Viral Video: ಕಾಡಿನ ರಾಜ ಸಿಂಹವನ್ನು ಬರಿಯ ಕೋಲಿನಿಂದ ಅಟ್ಟಿದ ವ್ಯಕ್ತಿ; ವೈರಲ್ ಆಯ್ತು ವಿಡಿಯೋ
Trending Video: ಕಾಡಿನ ರಾಜ, ಅಪಾಯಕಾರಿ ಪ್ರಾಣಿಯಾಗಿರುವ ಸಿಂಹವನ್ನು ನರಮನುಷ್ಯನೊಬ್ಬ ಬರಿಯ ಕೋಲಿನಿಂದ ಅಟ್ಟಿ ಬೆರೆಸುವುದನ್ನು ಸಾಮಾನ್ಯವಾಗಿ ಕಲ್ಪಿಸಿಕೊಳ್ಳಲೂ ಅಸಾಧ್ಯ. ಆದರೆ ಈ ಪ್ರಕರಣದಲ್ಲಿ ಅದು ನಿಜವಾಗಿದೆ.
ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸವಿದ್ದರೆ ಎಂತಹ ಕಷ್ಟಕಾಲವನ್ನು ಎದುರಿಸಿ ವಿಜಯಶಾಲಿಯಾಗಬಹುದು ಎಂದು ತಿಳಿದವರು ಹೇಳುತ್ತಾರೆ. ಹೀಗಾಗಿಯೇ ಪ್ರತಿಯೊಂದು ಕಾರ್ಯಕ್ಕೂ ಆತ್ಮವಿಶ್ವಾಸವೇ ಕೀಲಿಕೈ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಸಾಮಾನ್ಯ ಮನುಷ್ಯನೊಬ್ಬ ಸಿಂಹವೊಂದನ್ನು ಅಟ್ಟಿದ್ದಾನೆ. ಅದರಲ್ಲೂ ವಿಶೇಷವಿದೆ. ಕಾಡಿನ ರಾಜ, ಅಪಾಯಕಾರಿ ಪ್ರಾಣಿಯಾಗಿರುವ ಸಿಂಹವನ್ನು (Lion) ನರಮನುಷ್ಯನೊಬ್ಬ ಬರಿಯ ಕೋಲಿನಿಂದ ಅಟ್ಟಿ ಬೆರೆಸುವುದನ್ನು ಸಾಮಾನ್ಯವಾಗಿ ಕಲ್ಪಿಸಿಕೊಳ್ಳಲೂ ಅಸಾಧ್ಯ. ಆದರೆ ಈ ಪ್ರಕರಣದಲ್ಲಿ ಅದು ನಿಜವಾಗಿದೆ. ಈ ವಿಚಿತ್ರ ಪ್ರಕರಣ ಸದ್ಯ ಎಲ್ಲೆಡೆ ಸಖತ್ ಸುದ್ದಿಯಾಗುತ್ತಿದೆ. ಈ ಘಟನೆ ಓದಿದ ತಕ್ಷಣ ನಿಮಗೆ ಆ ಸಿಂಹ ಮೃಗಾಲಯದ್ದಾಗಿರಬಹುದು. ಹೀಗಾಗಿಯೇ ಅದು ತುಸು ಸೌಮ್ಯ ಸ್ವಭಾವದ್ದಾಗಿರಬಹುದು ಎನ್ನಬಹುದು. ಆದರೆ ವಾಸ್ತವವಾಗಿ ಈ ಘಟನೆ ನಡೆದಿರುವುದು ಮೃಗಾಲಯದಲ್ಲಲ್ಲ. ಬದಲಾಗಿ ಕಾಡಿನಲ್ಲಿ.
ಸಿಂಹವನ್ನು ಮನುಷ್ಯ ಉದ್ದನೆಯ ಕೋಲಿನ ಸಹಾಯದಿಂದ ಬೆದರಿಸಿ ಮರಳಿ ಓಡಿಸಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 56,000ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. ಮನುಷ್ಯನ ಆತ್ಮವಿಶ್ವಾಸ ನೆಟ್ಟಿಗರ ಮನಗೆದ್ದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಇಲ್ಲಿದೆ:
View this post on Instagram
ಈ ವಿಡಿಯೋಕ್ಕೆ ಜನರು ಬಗೆಬಗೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘‘ಸಿಂಹವೊಂದು ತಾನು ಸಿಂಹವೆಂದೇ ಮರೆತರೆ ಹೀಗಾಗುತ್ತದೆ’’ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೋರ್ವರು ಸಿಂಹಕ್ಕೆ ಹಸಿವಿರಲಿಲ್ಲ. ಹಾಗಾಗಿ ಅದು ಓಡಿ ಹೋಗಿರಬಹುದು ಎಂದಿದ್ದಾರೆ. ಒಟ್ಟಿನಲ್ಲಿ ನೆಟ್ಟಿಗರ ನಡುವೆಯೇ ವಿಡಿಯೋ ಕುರಿತು ಮಜವಾದ ಚರ್ಚೆ ನಡೆದಿದೆ. ವಿಡಿಯೋದಲ್ಲಿ ಕಾಣಸಿಗುವ ಮನುಷ್ಯ ಆ ಸಿಂಹದ ತರಬೇತುದಾರನಾಗಿರಬಹುದು. ಹೀಗಾಗಿಯೇ ಸಿಂಹ ಹಾಗೆ ಪ್ರತಿಕ್ರಿಯಿಸಿರಬಹುದು ಎಂದು ಮತ್ತೋರ್ವರು ಅಭಿಪ್ರಾಯಪಟ್ಟಿದ್ದಾರೆ.
ಮನುಷ್ಯರು ಸಿಂಹದ ಆವಾಸ ಸ್ಥಾನಕ್ಕೆ ತೆರಳಿ ಅವುಗಳಿಗೆ ತೊಂದರೆ ಕೊಡಬಾರದು. ಅವುಗಳನ್ನು ಸ್ವಾಭಾವಿಕವಾಗಿ ಬದುಕಲು ಬಿಡಿ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೋರ್ವರು ‘ಈ ವಿಡಿಯೋ ನಕಲಿ. ಆ ಸಿಂಹ ತರಬೇತಿ ಪಡೆದಿರುವ ಸಿಂಹ. ಕ್ಯಾಮೆರಾಮೆನ್ ಕೂಡ ಈ ಘಟನೆಯ ವೇಳೆ ಭಯಪಟ್ಟಿಲ್ಲ. ಹೀಗಾಗಿ ಇಡೀ ದೃಶ್ಯ ನೈಜವಲ್ಲ’ ಎಂದು ಬರೆದಿದ್ದಾರೆ. ವಿಡಿಯೋ ನೋಡಿದ ನಿಮಗೇನನ್ನಿಸಿತು?
ಇನ್ನಷ್ಟು ಕುತೂಹಲಕರ ವಿಚಾರ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ