National Nurses Day 2022: ಅಮೆರಿಕದಲ್ಲಿ ಇಂದು ದಾದಿಯರ ದಿನ

ಬದುಕಿನ ಭರವಸೆ ಕಳೆದುಕೊಂಡು ಕೈಚೆಲ್ಲಿ ಕುಳಿತಾಗ ಆಸರೆಯಾದವಳು ದಾದಿ, ಕಾಲ ಚಕ್ರದ ಜತೆ ಪೈಪೋಟಿಗಿಳಿದು ಜನರ ಆರೋಗ್ಯವನ್ನು ಕಾಪಾಡಿದವಳು ದಾದಿ. ಕೊರೊನಾ ಎಂಬ ರೋಗ ಬಂದು ಸಂಬಂಧಗಳನ್ನೇ ಮರೆತಿರುವಾಗ ಬಂಧುವಂತೆ ಆರೈಕೆ ಮಾಡಿದವಳ ದಿನ ಇಂದು.

National Nurses Day 2022: ಅಮೆರಿಕದಲ್ಲಿ ಇಂದು ದಾದಿಯರ ದಿನ
ರಾಷ್ಟ್ರೀಯ ದಾದಿಯರ ದಿನ 2022
Follow us
TV9 Web
| Updated By: ನಯನಾ ರಾಜೀವ್

Updated on: May 06, 2022 | 7:00 AM

ಇಡೀ ಪ್ರಪಂಚವೇ ಸಂಕಷ್ಟದಲ್ಲಿರುವಾಗ ಧೈರ್ಯ ತುಂಬಿದಾಕೆ ದಾದಿ, ಬದುಕಿನ ಭರವಸೆ ಕಳೆದುಕೊಂಡು ಕೈಚೆಲ್ಲಿ ಕುಳಿತಾಗ ಆಸರೆಯಾದವಳು ದಾದಿ, ಕಾಲ ಚಕ್ರದ ಜತೆ ಪೈಪೋಟಿಗಿಳಿದು ಜನರ ಆರೋಗ್ಯವನ್ನು ಕಾಪಾಡಿದವಳು ದಾದಿ. ಕೊರೊನಾ ಎಂಬ ರೋಗ ಬಂದು ಸಂಬಂಧಗಳನ್ನೇ ಮರೆತಿರುವಾಗ ಬಂಧುವಂತೆ ಆರೈಕೆ ಮಾಡಿದವಳ ದಿನ ಇಂದು.

ಸುದ್ದಿಗಾಗಿ ನೀನು ಸೇವೆ ಮಾಡಬೇಡ, ಸೇವೆ ಮಾಡಿ ಸುದ್ದಿಯಾಗಬೇಡ, ಸದ್ದಿಲ್ಲದೇ ಸೇವೆ ಮಾಡು ಎಂಬ ಮಹಾತಾಯಿ ಮದರ್ ಥೆರೇಸಾ ಮಾತಿನಂತೆಯೇ ದಾದಿಯರು ನಡೆದುಕೊಳ್ಳುತ್ತಿದ್ದಾರೆ, ಈ ವೇಳೆ ಇವರಿಗಾಗಿ ಇರುವ ದಿನದ ಮಹತ್ವವನ್ನು ಅರಿಯುವುದು ಬಹುಮುಖ್ಯ. ಅಂತಾರಾಷ್ಟ್ರೀಯ ದಾದಿಯರ ದಿನದ ವಾರದ ಆರಂಭದಲ್ಲಿ ಅಮೆರಿಕದಲ್ಲಿ ರಾಷ್ಟ್ರೀಯ ದಾದಿಯರ ದಿನ(National Nurses Day 2022)ವನ್ನು ಆಚರಣೆ ಮಾಡಲಾಗುತ್ತದೆ.

ರಾಷ್ಟ್ರೀಯ ಶುಶ್ರೂಷಕರ ದಿನ ಹುಟ್ಟಿದ್ದು ಹೇಗೆ?

ವೈದ್ಯಕೀಯ ಕ್ಷೇತ್ರದ ಬುನಾದಿಗಳಾಗಿರುವ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ನರ್ಸ್‍ಗಳಿಗಾಗಿ ಈ ದಿನವನ್ನು ಮೀಸಲಿಡಲಾಗಿದೆ. ಯು.ಎಸ್. ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಡೊರೊಥಿ ಸದಲ್ಯಾಂಡ್, ಅಧ್ಯಕ್ಷ ಡ್ವೈಟ್ ಡಿ. ಐಸೆನ್‍ಹೋವರ್ ಅವರೊಂದಿಗೆ ಸಂವಹನ ನಡೆಸಿ 1953ರಿಂದ ದಾದಿಯರ ದಿನವನ್ನಾಗಿ ಆಚರಿಸಲು ಉದ್ದೇಶಿಸಿತು. ಆದರೆ ಇವರ ಮನವಿಯನ್ನು ಅಧ್ಯಕ್ಷರು ಮಾನ್ಯ ಮಾಡಲಿಲ್ಲ. 1965 ರಿಂದ ಅಂತಾರಾಷ್ಟ್ರೀಯ ನರ್ಸ್ ಕೌನ್ಸಿಲ್ ಈ ದಿನವನ್ನು ಆಚರಿಸಲು ಶುರು ಮಾಡಿತು. ಕೊನೆಗೂ, 1974ರಂದು ಮೇ 12ನ್ನು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಘೋಷಿಸಿತು. ಹಾಗೆಯೇ ಅಮೆರಿಕದಲ್ಲಿ ಮೇ 6ರಂದೇ ಆಚರಣೆ ಶುರುವಾಯಿತು.  ಈ ದಿನ ಜಗತ್ತಿನ ಶ್ರಶ್ರೂಷಕಿ ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನವೂ ಹೌದು. ಇವರ ಜನ್ಮದಿನದ ಸವಿ ನೆನಪಿಗಾಗಿ ಅಂತಾರಾಷ್ಟ್ರೀಯ ದಾದಿಯರ ದಿನವನ್ನು ಆಚರಿಸಲಾಗುತ್ತಿದೆ.

ಯಾರಿದು ಫ್ಲೋರೆನ್ಸ್ ನೈಟಿಂಗೇಲ್..?

ಫ್ಲೋರೆನ್ಸ್ ನೈಟಿಂಗೇಲ್ ಅವರನ್ನು ಬ್ರಿಟಿಷರ ಶುಶ್ರೂಷಕಿ ಎಂದೇ ಕರೆಯಲಾಗುತ್ತದೆ. ನೈಟಿಂಗೇಲ್ ಒಬ್ಬ ಸಾಮಾಜಿಕ ಕಾರ್ಯಕರ್ತೆ. ಆದರೆ ಯುದ್ಧದ ಅವಧಿಯಲ್ಲಿ ದಾದಿಯರ ತಂಡದ ನೇತೃತ್ವ ಹೊತ್ತು ಸಾವಿರಾರು ಜನರಿಗೆ ಚಿಕಿತ್ಸೆ ನೀಡಿದ ಇವರು 1860ರಲ್ಲಿ ದಾದಿಯರಿಗಾಗಿ ಲಂಡನ್ ಸೈನ್ಸ್ ಆಸ್ಪತ್ರೆಯಲ್ಲಿ ನೈಟಿಂಗೇಲ್ ತರಬೇತಿ ಶಾಲೆಯನ್ನು ಆರಂಭಿಸಿದರು. ಶುಶ್ರೂಷೆಯು ಇಡೀ ಜಗತ್ತಿನಲ್ಲೇ ಅತಿ ದೊಡ್ಡ ಆರೋಗ್ಯ ಸೇವೆ ಎಂಬುದನ್ನು ನಾವು ಎಂದೂ ಮರೆಯಬಾರದು. ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಅವರ ತತ್ವ ಸಿದ್ದಾಂತಗಳು ಮಿಲೇನಿಯಮ್ ಡೆವಲಪ್‍ಮೆಂಟ್ ಗುರಿಗಳನ್ನು ಹಾಗೂ ಪ್ರಪಂಚದ ಆರೋಗ್ಯದ ಗುರಿ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವಂತಿಲ್ಲ. ಈ ಸಂಬಂಧ ರೋಗಿಗಳ ಆರೈಕೆಗೆ ಸಂಬಂಧಿಸಿದಂತೆ ಹಲವು ತರಬೇತಿಗಳನ್ನು ನೀಡಲಾಗಿದೆ.

ನರ್ಸ್‍ಗಳು ಉತ್ತಮ ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ನರ್ಸ್‍ಗಳು ತಮ್ಮ ವೃತ್ತಿಪರತೆ ಮೆರೆಯುವಲ್ಲಿ ಹಾಗೂ ನರ್ಸ್‍ಗಳಿಗೆ ಸಲಹೆ ಸೂಚನೆ, ಮಾರ್ಗದರ್ಶನ ನೀಡುವಲ್ಲಿ ರಾಷ್ಟ್ರೀಯ ಶುಶ್ರೂಷಕರ ಸಂಘದ ಬಹುಪಾಲು ಶ್ರಮವಿದೆ ಎಂಬುದನ್ನು ಅರಿಯಬೇಕಾಗುತ್ತದೆ. ಆರೋಗ್ಯ ಆರೈಕೆಯ ರೂಢಿಗಳ ಬಲವರ್ಧನೆಗೊಳಿಸುವಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಕೈಜೋಡಿಸಿವೆ.

ಶುಶ್ರೂಷಕಿಯರು ವೈದ್ಯಕೀಯ ಕ್ಷೇತ್ರದ ಅವಿಭಾಜ್ಯ ಅಂಗ, ವೈದ್ಯರು ಮತ್ತು ರೋಗಿಗಳ ನಡುವೆ ಅವರು ಸೇತುವೆಯಂತೆ ಕೆಲಸ ಮಾಡುತ್ತಾರೆ, ರೋಗಿಯ ನಾಡಿ ಮಿಡಿತ, ಅವರ ಚೇತರಿಕೆಯ ಹಾದಿ ವೈದ್ಯರಿಗಿಂತಲೂ ಶುಶ್ರೂಷಕರಿಯರಿಗೆ ಬೇಗ ತಿಳಿಯುತ್ತದೆ, ತಾಯಿ ಹೃದಯ ಇದ್ದರೆ ಮಾತ್ರ ನಿಸ್ವಾರ್ಥ ಸೇವೆ ಸಾಧ್ಯ, ರೋಗಿಗಳ ಜತೆಗೆ ವೈದ್ಯರಿಗಿಂತಲೂ ಹೆಚ್ಚು ಬಾಂಧವ್ಯ ಹೊಂದಿರುವವರು ಇವರು.

ಸದ್ಯದ ಪರಿಸ್ಥಿತಿಯಲ್ಲಿ ದಾದಿಯರು ಹೇಗಿದ್ದಾರೆ?

ಕೊರೊನಾದಿಂದಾಗಿ ಶಿಫ್ಟ್‌ಗಳನ್ನೇ ಮರೆತು ಹಗಲು ರಾತ್ರಿ ದುಡಿಯುತ್ತಿರುವ ದಾದಿಯರಿಗೆ ಮನೆ ಇದೆ, ಮಕ್ಕಳಿದ್ದಾರೆ, ಕುಟುಂಬವೂ ಇರುತ್ತೆ. ಆದರೆ ಕೊರೊನಾ ಬಂದ ಮೇಲೆ ಇವೆಲ್ಲವೂ ಅವರ ಎರಡನೇ ಆದ್ಯತೆ ಆಗಿಬಿಟ್ಟಿದೆ. ಅನಿವಾರ್ಯತೆಯ ಜೊತೆ ವೃತ್ತಿ ಧರ್ಮ ಅವರನ್ನು ಮನೆಯಲ್ಲಿರಲು ಬಿಡುತ್ತಿಲ್ಲ. ತಮ್ಮ ಕೆಲಸ ಕೊರೊನಾ ಕಾಲದಲ್ಲಿ ಎಷ್ಟು ಅಪಾಯಕಾರಿ ಎಂದು ತಿಳಿದರೂ ನರ್ಸ್‌ಗಳು ಕೆಲಸಕ್ಕೆ ಬರಲು ಹಿಂದೇಟು ಹಾಕಿಲ್ಲ, ಹಾಗೊಂದು ವೇಳೆ ಹಿಂಜರಿದಿದ್ದರೆ ವಿಶ್ವದ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಲೂ ಸಾಧ್ಯವಾಗುತ್ತಿರಲಿಲ್ಲ. ಆಕ್ಸಿಜನ್, ವೆಂಟಿಲೇಟರ್, ಬೆಡ್ ಇಲ್ಲ ಎಂದು ಪರದಾಡಿದಂತೆ ನರ್ಸ್‌ಗಳಿಲ್ಲ ಎಂದು ಒದ್ದಾಡಬೇಕಾಗಿತ್ತು. ಆದರೆ ಹಾಗಾಗಿಲ್ಲ, ಅದರರ್ಥ ದಾದಿಯರು ಸಂಪೂರ್ಣ ಸೇವೆಯನ್ನು ನೀಡುತ್ತಲೇ ಬಂದಿದ್ದಾರೆ.

ಒಬ್ಬ ನರ್ಸ್ ತಾನು ಆರೈಕೆ ಮಾಡೋ ರೋಗಿ ಯಾವ ಜಾತಿ, ಯಾವ ಧರ್ಮ, ಯಾವ ಪಕ್ಷ, ಯಾವ ಊರು ಎಂಬೆಲ್ಲಾ ವಿಚಾರದ ಬಗ್ಗೆ ನೋಡುವುದೇ ಇಲ್ಲ. ರೋಗಿ ಯಾರೇ ಇರಲಿ, ಅವರನ್ನು ಮಗುವಿನಂತೆ ಆರೈಕೆ ಮಾಡಿ ಹುಷಾರಾಗಿಸಿ, ಮನೆಗೆ ಕಳುಹಿಸೋದಷ್ಟೇ ಅವರ ಏಕೈಕ ಗುರಿ.

ಬರೀ ವೈದ್ಯರಷ್ಟೇ ಇದ್ದಾರೆ, ದಾದಿಯರೇ ಇಲ್ಲ ಎಂದಾದರೆ ಹೇಗಿರಬಹುದು ಆಸ್ಪತ್ರೆಗಳ ಸ್ಥಿತಿ ? ಸಮಯಕ್ಕೆ ಬಂದು ತಿಂಡಿ ತಿಂದಿರಾ, ಸ್ನಾನ ಮಾಡಿದ್ರಾ? ಆಹಾರ ಸೇರುತ್ತಾ? ಔಷಧ ತಗೊಂಡ್ರಾ? ನೋವಿದೆಯಾ? ಎಂಬೆಲ್ಲ ಕಾಳಜಿಯ ಪ್ರಶ್ನೆಗಳು ನರ್ಸ್‌ಗಳ ನಿತ್ಯ ಸಂಭಾಷಣೆ.

ವೈದ್ಯರು ಬಂದು ಮೇಲ್ವಿಚಾರಣೆ ಮಾಡಿ ಹೋಗಿ ಬಿಡುತ್ತಾರೆ, ಅವರ ರೌಂಡ್ಸ್ ಮುಗಿದರೆ ಆಯ್ತು. ಆದರೆ ರೋಗಿಯ ಆಪ್ತರು ಜೊತೆಯಲ್ಲಿದ್ದರೂ, ನರ್ಸ್‌ಗಳು ಮತ್ತೆ ಮತ್ತೆ ಬಂದು ವಿಚಾರಿಸಿ, ನಗುಮುಖದಿಂದ ಮಾತನಾಡಿಸಿ ಉಪಚರಿಸಿ ಹೋಗುತ್ತಾರೆ. ಇವರು ರೋಗಿಗಳ ನೋವಿಗೆ ಸ್ಪಂದಿಸೋ ಶ್ವೇತವರ್ಣದಲ್ಲಿರೋ ದೇವತೆಗಳು, ತಮ್ಮ ಕಾಳಜಿಯ ಮೂಲಕ ರೋಗಿಯನ್ನು ಗುಣಮುಖರಾಗಿಸಿ ಮನೆಗೆ ಕಳುಹಿಸೋ ಕಿನ್ನರರು..!

ಅಂತಾರಾಷ್ಟ್ರೀಯ ದಾದಿಯರ ದಿನ ಹುಟ್ಟಿದ್ದು ಹೇಗೆ ?

ಪ್ರತಿವರ್ಷ ಮೇ 12 ರಂದು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಆಚರಿಸುತ್ತಾರೆ. ಫ್ಲಾರೆನ್ಸ್ ನೈಟಿಂಗೇಲ್ ಹುಟ್ಟಿದ ದಿನವಿದು. ದಾದಿಯರು ಸಮಾಜಕ್ಕೆ ನೀಡುವ ಕೊಡುಗೆಗಳನ್ನು ಗುರುತಿಸಲು ವಿಶ್ವದಾದ್ಯಂತ ಈ ದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ. ಅಮೆರಿಕದಲ್ಲಿ ಮೇ 6ರಂದೇ ಆಚರಿಸಲಾಗುತ್ತಿದೆ.

ಜೀವನಶೈಲಿ ಹಾಗೂ ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?