ಭಾರತದಲ್ಲಿ ವಿದೇಶಿ ಪ್ರಾಣಿಗಳಿಗೆ ಹೆಚ್ಚಿದ ಬೇಡಿಕೆ: ಭಾರತದಲ್ಲೂ ಪತ್ತೆಯಾಯ್ತು ಕಾಂಗರೂಗಳು, ವಿಡಿಯೋ ವೈರಲ್,

ಆಸ್ಟ್ರೇಲಿಯಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಂಗರೂಗಳು ಪಶ್ಚಿಮ ಬಂಗಾಳದ ಹಳ್ಳಿಯೊಂದರ ರಸ್ತೆಯೊಂದರಲ್ಲಿ ಕಂಡುಬಂದಿದೆ. ಅರಣ್ಯಾಧಿಕಾರಿಗಳು ಸೆರೆಹಿಡಿದ ಮೂರು ಕಾಂಗರೂಗಳನ್ನು ಚಿಕಿತ್ಸೆಗೆಂದು ವನ್ಯಜೀವಿ ಉದ್ಯಾನವನಕ್ಕೆ ರವಾನಿಸಿದ್ದು, ಅಲ್ಲಿ ಒಂದು ಕಾಂಗರೂ ಸಾವನ್ನಪ್ಪಿದೆ.

ಭಾರತದಲ್ಲಿ ವಿದೇಶಿ ಪ್ರಾಣಿಗಳಿಗೆ ಹೆಚ್ಚಿದ ಬೇಡಿಕೆ: ಭಾರತದಲ್ಲೂ ಪತ್ತೆಯಾಯ್ತು ಕಾಂಗರೂಗಳು, ವಿಡಿಯೋ ವೈರಲ್,
ಪತ್ತೆಯಾದ ಕಾಂಗರೂಗಳು
Follow us
TV9 Web
| Updated By: Rakesh Nayak Manchi

Updated on:May 24, 2022 | 4:17 PM

ಆಸ್ಟ್ರೇಲಿಯಾದಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಂಗರೂ (Kangaroo)ಗಳು ಭಾರತದಲ್ಲೂ ಪತ್ತೆಯಾಗಿದ್ದು, ಇದರ ವಿಡಿಯೋ ವೈರಲ್ (Video Viral) ಆಗುತ್ತಿದೆ. ಪಶ್ಚಿಮ ಬಂಗಾಳದ ಹಳ್ಳಿಯೊಂದರ ರಸ್ತೆಯೊಂದರಲ್ಲಿ ಮೂರು ಕಾಂಗರೂಗಳು ಪತ್ತೆಯಾಗಿವೆ. ಇದನ್ನು ನೋಡಿದ ಸ್ಥಳೀಯರು, ಅಚ್ಚರಿಗೊಂಡಿದ್ದಲ್ಲದೆ,  ಪಶ್ಚಿಮ ಬಂಗಾಳ ರಾಜ್ಯದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಮೂರು ಕಾಂಗರೂಗಳನ್ನು ಹಿಡಿದು ವನ್ಯಜೀವಿ ಉದ್ಯಾನವನಕ್ಕೆ ಚಿಕಿತ್ಸೆಗೆಂದು ರವಾನಿಸಿದ್ದಾರೆ. ನಂತರ ಒಂದು ಕಾಂಗರೂ ಸಾವನ್ನಪ್ಪಿದೆ.

ಈ ಬಗ್ಗೆ ಖಾಸಗಿ ಸುದ್ದಿಸಂಸ್ಥೆ ಬಿಬಿಸಿ ನ್ಯೂಸ್ ಜೊತೆ ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯ ವನ್ಯಜೀವಿ ವಾರ್ಡನ್ ಡೆಬಲ್ ರೇ, ”ಕೆಲವು ವಿದೇಶಿ ಪ್ರಾಣಿಗಳನ್ನು ರಾಜ್ಯಕ್ಕೆ ಕಳ್ಳಸಾಗಣಿಕೆ ಮಾಡಲಾಗುತ್ತಿದೆ ಎಂಬ ಸುಳಿವು ಲಭಿಸಿತ್ತು. ಕೂಡಲೇ ನಮ್ಮ ತಂಡ ಕಾರ್ಯಪ್ರವೃತ್ತರಾಗಿ ವಾಹನ ತಪಾಸಣೆ ನಡೆಸಲು ಆರಂಭಿಸಿದ್ದಾರೆ. ಈ ಸುದ್ದಿ ತಿಳಿದು ಕಳ್ಳಸಾಗಾಣೆಕೆದಾರರು ಕಾಂಗರೂಗಳನ್ನು ಹೆದ್ದಾರಿಯಲ್ಲಿ ಬಿಟ್ಟು ಕಾಲ್ಕಿತ್ತಿರಬಹುದು” ಎಂದಿದ್ದಾರೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಹೆಚ್ಚುತ್ತಿದೆ ಮಾನವ- ವನ್ಯಜೀವಿ ಸಂಘರ್ಷ; ಫೋಟೋ ತೆಗೆಯಲು ಮುಂದಾದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಚಿರತೆ

ಬಹುಶಃ ಈ ಪ್ರಾಣಿಗಳನ್ನು ಆಗ್ನೇಯ ಏಷ್ಯಾದ ಖಾಸಗಿ ಬ್ರೀಡಿಂಗ್ ಫಾರ್ಮ್‌ಗಳಿಂದ ರಾಜ್ಯಕ್ಕೆ ತರಲಾಗುತ್ತಿತ್ತು. ಕಳ್ಳಸಾಗಣೀಕೆದಾರರು ಮ್ಯಾನ್ಮಾರ್ ಮೂಲಕ ಭಾರತದ ಗಡಿ ರಾಜ್ಯಗಳಿಗೆ ತರುತ್ತಾರೆ ಎಂದು ಪ್ರಾದೇಶಿಕ ವನ್ಯಜೀವಿ ನಿಯಂತ್ರಣ ಬ್ಯೂರೋದ ಉಪ ನಿರ್ದೇಶಕ ಅಗ್ನಿ ಮಿತ್ರ ಹೇಳಿದ್ದಾರೆ.

ಭಾರತದ ಕಳ್ಳಸಾಗಣೆ ವಿರೋಧಿ ಗುಪ್ತಚರ ಸಂಸ್ಥೆ, ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಸುದ್ದಿಸಂಸ್ಥೆಗೆ ನೀಡಿದ ಮಾಹಿತಿ ಪ್ರಕಾರ, ದೇಶದಲ್ಲಿ ವಿದೇಶಿ ಪ್ರಾಣಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಬ್ಯಾಂಕಾಕ್, ಮಲೇಷ್ಯಾ ಮತ್ತು ಇತರ ಆಗ್ನೇಯ ಏಷ್ಯಾದ ಪ್ರಮುಖ ಪ್ರವಾಸಿ ತಾಣಗಳಿಂದ ದೇಶದೊಳಗೆ ಕಳ್ಳಸಾಗಣೆಯಾಗುತ್ತಿವೆ. ಜನರು ಸರಿಯಾದ ಪರವಾನಿಗೆ ಹೊಂದಿಲ್ಲದಿದ್ದರೆ ಕಾಡು ಪ್ರಾಣಿಗಳನ್ನು ಸಾಗಿಸುವುದನ್ನು ತಡೆಯುವ ಅಧಿಕಾರ ಕಸ್ಟಮ್ಸ್ ಅಧಿಕಾರಿಗಳಿಗೆ ಇದೆ. ಆದರೆ ಸರಂಧ್ರ ಗಡಿಗಳ ಮೂಲಕ ಅಕ್ರಮ ವ್ಯಾಪಾರವನ್ನು ಪತ್ತೆಹಚ್ಚಲು ಅವರಿಗೆ ಕಷ್ಟವಾಗುತ್ತದೆ. ಸ್ಥಳೀಯ ಪ್ರಾಣಿ ಪ್ರಭೇದಗಳ ವ್ಯಾಪಾರದ ಮೇಲೆ ನಿಷೇಧವಿರುವುದರಿಂದ, ಇಂಥ ಪ್ರಾಣಿಗಳ ಕಳ್ಳಸಾಗಾಣಿಕೆ ಆರಂಭಿಸಿದ್ದಾರೆ.

ಇದನ್ನೂ ಓದಿ: viral video: ಸದ್ದಿಲ್ಲದೆ ಆಸ್ಟ್ರೇಲಿಯಾದ ಬಾರ್​ವೊಂದಕ್ಕೆ ಎಂಟ್ರಿ ಕೊಟ್ಟ ಕಾಂಗರೂ; ಮುಂದೇನಾಯ್ತು..!

“ಸ್ವಲ್ಪ ಸಮಯದ ಹಿಂದೆ, ಭಾರತದಲ್ಲಿ ಖಾಸಗಿ ಮೃಗಾಲಯಕ್ಕೆ ಸಂಬಂಧಿಸಿದ ಜೀಬ್ರಾಗಳನ್ನು ಬಾಂಗ್ಲಾದೇಶದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಜನರು ಹುಚ್ಚುತನದ ಕೆಲಸಗಳನ್ನು ಮಾಡುತ್ತಿದ್ದಾರೆ” ಎಂದು ವರ್ಲ್ಡ್ ಅನಿಮಲ್ ಪ್ರೊಟೆಕ್ಷನ್ ಗುಂಪಿನ ಕಾರ್ಯಕರ್ತ ಶುಭೋಬ್ರೊಟೊ ಘೋಷ್ ಹೇಳಿದ್ದಾರೆ.

ವಿದೇಶಿ ಪ್ರಾಣಿಗಳನ್ನು ಸಾಕುಪ್ರಾಣಿಗಳಾಗಿ ದೇಶಕ್ಕೆ ಕರೆತರುವ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರೂ, ವ್ಯಾಪಾರವನ್ನು ಮೇಲ್ವಿಚಾರಣೆ ಮಾಡಲು ಯಾವುದೇ ಪರಿಣಾಮಕಾರಿ ಕಾನೂನು ಇನ್ನೂ ಇಲ್ಲ ಎಂದು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:16 pm, Tue, 24 May 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್