Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಿಯುಪೋಲ್ ಉಕ್ಕಿನ ಸ್ಥಾವರನಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಸ್ಥಳಾಂತರಿಸಲಾಗಿದೆ: ಉಕ್ರೇನ್

ಬೃಹತ್ ಉಕ್ಕಿನ ಸ್ಥಾವರದಿಂದ ಒಟ್ಟು 50 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಐರೀನಾ ಹೇಳಿದ್ದಾರೆ. ರಷ್ಯಾದ ರಕ್ಷಣಾ ಸಚಿವಾಲಯ ನೀಡಿರುವ ಹೇಳಿಕೆಯ ಪ್ರಕಾರ ಸ್ಥಳಾಂತರಗೊಂಡಿರುವವರ ಪೈಕಿ 11 ಮಕ್ಕಳಿದ್ದು ಅವರೆಲ್ಲರನ್ನು ವಿಶ್ವಸಂಸ್ಥೆ ಮತ್ತು ರೆಡ್ ಕ್ರಾಸ್ ಸಂಚಾಲಿತ ಮಾನವೀಯ ಮಿಷನ್ ಅಂಗವಾಗಿ ಸ್ಥಳಾಂತರಿಸಲಾಗಿದೆ.

ಮರಿಯುಪೋಲ್ ಉಕ್ಕಿನ ಸ್ಥಾವರನಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಸ್ಥಳಾಂತರಿಸಲಾಗಿದೆ: ಉಕ್ರೇನ್
ಉಕ್ಕಿನ ಸ್ಥಾವರದಲ್ಲಿ ಸಿಲುಕಿಕೊಂಡಿದ್ದ ಮಕ್ಖಳು ಮತ್ತು ಸ್ತ್ರೀಯರನ್ನುಸ್ಥಳಾಂತರಿಸಲಾಗುತ್ತಿದೆ
Follow us
TV9 Web
| Updated By: shivaprasad.hs

Updated on: May 08, 2022 | 10:00 AM

ಕೀವ್: ಮಹಾನ್ ಶಕ್ತಿಶಾಲಿ ಅಂತ ಬಿಂಬಿಸಿಕೊಂಡು ಉಕ್ರೇನನ್ನು ಸರ್ವನಾಶ ಮಾಡುವ ಹಟತೊಟ್ಟು, ಯಾರಾದರೂ ಉಕ್ರೇನ್ (Ukraine) ಸಹಾಯಕ್ಕೆ ಬಂದರೆ ಮೂರನೇ ಮಹಾಯುದ್ಧ ಆಗಲಿದೆ, ತಾನು ಅಣ್ವಸ್ತ್ರಗಳನ್ನು ಬಳಸುವುದು ಅನಿವಾರ್ಯವಾಗುತ್ತದೆ ಅಂತ ಬಲಿಷ್ಠ ಯುಎಸ್ ಸೇರಿದಂತೆ ಹಲವಾರು ಯುರೋಪಿಯನ್ ರಾಷ್ಟ್ರಗಳಿಗೆ ಬೆದರಿಕೆ ಹಾಕಿದ್ದ ರಷ್ಯಾ ಮತ್ತು ಅದರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೆ (Vladimir Putin) ಗರ್ವಭಂಗವಾಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಉಕ್ರೇನ್ ವೊಲೊದಿಮಿರ್ ಜೆಲೆನ್ಸ್ಕಿ ಅವರು ಈ ಯುದ್ಧದಲ್ಲಿ ಹೀರೋ ಆಗಿ ಹೊರಹೊಮಿದ್ದಾರೆ. ಅವರು ತೆಗೆದುಕೊಂಡ ನಿರ್ಣಯಗಳು, ಐರೋಪ್ಯ ರಾಷ್ಟ್ರಗಳ (European countries) ಮತ್ತು ಯುಎಸ್ ತನಗೆ ಕೋರಿ ಮಾಡಿದ ಭಾಷಣಗಳು ಅವರ ವೈರಿಗಳಿಂದಲೂ ಶ್ಲಾಘನೆಗೊಳಗಾಗಿವೆ. ಅತ್ತ ಅಪ್ಪಟ ಸರ್ವಾಧಿಕಾರಿಯಂತೆ ವರ್ತಿಸಿ ಉಕ್ರೆನ್ ಜೊತೆ ಹೋರಾಟಕ್ಕಿಳಿದ ಪುಟಿನ್ ಖುದ್ದು ತಾವೇ ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದಾರೆ.

ಉಕ್ರೇನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ವಿಷಯಕ್ಕೆ ಬಂದರೆ ರಷ್ಯನ್ ಸೇನೆಯಿಂದ ನಾಶಗೊಂಡಿರುವ ಅಲ್ಲಿನ ಬಂದರು ಪಟ್ಟಣ ಮರಿಯುಪೋಲ್ ನ ಅಜೋವ್ಸ್ಟಾಲ್ ಉಕ್ಕಿನ ಸ್ಥಾವರದಲ್ಲಿ ರಕ್ಷಣೆ ಪಡೆದಿದ್ದ ಎಲ್ಲಾ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಯಕರನ್ನು ಶನಿವಾರದಂದು ಹೊರತರಲಾಗಿದೆ. ಈ ಸ್ಥಾವರ ರಷ್ಯನ್ ಸೈನಿಕರು ವಶಪಡಿಸಿಕೊಳ್ಳದ ಹಾಗೆ ಉಕ್ರೇನ್ ಸೈನಿಕರು ಅದರ ಕಾವಲಿಗೆ ನಿಂತಿದ್ದರು.

‘ಅಧ್ಯಕ್ಷ ವೊಲೊದಿಮಿರ್ ಅವರು ಜಾರಿಗೊಳಿಸಿದ ಅದೇಶವನ್ನು ಕಾರ್ಯಗತಗೊಳಿಸಲಾಗಿದೆ. ಅಜೋವ್ಸ್ಟಾಲ್ ಉಕ್ಕಿನ ಸ್ಥಾವರದಲ್ಲಿ ಆಶ್ರಯ ಪಡೆದಿದ್ದ ಎಲ್ಲ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ಮರಿಯುಪೋಲ್ ನ ಈ ಭಾಗದಲ್ಲಿ ಮಾನವೀಯ ಮಿಷನ್ ಸಂಪೂರ್ಣಗೊಂಡಿದೆ,’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ಹೇಳಿಕೆಯೊಂದಲ್ಲಿ ಉಕ್ರೇನ್ ಉಪ ಪ್ರಧಾನ ಮಂತ್ರಿ ಐರೀನಾ ವಿರೇಶ್ ಚುಕ್ ಹೇಳಿದ್ದಾರೆ.

ಇದನ್ನೂ ಓದಿ
Image
Tornado: ಅಸ್ಸಾಂನಲ್ಲಿ ಕಾಣಿಸಿಕೊಂಡ ಅಪರೂಪದ ಸುಂಟರಗಾಳಿ; ವಿಡಿಯೋ ಇಲ್ಲಿದೆ
Image
ಅಪಘಾತ ತಪ್ಪಿಸಲು ಹೋಗಿ 2 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್; ಮೈ ಜುಂ ಎನಿಸುವಂತಿದೆ ಅಪಘಾತದ ದೃಶ್ಯಗಳು
Image
Viral News: ಗೆಳೆಯನಿಂದ ಗರ್ಭಿಣಿಯಾಗಲೇಬೇಕೆಂಬ ಹಠದಿಂದ ಎಡವಟ್ಟು ಮಾಡಿಕೊಂಡ ಮಹಿಳೆ; ಅಷ್ಟಕ್ಕೂ ಆಗಿದ್ದೇನು?

ಅಜೋವ್​ಸ್ಟಾಲ್  ಉಕ್ಕಿನ ಸ್ಥಾವರವು ಧ್ವಂಸಗೊಂಡಿರುವ ಬಂದರು ನಗರದಲ್ಲಿ ಉಕ್ರೇನಿಯನ್ ಪ್ರತಿರೋಧದ ಕೊನೆಯ ತಾಣವಾಗಿದ್ದು ಮತ್ತು ರಷ್ಯಾ ತನ್ನ ಮೇಲೆ ಆಕ್ರಮಣ ಆರಂಭಿಸಿದ ನಂತರದ ವಿಸ್ತೃತ ಯುದ್ಧದಲ್ಲಿ ಉಕ್ರೇನ್ ಭವಿಷ್ಯದ ಸಾಂಕೇತಿಕ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ.

ಬೃಹತ್ ಉಕ್ಕಿನ ಸ್ಥಾವರದಿಂದ ಒಟ್ಟು 50 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಐರೀನಾ ಹೇಳಿದ್ದಾರೆ. ರಷ್ಯಾದ ರಕ್ಷಣಾ ಸಚಿವಾಲಯ ನೀಡಿರುವ ಹೇಳಿಕೆಯ ಪ್ರಕಾರ ಸ್ಥಳಾಂತರಗೊಂಡಿರುವವರ ಪೈಕಿ 11 ಮಕ್ಕಳಿದ್ದು ಅವರೆಲ್ಲರನ್ನು ವಿಶ್ವಸಂಸ್ಥೆ ಮತ್ತು ರೆಡ್ ಕ್ರಾಸ್ ಸಂಚಾಲಿತ ಮಾನವೀಯ ಮಿಷನ್ ಅಂಗವಾಗಿ ಸ್ಥಳಾಂತರಿಸಲಾಗಿದೆ.

ಒಂದು ಮೂಲದ ಪ್ರಕಾರ ಉಕ್ಕಿನ ಪ್ಲ್ಯಾಂಟ್​ನ ಕೆಳಭಾಗದಲ್ಲಿ ಸೋವಿಯತ್-ಶಕೆಯ ಸುರಂಗ ಮಾರ್ಗ ಮತ್ತು ಬಂಕರ್ ಗಳಲ್ಲಿ ಈಗಲೂ ಸುಮಾರು 200 ಜನ ಸಿಲುಕಿಕೊಂಡಿದ್ದು ಉಕ್ರೇನ್ ಸೇನೆಯ ಒಂದು ತುಕುಡಿ ಅವರಿಗೆ ಭದ್ರತೆ ಒದಗಿಸಿದೆ.

ಸಿಲುಕಿಕೊಂಡಿರುವ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯ ಜಾರಿಯಲ್ಲಿರುವಂತೆಯೇ ಮರಿಯುಪೋಲ್ ಉಕ್ಕಿನ ಸ್ಥಾವರದಲ್ಲಿ ಸಿಲುಕಿರುವ ಉಕ್ರೇನಿನ ಸೈನಿಕರನ್ನು ರಕ್ಷಿಸಲು ರಾಜತಾಂತ್ರಿಕ ಮಾತುಕತೆಗಳು ಜಾರಿಯಲ್ಲಿವೆ ಎಂದು ಜೆಲೆನ್ಸ್ಕಿ ಶುಕ್ರವಾರದಂದು ಹೇಳಿದ್ದರು.

ಇದನ್ನೂ ಓದಿ:   Narendra Modi Europe visit ಉಕ್ರೇನ್ ಸಂಘರ್ಷದಲ್ಲಿ ಯಾವುದೇ ದೇಶ ವಿಜಯಶಾಲಿಯಾಗಲು ಸಾಧ್ಯವಿಲ್ಲ: ನರೇಂದ್ರ ಮೋದಿ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ