AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಫೋಟೋ ತೆಗೆಯುತ್ತಿದ್ದಾಗ ಬಾಲಕಿಗೆ ಸೊಂಡಿಲಿನಿಂದ ಹೊಡೆದ ಆಫ್ರಿಕನ್ ಆನೆ, ವಿಡಿಯೋ ವೈರಲ್

ಆಫ್ರಿಕಾ ಆನೆಯ ಫೋಟೋ ತೆಗೆಯುತ್ತಿದ್ದಾಗ ಉದ್ರೇಕಗೊಂಡ ಆನೆ ಬಾಲಕಿಗೆ ಸೊಂಡಿಲಿನಿಂದ ಹೊಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಫೋಟೋ ತೆಗೆಯುತ್ತಿದ್ದಾಗ ಬಾಲಕಿಗೆ ಸೊಂಡಿಲಿನಿಂದ ಹೊಡೆದ ಆಫ್ರಿಕನ್ ಆನೆ, ವಿಡಿಯೋ ವೈರಲ್
ಹುಡುಗಿಗೆ ಆಫ್ರಿಕಾ ಆನೆ ಹೊಡೆಯುತ್ತಿರುವುದು
TV9 Web
| Edited By: |

Updated on:May 24, 2022 | 7:11 PM

Share

ಮೃಗಾಲಯದಲ್ಲಿ ಪ್ರಾಣಿಗಳನ್ನು ವೀಕ್ಷಣೆ ಮಾಡಲು ಪ್ರವಾಸಿಗರು ಬರುವುದು ಸಾಮಾನ್ಯ. ಅದರೆ ಕೆಲವೊಮ್ಮೆ ನೋಡುನೋಡುತ್ತಲೇ ಪ್ರಾಣಿಗಳು ಪ್ರವಾಸಿಗರ ಮೇಲೆ ದಾಳಿ ನಡೆಸುತ್ತವೆ. ಇಂಥ ಘಟನೆಗಳು ಈ ಹಿಂದೆ ಹಲವು ಬಾರಿ ನಡೆದಿರುವುದನ್ನು ನೋಡಿದ್ದೇವೆ. ಇದೀಗ ಆಫ್ರಿಕಾ ಆನೆ (African Elephant)ಯ ಫೋಟೋ ತೆಗೆಯುತ್ತಿದ್ದಾಗ ಬಾಲಕಿಗೆ ಆನೆ ಸೊಂಡಿಲಿನಿಂದ ಹೊಡೆದ ಘಟನೆ ನಡೆದಿದೆ. ಇದರ ವಿಡಿಯೋ (Video) ಮೊಬೈಲ್​ನಲ್ಲಿ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಇರುವಂತೆ, ಆನೆಯ ಆವರಣದ ಹೊರಗೆ ಜನರ ಗುಂಪೊಂದು ನಿಂತಿರುತ್ತದೆ. ಇದರಲ್ಲಿ ಕೆಲವರು ಆನೆಯ ಸೊಂಡಿಲು ಮುಟ್ಟಲು ಪ್ರಯತ್ನಿಸುತ್ತಾರೆ. ಒಂದು ಹುಡುಗಿ ತನ್ನ ಮೊಬೈಲ್ ಮೂಲಕ ಆನೆಯ ಫೋಟೋ ಕ್ಲಿಕ್ ಮಾಡಲು ಮುಂದಾಗುತ್ತಾಳೆ. ಆರಂಭದಲ್ಲಿ ಸುಮ್ಮನಿದ್ದ ಆನೆ, ನಂತರ ಉದ್ರೇಕಗೊಂಡು ಆಕ್ರಮಣಕಾರಿಯಾಗಿ ತಿರುಗಿ ಸೊಂಡಿಲಿನಿಂದ ಹುಡುಗಿಗೆ ಹೊಡೆಯುತ್ತದೆ.

ಇದನ್ನೂ ಓದಿ: ಮಧುರಾ ಪಿಸು ಮಾತಿಗೆ ಹಾಡು ಹೇಳುತ್ತಾ ಹೆಜ್ಜೆ ಹಾಕಿದ ಉತ್ತರ ಕನ್ನಡ ಜಿಲ್ಲಾಧಿಕಾರಿ; ವಿಡಿಯೋ ವೈರಲ್

ಕೆಲವೊಂದು ಪ್ರಾಣಿಗಳು ಸ್ನೇಹಪರವಾಗಿದ್ದರೂ, ಕೆಲವೊಮ್ಮೆ ರೊಚ್ಚಿಗೇಳುತ್ತವೆ. ಮೃಗಾಲಯದಲ್ಲಿ ಫೋಟೋ ಕ್ಲಿಕ್ಕಿಸುವುದು, ವಿಡಿಯೋ ಮಾಡುವುದು, ಚೇಷ್ಠೆ ಮಾಡುವುದು ಕೆಲವೊಂದು ಪ್ರಾಣಿಗಳಿಗೆ ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಅವುಗಳು ದಾಳಿ ನಡೆಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಭಾರತದಲ್ಲಿ ವಿದೇಶಿ ಪ್ರಾಣಿಗಳಿಗೆ ಹೆಚ್ಚಿದ ಬೇಡಿಕೆ: ಭಾರತದಲ್ಲೂ ಪತ್ತೆಯಾಯ್ತು ಕಾಂಗರೂಗಳು, ವಿಡಿಯೋ ವೈರಲ್,

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Tue, 24 May 22