಮಾಡಿದ್ದ. ಮೋಜಿಗಾಗಿ ಆತ ಹಾಕಿದ ಈ ಪೋಸ್ಟ್​ ಭಾರೀ ವೈರಲ್ ಆಗಿತ್ತು.

Viral News: ಹೆಂಡತಿ ಮಾರಾಟಕ್ಕಿದ್ದಾಳೆ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ಗಂಡ; ಪತ್ನಿ ಮಾಡಿದ್ದೇನು?
ಹೆಂಡತಿ ಮಾರಾಟಕ್ಕಿದ್ದಾಳೆ ಎಂದು ಫೇಸ್​ಬುಕ್​ನಲ್ಲಿ ಹಾಕಿರುವ ಪೋಸ್ಟ್Image Credit source: times now
TV9 Web
| Edited By: |

Updated on: May 26, 2022 | 6:03 PM

Share

ಗಂಡ-ಹೆಂಡತಿ ನಡುವೆ ಜಗಳಗಳು, ಮುನಿಸು ಸಾಮಾನ್ಯ. ಆದರೆ, ಇಲ್ಲೊಬ್ಬ ಕಿಡಿಗೇಡಿ ಗಂಡ ತನ್ನ ಪತ್ನಿ ರಜೆಗೆ ಬೇರೆ ಊರಿಗೆ ಹೋಗಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ (Social Media)  ‘ನನ್ನ ಹೆಂಡತಿ ಮಾರಾಟಕ್ಕಿದ್ದಾಳೆ’ ಎಂದು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದ. ರಾಬಿ ಮೆಕ್‌ಮಿಲ್ಲೆನ್ ಎಂಬ 38 ವರ್ಷದ ವ್ಯಕ್ತಿ ಮತ್ತು 39 ವರ್ಷದ ಅವರ ಪತ್ನಿ ಸಾರಾಗೆ ಮದುವೆಯಾಗಿ 20 ವರ್ಷವಾಗಿತ್ತು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ಏಪ್ರಿಲ್‌ನಲ್ಲಿ ಸಾರಾ ರಜೆಗೆ ಊರಿಗೆ ಹೋಗಿದ್ದಾಗ ತಮಾಷೆಗಾಗಿ ಆಕೆಯ ಗಂಡ ರಾಬಿ ಫೇಸ್​ಬುಕ್​ನಲ್ಲಿ ವೈಫ್ ಫಾರ್ ಸೇಲ್ ಎಂದು ಪೋಸ್ಟ್​ ಮಾಡಿದ್ದ. ಮೋಜಿಗಾಗಿ ಆತ ಹಾಕಿದ ಈ ಪೋಸ್ಟ್​ ಭಾರೀ ವೈರಲ್ ಆಗಿತ್ತು. ಅದರಲ್ಲಿ ಸಾರಾಳ ಫೋಟೋವನ್ನು ಕೂಡ ಹಾಕಲಾಗಿತ್ತು.

ಇದನ್ನೂ ಓದಿ
Image
ಶೌಚಾಲಯಕ್ಕೆ ತೆರಳಿದಾಗ ಕಚ್ಚಿದ ಹಾವು ; ಟ್ವೀಟ್ ಮೂಲಕ ಘಟನೆ ಹಂಚಿಕೊಂಡ ಯುವಕ
Image
Viral Video: 6ನೇ ಮಹಡಿಯ ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ಕಾಪಾಡಲು ಬರಿಗೈಯಲ್ಲಿ ಕಟ್ಟಡ ಹತ್ತಿದ ಯುವಕ; ವಿಡಿಯೋ ವೈರಲ್
Image
Viral News: ಬಕೆಟ್​ಗೂ ಒಂದು ಕಾಲ; ಅಮೆಜಾನ್​ನಲ್ಲಿ ಸೇಲ್​ಗಿದೆ 25,999 ರೂ. ಬೆಲೆಯ ಪ್ಲಾಸ್ಟಿಕ್ ಬಕೆಟ್!

“ನನ್ನ ಪತ್ನಿ ಮಾರಾಟಕ್ಕಿದ್ದಾಳೆ. ಆಕೆಯ ಕಂಡೀಷನ್ ಚೆನ್ನಾಗಿದೆ. ಉತ್ತಮ ಹೆಡ್‌ಲೈಟ್‌ಗಳು, ಫ್ಲಿಪ್ ಪೇಂಟ್‌ವರ್ಕ್, ವಾರದಲ್ಲಿ ಬಿಳಿ ಬಣ್ಣದಿಂದ ವಾರಾಂತ್ಯದಲ್ಲಿ ಕಿತ್ತಳೆ ಬಣ್ಣಕ್ಕೆ ಬದಲಾಗುತ್ತದೆ. ಸ್ವಲ್ಪ ಕೆಟ್ಟ ವಾಸನೆಯನ್ನು ಹೊಂದಿದ್ದಾಳೆ. ಪ್ರತಿದಿನ ಬೆಳಿಗ್ಗೆ ನೀವು ಕಿಟಕಿ ತೆರೆದಾಗ ಆ ವಾಸನೆ ದೂರ ಹೋಗುತ್ತದೆ.” ಎಂದು ತಮಾಷೆಯಾಗಿ ಅವರು ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: Viral News: ದಾಖಲೆಯ 1,100 ಕೋಟಿಗೆ ಹರಾಜಾಯ್ತು 67 ವರ್ಷ ಹಿಂದಿನ ಮರ್ಸಿಡಿಸ್ ಬೆಂಜ್!

ಆದರೆ, ಆ ಫೇಸ್​ಬುಕ್​ನಲ್ಲಿ ತನ್ನ ಹೆಂಡತಿಯ ಬೆಲೆಯನ್ನು ಅವರು ನಮೂದಿಸಿಲ್ಲ. ಕಾನೂನು ಸಮಸ್ಯೆಗಳನ್ನು ತಪ್ಪಿಸಲು ಆತ ಬೇಕೆಂದೇ ದರವನ್ನು ಹಾಕಿರಲಿಲ್ಲ. ಆ ಪೋಸ್ಟ್​ ನೋಡಿದ ಸಾರಾ ತನ್ನ ಗಂಡನ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿದಳು. “ಅವನು ಹಾಕಿದ ಪೋಸ್ಟ್ ನೋಡಿದಾಗ ನಾನು ನಕ್ಕಿದ್ದೇನೆ. ಏಕೆಂದರೆ ಅವನು ಯಾವಾಗಲೂ ಅಂತಹ ಕೆಲಸಗಳನ್ನು ಮಾಡುತ್ತಾ ಇರುತ್ತಾನೆ. ಅವನು ಸ್ವಲ್ಪ ಚೇಷ್ಟೆಗಾರ. ಬಹುಶಃ ಅವನು ನನ್ನನ್ನು ಮಿಸ್ ಮಾಡಿದ್ದ ಎಂದೆನಿಸುತ್ತದೆ. ನಾವು ಬಹಳ ಸಮಯದಿಂದ ಒಟ್ಟಿಗೆ ಇದ್ದೇವೆ. ನಾವು ಯಾವಾಗಲೂ ಮಾತನಾಡುತ್ತೇವೆ ಮತ್ತು ನಗುತ್ತೇವೆ, ನಾವು ಕೇವಲ ಉತ್ತಮ ಸ್ನೇಹಿತರಂತೆ ಇದ್ದೇವೆ ಎಂದು ಸಾರಾ ಕೂಡ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ