AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂನಲ್ಲಿ ಹೆಚ್ಚುತ್ತಿದೆ ಮಾನವ- ವನ್ಯಜೀವಿ ಸಂಘರ್ಷ; ಫೋಟೋ ತೆಗೆಯಲು ಮುಂದಾದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಚಿರತೆ

ಅಸ್ಸಾಂನಲ್ಲಿ ದಿನದಿಂದ ದಿನಕ್ಕೆ ಮಾನವ- ವನ್ಯಜೀವಿ ಸಂಘರ್ಷ ಏರಿಕೆಯಾಗುತ್ತಿದೆ. ಇತ್ತೀಚಿನ ಪ್ರಕರಣದಲ್ಲಿ ಚಿರತೆಯೊಂದನ್ನು ಗಮನಿಸಿದ ಸ್ಥಳೀಯರು ಅದರ ಸಮೀಪಕ್ಕೆ ತೆರಳಿ ಫೋಟೋ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಚಿರತೆಯು ದಾಳಿ ನಡೆಸಿದೆ.

ಅಸ್ಸಾಂನಲ್ಲಿ ಹೆಚ್ಚುತ್ತಿದೆ ಮಾನವ- ವನ್ಯಜೀವಿ ಸಂಘರ್ಷ; ಫೋಟೋ ತೆಗೆಯಲು ಮುಂದಾದ ವ್ಯಕ್ತಿಯ ಮೇಲೆ ದಾಳಿ ನಡೆಸಿದ ಚಿರತೆ
ಚಿರತೆ ದಾಳಿ ನಡೆಸುತ್ತಿರುವುದು
TV9 Web
| Updated By: shivaprasad.hs|

Updated on:May 08, 2022 | 12:37 PM

Share

ಪ್ರಾಣಿಯ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದಾಗ ಚಿರತೆ (Leopard) ದಾಳಿ ಮಾಡಿದ ಪರಿಣಾಮ ವ್ಯಕ್ತಿಯ ಕಾಲಿಗೆ ಗಾಯವಾಗಿದೆ. ಅಸ್ಸಾಂನ ದಿಬ್ರುಗಢ್‌ನ ಖರ್ಜನ್ ಟೀ ಎಸ್ಟೇಟ್ ಬಳಿ ಘಟನೆ ನಡೆದಿದ್ದು, ಈ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ. ಗಂಡು ಚಿರತೆ ಚಾಬುವಾ ಬೈಪಾಸ್‌ನ ಮೋರಿಯೊಳಗೆ ಆಶ್ರಯ ಪಡೆದಿತ್ತು. ದಾರಿಹೋಕರು ಇದನ್ನು ಗಮನಿಸಿದ್ದು, ವೇಗವಾಗಿ ಸುದ್ದಿ ಹರಡಿದೆ. ಪರಿಣಾಮವಾಗಿ ಚಿರತೆಯನ್ನು ನೋಡಲು ಹೆಚ್ಚಿನ ಜನರು ಆಗಮಿಸಿದ್ದಾರೆ. ಈ ವೇಳೆ ಘಟನೆ ನಡೆದಿದೆ. ದಾಳಿಗೆ ಒಳಗಾದ ವ್ಯಕ್ತಿ ದಿನಗೂಲಿ ಕೆಲಸ ಮಾಡುತ್ತಿದ್ದು, ಢಕುಖಾನಾದಿಂದ ಹಿಂತಿರುಗುತ್ತಿದ್ದರು. ಈ ವೇಲೆ ಚಿರತೆ ಕಾಣಿಸಿಕೊಂಡ ಬಗ್ಗೆ ತಿಳಿದು ಬಂದಿದ್ದು, ಸ್ಥಳಕ್ಕೆ ತಲುಪಿದ್ದಾರೆ. ಸ್ಥಳಕ್ಕೆ ತಲುಪಿ ಚಿರತೆಯ ಫೋಟೀ ಕ್ಲಿಕ್ಕಿಸುತ್ತಾ ಅವರು ಅದರ ಹತ್ತಿರಕ್ಕೆ ತೆರಳಿದ್ದಾರೆ. ಈ ವೇಳೆ ಚಿರತೆ ಏಕಾಏಕಿ ದಾಳಿ ಮಾಡದ್ದು, ವ್ಯಕ್ತಿಯ ಕಾಲಿಗೆ ಗಾಯಗಳಾಗಿವೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ನಂತರ ತಿನ್ಸುಕಿಯಾ ಅರಣ್ಯ ಇಲಾಖೆಯ ತಂಡ ಆಗಮಿಸಿ ಚಿರತೆಯನ್ನು ಸೆರೆಹಿಡಿದಿದ್ದಾರೆ. ಭಾರತೀಯ ವೈಲ್ಡ್‌ಲೈಫ್ ಟ್ರಸ್ಟ್‌ನ ಪಶುವೈದ್ಯ ಖನಿನ್ ಚಾಂಗ್ಮಾಯಿ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಚಿರತೆಯ ಬಗ್ಗೆ ಮಾಹಿತಿ ಸಿಕ್ಕಿ ತಿನ್ಸುಕಿಯಾ ಅರಣ್ಯ ಇಲಾಖೆಯ ತಂಡವು ಸ್ಥಳಕ್ಕೆ ಧಾವಿಸಿ, ಚಿರತೆಯನ್ನು ತಿನ್ಸುಕಿಯಾಕ್ಕೆ ಕರೆದೊಯ್ದಿದ್ದೇವೆ. ಆರೋಗ್ಯ ತಪಾಸಣೆ ನಡೆಸನಬೇಕಿದೆ. ನಂತರ ಅದನ್ನು ಕಾಡಿಗೆ ಬಿಡಲಾಗುವುದು ಎಂದಿದ್ದಾರೆ.

ಘಟನೆಯ ಕುರಿತು ಮಾತನಾಡಿದ ಅರಣ್ಯಾಧಿಕಾರಿಯೊಬ್ಬರು, ಅಸ್ಸಾಂನಲ್ಲಿ ಮಾನವ-ಪ್ರಾಣಿ ಸಂಘರ್ಷದ ನಿದರ್ಶನಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿವೆ ಎಂದಿದ್ದಾರೆ. ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿರುವುದರಿಂದ ಮಾನವ-ಪ್ರಾಣಿ ಸಂಘರ್ಷದ ಘಟನೆಗಳು ಹೆಚ್ಚು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ
Image
ವಾರಾಣಸಿ: ಜ್ಞಾನವಾಪಿ ಮಸೀದಿ ಸಮೀಕ್ಷೆ ವಿಫಲ, ಕಾರಣವೇನು?
Image
Tornado: ಅಸ್ಸಾಂನಲ್ಲಿ ಕಾಣಿಸಿಕೊಂಡ ಅಪರೂಪದ ಸುಂಟರಗಾಳಿ; ವಿಡಿಯೋ ಇಲ್ಲಿದೆ
Image
Viral Video: ಕಾಡಿನ ರಾಜ ಸಿಂಹವನ್ನು ಬರಿಯ ಕೋಲಿನಿಂದ ಅಟ್ಟಿದ ವ್ಯಕ್ತಿ; ವೈರಲ್ ಆಯ್ತು ವಿಡಿಯೋ
Image
Viral News: ಗೆಳೆಯನಿಂದ ಗರ್ಭಿಣಿಯಾಗಲೇಬೇಕೆಂಬ ಹಠದಿಂದ ಎಡವಟ್ಟು ಮಾಡಿಕೊಂಡ ಮಹಿಳೆ; ಅಷ್ಟಕ್ಕೂ ಆಗಿದ್ದೇನು?

ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Sun, 8 May 22

ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ