Viral Video: ಬೋರ್​ವೆಲ್ ಕೆಳಗೆ ಕುಳಿತು ಸ್ನಾನ ಮಾಡಿದ ಬಿಜೆಪಿ ಸಚಿವ; ವಿಡಿಯೋ ವೈರಲ್

ಬೋರ್​ವೆಲ್​ನಿಂದ ನೀರನ್ನು ಪಂಪ್ ಮಾಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ತಣ್ಣನೆಯ ನೀರನ್ನು ಮೈಮೇಲೆ ಹಾಕಿಕೊಂಡು, ನೆಲದ ಮೇಲೇ ಕುಳಿತು ಸಚಿವರು ಸ್ನಾನ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

Viral Video: ಬೋರ್​ವೆಲ್ ಕೆಳಗೆ ಕುಳಿತು ಸ್ನಾನ ಮಾಡಿದ ಬಿಜೆಪಿ ಸಚಿವ; ವಿಡಿಯೋ ವೈರಲ್
ಉತ್ತರ ಪ್ರದೇಶದ ಸಚಿವರ ಸ್ನಾನ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:May 07, 2022 | 5:07 PM

ನವದೆಹಲಿ: ತಮ್ಮ ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದ ಉತ್ತರ ಪ್ರದೇಶದ ಸಚಿವರೊಬ್ಬರು (Uttar Pradesh Minister) ನೆಲದ ಮೇಲೆ ಕುಳಿತು ಬೋರ್​ವೆಲ್​ನ ನೀರಿನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ನಮ್ಮ ಸರ್ಕಾರದಲ್ಲಿ ವಿಐಪಿ (VIP)ಸಂಸ್ಕೃತಿ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಬೋರ್​ವೆಲ್​ನಿಂದ ನೀರನ್ನು ಪಂಪ್ ಮಾಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಆ ತಣ್ಣನೆಯ ನೀರನ್ನು ಮೈಮೇಲೆ ಹಾಕಿಕೊಂಡು, ನೆಲದ ಮೇಲೇ ಕುಳಿತು ಸಚಿವರು ಸ್ನಾನ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಚಿವ ನಂದ ಗೋಪಾಲ್ ಗುಪ್ತಾ ‘ನಂದಿ’ ಶಹಜಹಾನ್‌ಪುರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಒಂದು ವಿಡಿಯೋ ಕ್ಲಿಪ್‌ನಲ್ಲಿ ಅವರು ಹ್ಯಾಂಡ್ ಪಂಪ್ ಬಳಿ ಸ್ನಾನ ಮಾಡುತ್ತಿರುವುದನ್ನು ನೋಡಬಹುದು. ಈ ವಿಡಿಯೋ ಕ್ಲಿಪ್ ಶಹಜಹಾನ್‌ಪುರ ಜಿಲ್ಲೆಯ ಚಕ್ ಕನ್ಹೌ ಗ್ರಾಮದಲ್ಲಿ ಚಿತ್ರೀಕರಣಗೊಂಡಿದೆ. ಸಚಿವ ನಂದ ಗೋಪಾಲ್ ತಮ್ಮ ಕಾರ್ಯಕರ್ತರ ಮನೆಯಲ್ಲಿ ಬೆಳಗ್ಗೆ ಒಂದು ಕಪ್ ಚಹಾ ಕುಡಿದು, ನಂತರ ಅಲ್ಲೇ ಹೊರಗೆ ಸ್ನಾನ ಮಾಡಿದ್ದಾಗಿ ಅವರೇ ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಈ ವಿಡಿಯೋದ ಜೊತೆಗೆ ಇನ್ನೂ ಒಂದೆರಡು ವಿಡಿಯೋಗಳನ್ನು ಪೋಸ್ಟ್​ ಮಾಡಲಾಗಿದ್ದು, ನಂದ ಗೋಪಾಲ್ ತಮ್ಮ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ರೆಡಿಯಾಗುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇದು ಯೋಗಿ ಸರ್ಕಾರ. ನಮ್ಮ ಸರ್ಕಾರ ಮತ್ತು ಹಿಂದಿನ ಸರ್ಕಾರಗಳ ನಡುವಿನ ವ್ಯತ್ಯಾಸವನ್ನು ನೀವೇ ನೋಡುತ್ತಿದ್ದೀರಿ. ಯೋಗಿ ಸರ್ಕಾರ ಮತ್ತು ಸಾಮಾನ್ಯ ಜನರ ನಡುವೆ ಯಾವುದೇ ಅಂತರ ಅಥವಾ ಯಾವುದೇ ವ್ಯತ್ಯಾಸವಿಲ್ಲ. ಈ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿ ಇಲ್ಲ. ಹಾಗಾಗಿಯೇ ನಾನು ಜನಸಾಮಾನ್ಯರಂತೆ ಬೋರ್​ವೆಲ್​ನ ತಣ್ಣೀರಿನಲ್ಲಿ ಸ್ನಾನ ಮಾಡಿ, ಅವರಂತೆಯೇ ದಿನ ಕಳೆದಿದ್ದೇನೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. (Source)

ಕಳೆದ ವಾರ, ಬರೇಲಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಂದ ಗೋಪಾಲ್ ಗುಪ್ತಾ ಅವರು ಭರತೌಲ್ ಗ್ರಾಮದ ನಾಗರಿಕರ ಮನೆಯಲ್ಲಿ ರಾತ್ರಿ ತಂಗಿದ್ದರು. ಅಲ್ಲಿಯೂ ಕೈ ಪಂಪ್‌ನಿಂದ ಬಕೆಟ್​ನಲ್ಲಿ ನೀರು ಹಿಡಿದುಕೊಂಡು, ಸ್ನಾನ ಮಾಡಿ ಕೂತ ವಿಡಿಯೋವನ್ನು ಶೇರ್ ಮಾಡಿದ್ದರು.

ಸಚಿವರ ಸರಳತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ಈ ಸರಳತೆಯನ್ನು ಇಷ್ಟಪಡುತ್ತಾರೆ ಎಂದು ಟ್ವಿಟ್ಟಿಗರು ಹೇಳಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Sat, 7 May 22