ಕತ್ತೆ ಮೇಲೆ ಗೆರೆ ಎಳೆದರೆ ಅದು ಝೀಬ್ರಾ ಆಗಲ್ಲ, ಕತ್ತೆ ಯಾವತ್ತೂ ಕತ್ತೆಯೇ: ಇಮ್ರಾನ್ ಖಾನ್ ಹೇಳಿಕೆ ವೈರಲ್

ನನಗೆ ಯುಕೆಯಲ್ಲಿ ತುಂಬಾ ಸ್ವಾಗತ ಸಿಕ್ಕಿತ್ತು, ಆದರೆ ನಾನು ಅದನ್ನು ನನ್ನ ಮನೆ ಎಂದು ಪರಿಗಣಿಸಲಿಲ್ಲ. ನಾನು ಯಾವಾಗಲೂ ಮೊದಲು ಪಾಕಿಸ್ತಾನಿ. ನೀವು ಕತ್ತೆಯ ಮೇಲೆ ಗೆರೆ ಎಳೆದರೆ ಝೀಬ್ರಾ ಆಗಿ ಬದಲಾಗುವುದಿಲ್ಲ...

ಕತ್ತೆ ಮೇಲೆ ಗೆರೆ ಎಳೆದರೆ ಅದು ಝೀಬ್ರಾ ಆಗಲ್ಲ, ಕತ್ತೆ ಯಾವತ್ತೂ ಕತ್ತೆಯೇ: ಇಮ್ರಾನ್ ಖಾನ್ ಹೇಳಿಕೆ ವೈರಲ್
ಇಮ್ರಾನ್ ಖಾನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: May 06, 2022 | 8:20 PM

ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan)  ಮತ್ತೆ ಸುದ್ದಿಯಲ್ಲಿದ್ದಾರೆ. ಪಾಡ್‌ಕ್ಯಾಸ್ಟ್ ರೆಕಾರ್ಡಿಂಗ್‌ನ ಕ್ಲಿಪ್‌ವೊಂದರಲ್ಲಿ ಇಮ್ರಾನ್ ಖಾನ್ ಅವರು ಯುನೈಟೆಡ್ ಕಿಂಗ್‌ಡಂನಲ್ಲಿ (United Kingdom) ತಮ್ಮ ಜೀವನವನ್ನು ವಿವರಿಸುತ್ತಾ ಹೇಳಿದ ಮಾತೊಂದು ಈ ವೈರಲ್ ಆಗಿದೆ. “ನನಗೆ ಯುಕೆಯಲ್ಲಿ ತುಂಬಾ ಸ್ವಾಗತ ಸಿಕ್ಕಿತ್ತು, ಆದರೆ ನಾನು ಅದನ್ನು ನನ್ನ ಮನೆ ಎಂದು ಪರಿಗಣಿಸಲಿಲ್ಲ. ನಾನು ಯಾವಾಗಲೂ ಮೊದಲು ಪಾಕಿಸ್ತಾನಿ. ನೀವು ಕತ್ತೆಯ ಮೇಲೆ ಗೆರೆ ಎಳೆದರೆ ಝೀಬ್ರಾ ಆಗಿ ಬದಲಾಗುವುದಿಲ್ಲ. ಕತ್ತೆ ಕತ್ತೆಯಾಗಿಯೇ ಉಳಿಯುತ್ತದೆ ಎಂದು ಖಾನ್ ಹೇಳಿದ್ದಾರೆ. ಕತ್ತೆ ಕತ್ತೆಯಾಗಿಯೇ ಉಳಿಯುತ್ತದೆ ಎಂಬ ವಾಕ್ಯವೇ ಈಗ ವೈರಲ್ ಆಗಿರುವುದು. ಇದು ಪಾಕಿಸ್ತಾನ ಮೂಲದ ಕಂಟೆಂಟ್ ಕ್ರಿಯೇಟರ್ ಜುನೈದ್ ಅಕ್ರಮ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನ ಒಂದು ತುಣುಕು ಇದಾಗಿದೆ. ದುಬೈನಿಂದ ಪಾಕಿಸ್ತಾನಕ್ಕೆ ಬಂದಿದ್ದ ಅಕ್ರಮ್ ಗಂಜಿಸ್ವಾಗ್ ಎಂಬ ಹೆಸರಿನ ಇನ್​​ಸ್ಟಾಗ್ರಾಮ್​​  ಹ್ಯಾಂಡಲ್ ಅನ್ನು ಸಹ ನಡೆಸುತ್ತಿದ್ದಾರೆ. ಇತರ ಕಂಟೆಂಟ್ ಕ್ರಿಯೇಟರ್ ಗಳಾದ ಮುಝಮ್ಮಿಲ್ ಹಸನ್ ಮತ್ತು ತಲ್ಹಾ ಕೂಡ ಪಾಡ್‌ಕ್ಯಾಸ್ಟ್‌ನ ಭಾಗವಾಗಿದ್ದರು. ಪೂರ್ತಿ ವಿಡಿಯೊವನ್ನು ಖಾನ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರತಿಪಕ್ಷಗಳು ಮಂಡಿಸಿದ ಅವಿಶ್ವಾಸ ಮತದ ಮೂಲಕ ಏಪ್ರಿಲ್ 10 ರಂದು ಖಾನ್ ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಲಾಯಿತು. ದೇಶದ ಸಂಸತ್ತಿನಿಂದ ಹೊರಹಾಕಲ್ಪಟ್ಟ ಮೊದಲ ಪಾಕಿಸ್ತಾನಿ ಪ್ರಧಾನ ಮಂತ್ರಿಯಾಗಿದ್ದಾರೆ ಖಾನ್.

ಕ್ರಿಕೆಟಿಗ, ರಾಜಕಾರಣಿ ಪಾಕಿಸ್ತಾನದಲ್ಲಿ ತನ್ನನ್ನು ಹೊರಹಾಕಲು ರಾಜಕೀಯ ವಿರೋಧಿಗಳು ಅಮೆರಿಕ ಜೊತೆ ಸೇರಿಕೊಂಡಿದ್ದಾರೆ ಎಂದು ಪದೇ ಪದೇ ಆರೋಪಿಸಿದ್ದಾರೆ. ಆದರೆ ಅವರು ಇದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆಗಳನ್ನು ಒದಗಿಸಿಲ್ಲ ಮತ್ತು ವಾಷಿಂಗ್ಟನ್ ಯಾವುದೇ ವಿದೇಶಿ ಹಸ್ತಕ್ಷೇಪವನ್ನು ಬಲವಾಗಿ ನಿರಾಕರಿಸಿದೆ. ಖಾನ್ ಅವರು ಬೇಗನೆ ಚುನಾವಣೆ ನಡೆಸಬೇಕು ಎಂದು ಮನವಿ ಮಾಡಿದ್ದರು.ಆದರೆ ದೇಶದ ಚುನಾವಣಾ ಆಯೋಗವು ಮೇ 2023 ರ ಮೊದಲು ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ.

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್