Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಫೋಟೋಶೂಟ್ ಸಮಯದಲ್ಲಿ ನೀರಿಗೆ ಬಿದ್ದ ನವದಂಪತಿಗಳು : ಇಲ್ಲಿದೆ ವಿಡಿಯೋ

ಮದುವೆಯ ಎಲ್ಲ ಕಾರ್ಯತಕ್ರಮಗಳು ನಡೆದ ನಂತರ   ವಧುವರರು ತಮ್ಮ ಮದುವೆಯ ಬಟ್ಟೆಗಳನ್ನು ಧರಿಸಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು ನಂತರ ವೀಡಿಯೊ ತೆಗೆಯಲಾಗಿದೆ . ಮನಸ್ಸಿನಲ್ಲಿ ಕಿಡಿಗೇಡಿತನದಿಂದ, ವಧು ನಂತರ ವರನನ್ನು ಕೊಳಕ್ಕೆ ತಳ್ಳಲು ಪ್ರಯತ್ನಿಸುತ್ತಾಳೆ. ಆದಾಗ್ಯೂ, ಅವನು ಅವಳನ್ನು ತನ್ನೊಂದಿಗೆ ಎಳೆದುಕೊಂಡು ಹೋಗುತ್ತಾನೆ

Viral Video : ಫೋಟೋಶೂಟ್ ಸಮಯದಲ್ಲಿ ನೀರಿಗೆ ಬಿದ್ದ ನವದಂಪತಿಗಳು : ಇಲ್ಲಿದೆ ವಿಡಿಯೋ
ನೀರಿಗೆ ಬಿದ್ದ ನವದಂಪತಿಗಳು
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:May 06, 2022 | 4:00 PM

ಮದುವೆ ಸಂಭ್ರಮ ಎಂದರೆ ನಮ್ಮಲ್ಲಿ  ಏನೋ ಒಂದು ಖುಷಿ, ಸಡಗರ ಒಂದಲ್ಲ ಒಂದು ತುಂಟಾಟವನ್ನು ಮಾಡುತ್ತ ಇರುತ್ತೇವೆ. ಇದಕ್ಕೆ ಪೂರಕವಾಗಿ ಕೆಲವೊಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಹರಿದಾಡುತ್ತದೆ. ಅದರಲ್ಲಿ ಮಜಾ ಇರುತ್ತದೆ, ಕೆಲವೊಂದು ನಕ್ಕು ನಕ್ಕು ಸಾಗುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ  ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ವಧು ತಮ್ಮ ಫೋಟೋಶೂಟ್ ಸಮಯದಲ್ಲಿ ವರನನ್ನು ಈಜುಕೊಳಕ್ಕೆ ತಳ್ಳಲು ಪ್ರಯತ್ನಿಸುತ್ತಾಳೆ, ಆದರೆ ಸ್ವತಃ ತಾನೇ ಬೀಳುತ್ತಾಳೆ.

ಮದುವೆಯ ಎಲ್ಲ ಕಾರ್ಯತಕ್ರಮಗಳು ನಡೆದ ನಂತರ   ವಧುವರರು ತಮ್ಮ ಮದುವೆಯ ಬಟ್ಟೆಗಳನ್ನು ಧರಿಸಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು ನಂತರ ವೀಡಿಯೊ ತೆಗೆಯಲಾಗಿದೆ . ಮನಸ್ಸಿನಲ್ಲಿ ಕಿಡಿಗೇಡಿತನದಿಂದ, ವಧು ನಂತರ ವರನನ್ನು ಕೊಳಕ್ಕೆ ತಳ್ಳಲು ಪ್ರಯತ್ನಿಸುತ್ತಾಳೆ. ಆದಾಗ್ಯೂ, ಅವನು ಅವಳನ್ನು ತನ್ನೊಂದಿಗೆ ಎಳೆದುಕೊಂಡು ಹೋಗುತ್ತಾನೆ ಮತ್ತು ಇಬ್ಬರೂ ಕೊಳದಲ್ಲಿ ಬೀಳುತ್ತಾರೆ. ಇಬ್ಬರು ಕೊಳದೊಳಗೆ ನಗುತ್ತಿರುವ ಮತ್ತು ಅಪ್ಪಿಕೊಳ್ಳತ್ತಿರವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು, ಕ್ಷಣವನ್ನು ಅವರಿಬ್ಬರು ಮಧುರವಾಗಿ ಕಳೆದಿದ್ದಾರೆ.

ವೀಡಿಯೊ ವೈರಲ್ ಆಗುತ್ತಿದಂತೆ ದಂಪತಿಗಳು ಈ ದೃಶ್ಯಕ್ಕೆ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.  ಇವರಿಬ್ಬರ ತಮಾಷೆಯನ್ನು ಇಷ್ಟಪಟ್ಟಿದ್ದಾರೆ, ಆದರೆ ಇತರರು ಮದುವೆಯ ಬಟ್ಟೆಗಳ ಬಗ್ಗೆ ಚಿಂತಿತರಾಗಿದ್ದರು. ಈ ವಿಡಿಯೋ ನೋಡಿದ ಕಾಮೆಂಟ್ ಸೆಕ್ಷನ್‌ನಲ್ಲಿ ಜನರು ನಗುವ ಎಮೋಜಿಗಳನ್ನು ಸುರಿಯುತ್ತಿದ್ದಾರೆ. ಒಬ್ಬ ಬಳಕೆದಾರನು ತಮಾಷೆಯಾಗಿ ಕಾಮೆಂಟ್ ಮಾಡಿದನು, “ನನಗೆ ಲೆಹೆಂಗೆ ಕಾ ವೇಯ್ಟ್ ವೋ ಉತಯೇಗಾ ಮಾಡಿದರೆ ನಾನು ಅವನಿಗೆ ವಿಚ್ಛೇದನ ನೀಡುತ್ತೇನೆ.” ಮತ್ತೊಬ್ಬರು ಹೀಗೆ ಬರೆದಿದ್ದಾರೆ, ”ಹ್ಮ್ ತೋ ದುಬೇಗೇ ಸನಮ್ ….ಸಾಥ್ ಮೆ ತ್ಮಕೋ ಭಿ ಲೇ ದುಬೇಗೇ.” ಇನ್ನೊಬ್ಬರು, “ಇದು ತುಂಬಾ ಖುಷಿಯಾಗಿದೆ ಮೈ ಅಪ್ನಿ ಬೆಸ್ಟ್ ಫ್ರೆಂಡ್ ಕೊ ಉಸ್ಕಿ ಶಾದಿ ಮೆ ಐಸೆ ಹೈ ಧಕಲ್ ಕೆ ಭಾಗ್ ಜೌಂಗಿ.” ಎಂದು ಬರೆದುಕೊಂಡಿದ್ದಾರೆ.

Published On - 12:57 pm, Fri, 6 May 22