Viral News: ಬಕೆಟ್​ಗೂ ಒಂದು ಕಾಲ; ಅಮೆಜಾನ್​ನಲ್ಲಿ ಸೇಲ್​ಗಿದೆ 25,999 ರೂ. ಬೆಲೆಯ ಪ್ಲಾಸ್ಟಿಕ್ ಬಕೆಟ್!

ಈ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಬಕೆಟ್​​ಗೆ 25,999 ರೂ. ಇದೆ. ಅಂದಹಾಗೆ, ಈ ಬಕೆಟ್​ಗೆ ನಿಜವಾದ ಬೆಲೆ 35,900 ರೂ. ಆದರೆ, ಶೇ. 28ರಷ್ಟು ರಿಯಾಯಿತಿ ನೀಡಿ 25,999 ರೂ.ಗೆ ಈ ಬಕೆಟ್​ ಮಾರಲಾಗುತ್ತಿದೆ!

Viral News: ಬಕೆಟ್​ಗೂ ಒಂದು ಕಾಲ; ಅಮೆಜಾನ್​ನಲ್ಲಿ ಸೇಲ್​ಗಿದೆ 25,999 ರೂ. ಬೆಲೆಯ ಪ್ಲಾಸ್ಟಿಕ್ ಬಕೆಟ್!
ಅಮೆಜಾನ್​ನಲ್ಲಿ ಸೇಲ್​ಗಿರುವ ಬಕೆಟ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: May 25, 2022 | 1:39 PM

ಬೆಂಗಳೂರು: ಈಗ ಆನ್​ಲೈನ್ ಶಾಪಿಂಗ್ ಹೆಚ್ಚಾದ ಮೇಲೆ ಜನರು ಅಂಗಡಿಗೆ ಹೋಗಿ ವಸ್ತುಗಳನ್ನು ಖರೀದಿಸುವುದೇ ಕಡಿಮೆಯಾಗಿದೆ. ಆನ್​ಲೈನ್​ನಲ್ಲಿ (Online Offers) ಯಾವ ಆಫರ್​ ಇದೆ, ಏನೆಲ್ಲ ಆಯ್ಕೆಗಳಿವೆ ಎಂದು ನೋಡಲು ಸುಲಭವಾದ್ದರಿಂದ ಜನರು ಆನ್​ಲೈನ್​ನಲ್ಲಿಯೇ ವಸ್ತುಗಳನ್ನು ಖರೀದಿಸಲು ಹೆಚ್ಚು ಇಷ್ಟಪಡುತ್ತಾರೆ. ಕೆಲವು ದಿನಗಳ ಹಿಂದೆ ಆನ್​ಲೈನ್​ನಲ್ಲಿ ತೆಂಗಿನ ಚಿಪ್ಪಿಗೆ ಸಾವಿರಾರು ರೂ. ನಿಗದಿಯಾಗಿದ್ದು ಭಾರೀ ವೈರಲ್ ಆಗಿದೆ. ಸಾವಿರಾರು ರೂ. ಕೊಟ್ಟು ತೆಂಗಿನ ಚಿಪ್ಪು ಖರೀದಿಸುವಂತದ್ದು ಏನಿದೆ? ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಲೇವಡಿ ಮಾಡಿದ್ದರು. ಇದೀಗ ಪ್ಲಾಸ್ಟಿಕ್ ಬಕೆಟ್​ಗೆ ಅಮೆಜಾನ್​ನಲ್ಲಿ (Amazon) 25,999 ರೂ. ಬೆಲೆ ಹಾಕಿರುವುದು ಭಾರೀ ವೈರಲ್ ಆಗಿದೆ.

ಇತ್ತೀಚಿನ ದಿನಗಳಲ್ಲಿ ಹಲವಾರು ಐಷಾರಾಮಿ ವಸ್ತುಗಳನ್ನು ಭಾರಿ ಮೊತ್ತಕ್ಕೆ ಆನ್​ಲೈನ್​ನಲ್ಲಿ ಮಾರಾಟ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಪ್ಲಾಸ್ಟಿಕ್ ಬಕೆಟ್‌ಗೆ ಇಷ್ಟೊಂದು ದುಬಾರಿ ಬೆಲೆ ಇರುತ್ತದೆ ಎಂದು ನಾವು ಯಾರೂ ಊಹಿಸಿರಲಿಲ್ಲ. ಹೌದು, ಟ್ವಿಟರ್ ಬಳಕೆದಾರರು ಇತ್ತೀಚೆಗೆ ಅಮೆಜಾನ್‌ನಲ್ಲಿ ಹಾಕಲಾದ ಗುಲಾಬಿ ಬಣ್ಣದ ಪ್ಲಾಸ್ಟಿಕ್ ಬಕೆಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಬಕೆಟ್​​ಗೆ 25,999 ರೂ. ಇದೆ. ಅಂದಹಾಗೆ, ಈ ಬಕೆಟ್​ಗೆ ನಿಜವಾದ ಬೆಲೆ 35,900 ರೂ. ಆದರೆ, ಶೇ. 28ರಷ್ಟು ರಿಯಾಯಿತಿ ನೀಡಿ 25,999 ರೂ.ಗೆ ಈ ಬಕೆಟ್​ ಮಾರಲಾಗುತ್ತಿದೆ!

ನಾವು ತಮಾಷೆ ಮಾಡುತ್ತಿಲ್ಲ! ಇನ್ನೂ ಆಶ್ಚರ್ಯಕರ ವಿಷಯವೆಂದರೆ ಈ ಬಕೆಟ್​ ಈಗ ಔಟ್​ ಆಫ್​ ಸ್ಟಾಕ್​ ಆಗಿದೆ. ಇಷ್ಟು ದುಬಾರಿ ಹಣ ಕೊಟ್ಟು ಯಾರು ಬಕೆಟ್ ಖರೀದಿಸುತ್ತಾರೆ ಎಂಬುದು ನೆಟ್ಟಿಗರಿಗೆ ಆಶ್ಚರ್ಯ ಉಂಟುಮಾಡಿದೆ.

ಇದನ್ನೂ ಓದಿ: Viral News: ದಾಖಲೆಯ 1,100 ಕೋಟಿಗೆ ಹರಾಜಾಯ್ತು 67 ವರ್ಷ ಹಿಂದಿನ ಮರ್ಸಿಡಿಸ್ ಬೆಂಜ್!

ಈ ಐಟಂಗೆ “ಪ್ಲಾಸ್ಟಿಕ್ ಬಕೆಟ್ ಫಾರ್ ಹೋಮ್ ಅಂಡ್ ಬಾತ್‌ರೂಮ್” ಎಂದು ಹೆಸರಿಸಲಾಗಿದೆ. ಇ-ಕಾಮರ್ಸ್ ವೆಬ್‌ಸೈಟ್ ಅಮೆಜಾನ್​ನಲ್ಲಿ ಈ ಬಕೆಟ್ ಮಾರಾಟವಾಗುತ್ತಿದೆ. ಈ ಬಕೆಟ್​ಗೆ 1,224 ರೂ.ಗಳ ಇಎಂಐ ಆಯ್ಕೆಯನ್ನು ಕೂಡ ನೀಡಲಾಗಿದೆ. ಬಕೆಟ್ ಅನ್ನು ಕೂಡ ಇಎಂಐನಲ್ಲಿ ಖರೀದಿಸುವ ಕಾಲ ಬಂತಲ್ಲಪ್ಪ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ.

ಈ ಬಕೆಟ್ ಜೊತೆಗೆ ಪ್ಲಾಸ್ಟಿಕ್​ ಮಗ್​ಗಳ ಫೋಟೋ ಕೂಡ ವೈರಲ್ ಆಗಿದೆ. ಈ 2 ಪ್ಲಾಸ್ಟಿಕ್​ ಮಗ್​ಗೆ 9,914 ರೂ. ಬೆಲೆಯಿದೆ. ಇದರ ಮೂಲ ಬೆಲೆ 22,000 ರೂ. ಆದರೆ, ಶೇ. 55ರಷ್ಟು ರಿಯಾಯಿತಿ ನೀಡುವ ಮೂಲಕ ಈ ಮಗ್​ಗೆ 9,914 ರೂ. ಫಿಕ್ಸ್​ ಮಾಡಲಾಗಿದೆ. 50 ರೂ.ಗೆಲ್ಲ ಮಗ್ ಸಿಗುವಾಗ 9 ಸಾವಿರ ಕೊಟ್ಟು ಖರೀದಿ ಮಾಡುವಂಥದ್ದು ಏನಿದೆ? ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಮೆಜಾನ್​ನಲ್ಲಿ ಸೇಲ್​ಗಿರುವ ಮಗ್​ಗಳು

ಇದು ಮಾರಾಟಗಾರನ ಕಡೆಯಿಂದ ಕೆಲವು ರೀತಿಯ ಗ್ಲಿಚ್ ಆಗಿರಬೇಕು ಅಥವಾ ಖರೀದಿದಾರರನ್ನು ಆಕರ್ಷಿಸಲು ಮಾರ್ಕೆಟಿಂಗ್ ತಂತ್ರವಾಗಿರಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಏನೇ ಇರಲಿ, ಅಮೆಜಾನ್ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ಟ್ರೋಲ್ ಆಗುತ್ತಿದೆ. ಈ ವೆಚ್ಚದಲ್ಲಿ ಬಕೆಟ್ ನೀರನ್ನು ವೈನ್ ಆಗಿ ಪರಿವರ್ತಿಸಬೇಕು ಎಂದು ಟ್ವಿಟ್ಟರ್ ಬಳಕೆದಾರರು ತಮಾಷೆ ಮಾಡಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ