AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಗೆಳೆಯನಿಂದ ಗರ್ಭಿಣಿಯಾಗಲೇಬೇಕೆಂಬ ಹಠದಿಂದ ಎಡವಟ್ಟು ಮಾಡಿಕೊಂಡ ಮಹಿಳೆ; ಅಷ್ಟಕ್ಕೂ ಆಗಿದ್ದೇನು?

Shocking News: ಜರ್ಮನಿಯ 39 ವರ್ಷದ ಮಹಿಳೆ ತನ್ನ ಬಾಯ್​ಫ್ರೆಂಡ್​ಗೆ ಗೊತ್ತಾಗದ ಹಾಗೆ ಗರ್ಭಿಣಿಯಾಗಲು ಪ್ಲಾನ್ ಮಾಡಿದ್ದಳು. ಆದರೆ, ಆಕೆ ಮಾಡಿದ ಆ ಕೆಲಸದಿಂದ ಈಗ ಜೈಲು ಸೇರಿದ್ದಾಳೆ. ಅಷ್ಟಕ್ಕೂ ಆಕೆ ಮಾಡಿದ ಪ್ಲಾನ್ ಏನು?

Viral News: ಗೆಳೆಯನಿಂದ ಗರ್ಭಿಣಿಯಾಗಲೇಬೇಕೆಂಬ ಹಠದಿಂದ ಎಡವಟ್ಟು ಮಾಡಿಕೊಂಡ ಮಹಿಳೆ; ಅಷ್ಟಕ್ಕೂ ಆಗಿದ್ದೇನು?
ಕಾಂಡೋಮ್
TV9 Web
| Updated By: ಸುಷ್ಮಾ ಚಕ್ರೆ|

Updated on:May 07, 2022 | 7:29 PM

Share

ವಿದೇಶಗಳಲ್ಲಿ ಪ್ರೀತಿ, ಡೇಟಿಂಗ್ (Dating), ಲಿವ್ ಇನ್ ರಿಲೇಷನ್​ಶಿಪ್ ಎಲ್ಲವೂ ಬಹಳ ಸಾಮಾನ್ಯ. ಅಲ್ಲಿಯ ತಂದೆ-ತಾಯಿ ಕೂಡ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಜರ್ಮನಿಯ (German) ಮಹಿಳೆಯೊಬ್ಬಳಿಗೆ ಹೇಗಾದರೂ ತಾನು ಗರ್ಭಿಣಿಯಾಗಬೇಕು ಎಂಬ ಆಸೆಯಿತ್ತು. ಹೀಗಾಗಿ, ಪಶ್ಚಿಮ ಜರ್ಮನಿಯ 39 ವರ್ಷದ ಮಹಿಳೆ ಗರ್ಭಿಣಿಯಾಗಲು (Pregnant) ದೊಡ್ಡ ಪ್ಲಾನ್ ಮಾಡಿದ್ದಳು. ಆದರೆ, ಆಕೆ ಮಾಡಿದ ಆ ಕೆಲಸದಿಂದ ಈಗ ಜೈಲು ಸೇರಿದ್ದಾಳೆ. ಅಷ್ಟಕ್ಕೂ ಆಕೆ ಮಾಡಿದ ಪ್ಲಾನ್ ಏನು? ಇಲ್ಲಿದೆ ಮಾಹಿತಿ.

ಜರ್ಮನಿಯ ಮಹಿಳೆಯೊಬ್ಬಳು ಗರ್ಭ ಧರಿಸಬೇಕೆಂದು ಬಯಸಿದ್ದಳು. ಹೀಗಾಗಿ, ತನ್ನ ಗೆಳೆಯನೊಂದಿಗೆ ಸಂಭೋಗ ಮಾಡುವುದಕ್ಕೂ ಮೊದಲು ಆತನಿಗೆ ಗೊತ್ತಾಗದ ಹಾಗೆ ಆತನ ಕಾಂಡೋಮ್​ನಲ್ಲಿ ರಂಧ್ರಗಳನ್ನು ಮಾಡಿದ್ದಳು. ಈ ವಿಷಯ ತಿಳಿದ ಬಳಿಕ ಆಕೆಯ ಗೆಳೆಯ ಕೋಪಗೊಂಡಿದ್ದು, ಕೋರ್ಟ್​ ಮೆಟ್ಟಿಲೇರಿದ್ದಾನೆ. ಬೈಲೆಫೆಲ್ಡ್ ನಗರದ ಪ್ರಾದೇಶಿಕ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಿದ್ದು, ಆ 39 ವರ್ಷದ ಮಹಿಳೆ ತನ್ನ 42 ವರ್ಷದ ಬಾಯ್​ಫ್ರೆಂಡ್​ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಳೆ ಎಂಬ ಆರೋಪ ಹೊರಿಸಿದೆ. ಅಲ್ಲದೆ, ಆಕೆ ಸ್ಟೆಲ್ತಿಂಗ್ ಮಾಡಿದ್ದಕ್ಕೆ ಶಿಕ್ಷೆಯನ್ನೂ ವಿಧಿಸಿದೆ.

ಸ್ಟೆಲ್ತಿಂಗ್ ಎಂದರೆ ಸಂಭೋಗದ ವೇಳೆ ಕಾಂಡೋಮ್ ಅನ್ನು ತೆಗೆದುಹಾಕುವುದು ಮತ್ತು ಈ ವಿಚಾರವನ್ನು ತನ್ನ ಪಾರ್ಟನರ್​​ನಿಂದ ಮುಚ್ಚಿಡುವುದಾಗಿದೆ. ಸಾಮಾನ್ಯವಾಗಿ, ಪುರುಷರು ಈ ಅಪರಾಧಕ್ಕೆ ಶಿಕ್ಷೆಗೆ ಗುರಿಯಾಗುತ್ತಾರೆ. ಕೆಲವು ಪುರುಷರು ಸಂಭೋಗದ ವೇಳೆ ಕಾಂಡೋಮ್ ಅನ್ನು ತೆಗೆದುಹಾಕಿ, ಮಹಿಳೆ ಗರ್ಭ ಧರಿಸಲು ಕಾರಣರಾಗುತ್ತಾರೆ. ಈ ಪ್ರಕರಣದಲ್ಲಿ ಇದುವರೆಗೆ ಅನೇಕ ಪುರುಷರು ಶಿಕ್ಷೆ ಅನುಭವಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಮಹಿಳೆಗೆ ಈ ಕೇಸ್​ನಲ್ಲಿ ದಂಡ ವಿಧಿಸಲಾಗಿದೆ. (Source)

ಇದನ್ನೂ ಓದಿ
Image
Viral Video: ಬೋರ್​ವೆಲ್ ಕೆಳಗೆ ಕುಳಿತು ಸ್ನಾನ ಮಾಡಿದ ಬಿಜೆಪಿ ಸಚಿವ; ವಿಡಿಯೋ ವೈರಲ್
Image
Viral Video : ಫೋಟೋಶೂಟ್ ಸಮಯದಲ್ಲಿ ನೀರಿಗೆ ಬಿದ್ದ ನವದಂಪತಿಗಳು : ಇಲ್ಲಿದೆ ವಿಡಿಯೋ
Image
Swiggy: ಸ್ವಿಗ್ಗಿಯಲ್ಲಿ ಕಾಫಿ ಆರ್ಡರ್ ಮಾಡಿದ ಬೆಂಗಳೂರು ಯುವಕ; ಡೆಲಿವರಿ ಬಾಯ್ ಏನು ಮಾಡಿದ ಗೊತ್ತಾ?
Image
Viral News: ಈ ದೇಶದಲ್ಲಿ ಮೂರನೇ ಮಗು ಮಾಡಿಕೊಂಡವರಿಗೆ 11 ಲಕ್ಷ ರೂ. ಬಹುಮಾನ, 1 ವರ್ಷ ರಜೆ!

2021ರ ಆರಂಭದಲ್ಲಿ ಅವರಿಬ್ಬರೂ ಆನ್‌ಲೈನ್‌ನಲ್ಲಿ ಭೇಟಿಯಾಗಿದ್ದರು. ನಂತರ ಅವರ ನಡುವೆ ದೈಹಿಕ ಸಂಬಂಧ ಉಂಟಾಗಿತ್ತು. ಅವರಿಬ್ಬರೂ ಆಗಾಗ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು. ಆದರೆ, ಕ್ರಮೇಣ ಆ ಮಹಿಳೆಗೆ ಆತನ ಮೇಲೆ ಆಸಕ್ತಿ ಹೆಚ್ಚಾಯಿತು. ಆತನನ್ನು ಆಕೆ ಬಹಳ ಹಚ್ಚಿಕೊಂಡಿದ್ದಳು. ಆತನಿಗೆ ತನಗೊಂದು ಮಗು ಬೇಕೆಂದು ಬಯಸಿದ್ದಳು. ಆದರೆ, ಆತನಿಗೆ ಆಕೆಯ ಜೊತೆ ಜೀವನಪೂರ್ತಿ ಕಮಿಟ್​ಮೆಂಟ್ ಬೆಳೆಸಿಕೊಳ್ಳಲು ಇಷ್ಟವಿರಲಿಲ್ಲ.

ಹೀಗಾಗಿ, ಆತನಿಗೆ ಗೊತ್ತಾಗದ ಹಾಗೆ ಗರ್ಭ ಧರಿಸಲು ಪ್ಲಾನ್ ಮಾಡಿದ ಆಕೆ ಆತನ ಕಾಂಡೋಮ್​ನಲ್ಲಿ ತೂತುಗಳನ್ನು ಮಾಡಿದ್ದಳು. ಆತ ಇಟ್ಟುಕೊಂಡಿದ್ದ ಕಾಂಡೋಮ್​ಗಳಲ್ಲಿ ರಂಧ್ರಗಳನ್ನು ಮಾಡಿ, ಅದನ್ನು ಆತ ಇಟ್ಟಿದ್ದ ಸ್ಥಳದಲ್ಲೇ ವಾಪಾಸ್ ಇಟ್ಟಿದ್ದಳು. ಈ ವಿಷಯ ಗೊತ್ತಿಲ್ಲದೆ ಆತ ಲೈಂಗಿಕ ಕ್ರಿಯೆ ವೇಳೆ ಅದೇ ಕಾಂಡೋಮ್ ಬಳಸಿದ್ದ. ಇದರಿಂದ ಆಕೆ ಗರ್ಭಿಣಿಯಾಗದಿದ್ದರೂ ಈ ವಿಷಯ ತಿಳಿದ ಬಳಿಕ ಕೋಪಗೊಂಡ ಆ ವ್ಯಕ್ತಿ ತನ್ನ ಪಾರ್ಟನರ್​ ತನ್ನ ಕಾಂಡೋಮ್ ಅನ್ನು ರಂಧ್ರ ಮಾಡಿ ಮೋಸ ಮಾಡಿದ್ದು ಮಾತ್ರವಲ್ಲದೆ ತಾನು ಗರ್ಭೀನಿಯಾಗಿದ್ದಾಳೆ ಎಂದು ತನಗೆ ಬ್ಲಾಕ್​ಮೇಲ್ ಮಾಡಿದ್ದಾಳೆ ಎಂದು ಆಕೆಯ ವಿರುದ್ಧ ಆರೋಪ ಹೊರಿಸಿದ್ದಾನೆ ಎಂದು ವರದಿಯಾಗಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Sat, 7 May 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?