‘ಸಾಕ್ಷಿಗಳನ್ನು ಮಂಗ ಹೊತ್ತೊಯ್ದಿದೆ’; ಕೊಲೆ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯದ ಮುಂದೆ ಪೊಲೀಸರ ಹೇಳಿಕೆ

Murder Case | Rajasthan: ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ಮುಂದೆ ರಾಜಸ್ಥಾನದ ಪೊಲೀಸರು ಈ ವಿಚಿತ್ರ ವಿವರಣೆಯನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ತಾವು ಸಂಗ್ರಹಿಸಿದ ಸಾಕ್ಷ್ಯವನ್ನು ಮಂಗವೊಂದು ಕದ್ದೊಯ್ದಿದೆ ಎಂದು ಪೊಲೀಸರು ಹೇಳಿದ್ದಾರೆ. ಏನಿದು ಪ್ರಕರಣ? ಇಲ್ಲಿದೆ ನೋಡಿ.

‘ಸಾಕ್ಷಿಗಳನ್ನು ಮಂಗ ಹೊತ್ತೊಯ್ದಿದೆ’; ಕೊಲೆ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯದ ಮುಂದೆ ಪೊಲೀಸರ ಹೇಳಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:May 06, 2022 | 3:49 PM

ಕೊಲೆ ಪ್ರಕರಣದಲ್ಲಿ ಪ್ರಕರಣಕ್ಕೆ ಬಳಸಲಾದ ಚಾಕು ಸೇರಿದಂತೆ ಪ್ರಮುಖ ಸಾಕ್ಷಾಧಾರಗಳನ್ನು ಮಂಗವೊಂದು ಹೊತ್ತೊಯ್ದಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರೆ ಹೇಗಿದ್ದೀತು? ಇಂಥದ್ದೊಂದು ಘಟನೆ ನಡೆಯುವುದು ಅಸಾಧ್ಯ ಎಂದು ನೀವು ಯೋಚಿಸಬಹುದು. ಆದರೆ ರಾಜಸ್ಥಾನದಲ್ಲಿ (Rajasthan) ಇದು ವರದಿಯಾಗಿದೆ. ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ಮುಂದೆ ರಾಜಸ್ಥಾನದ ಪೊಲೀಸರು ಈ ವಿಚಿತ್ರ ವಿವರಣೆಯನ್ನು ನೀಡಿದ್ದಾರೆ. ಈ ಪ್ರಕರಣದಲ್ಲಿ ತಾವು ಸಂಗ್ರಹಿಸಿದ ಸಾಕ್ಷ್ಯವನ್ನು ಮಂಗವೊಂದು ಕದ್ದೊಯ್ದಿದೆ ಎಂದು ಪೊಲೀಸರು ಹೇಳಿದ್ದನ್ನು ಟೈಮ್ಸ್ ಆಫ್ ಇಂಡಿಯಾ ವರದಿಮಾಡಿದೆ. ಸೆಪ್ಟೆಂಬರ್ 2016 ರಲ್ಲಿ ರಾಜಸ್ಥಾನದ ರಾಜಧಾನಿ ಜೈಪುರದ ಚಾಂದ್ವಾಜಿ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಶಿಕಾಂತ್ ಶರ್ಮಾ ಎಂಬುವರ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಅವರ ಶವ ಪತ್ತೆಯಾಗುವ ಮೊದಲು ಮೂರು ದಿನಗಳ ಕಾಲ ಅವರು ನಾಪತ್ತೆಯಾಗಿದ್ದರು. ಶರ್ಮಾ ಅವರ ಕುಟುಂಬವು ಈ ಸಾವನ್ನು ಕೊಲೆ ಎಂದು ಆರೋಪಿಸಿತ್ತು.

ಆರೋಪಿಗಳ ಬಂಧನ:

ಕುಟುಂಬಸ್ಥರ ಪ್ರತಿಭಟನೆಯ ನಂತರ ಪೊಲೀಸರು ರಾಹುಲ್ ಮತ್ತು ಮೋಹನ್ ಲಾಲ್ ಕಂಡೇರಾ ಎಂಬ ಇಬ್ಬರನ್ನು 5 ದಿನಗಳ ನಂತರ ಬಂಧಿಸಿದರು. ಇಬ್ಬರೂ ಚಂದವಾಜಿಯ ನಿವಾಸಿಗಳಾಗಿದ್ದರು. ಆರೋಪಿಗಳನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೊಲೆಯ ಆಯುಧ ಸೇರಿದಂತೆ ಎಲ್ಲಾ ಪುರಾವೆಗಳನ್ನು ಹೊಂದಿರುವ ಬ್ಯಾಗ್ ಅನ್ನು ಪೊಲೀಸ್ ಠಾಣೆಯಲ್ಲಿ ಮರದ ಕೆಳಗೆ ಇಡಲಾಗಿತ್ತು. ಕಾರಣ ಅದನ್ನು ಬೇರೆಡೆ ಇಡಲು ಜಾಗವಿರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ
Image
ಶವರ್ಮಾ ತಿಂದು ಬಾಲಕಿ ಸಾವು; ಆಕೆ ಸೇವಿಸಿದ ಆಹಾರದಲ್ಲಿತ್ತು ಶಿಗೆಲ್ಲ ಬ್ಯಾಕ್ಟೀರಿಯಾ, ಏನಿದು? ಇದೆಷ್ಟು ಅಪಾಯಕಾರಿ?
Image
World’s tallest Dog: ಪ್ರಪಂಚದ ಅತ್ಯಂತ ಎತ್ತರದ ಶ್ವಾನ ಎಂಬ ದಾಖಲೆ ಬರೆದ ‘ಜೀಯಸ್’; ಇಲ್ಲಿದೆ ಕುತೂಹಲಕರ ವಿಚಾರ
Image
ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆ ಮೂಲಭೂತ ಹಕ್ಕು ಅಲ್ಲ: ಅಲಹಾಬಾದ್ ಹೈಕೋರ್ಟ್ ತೀರ್ಪು
Image
Swiggy: ಸ್ವಿಗ್ಗಿಯಲ್ಲಿ ಕಾಫಿ ಆರ್ಡರ್ ಮಾಡಿದ ಬೆಂಗಳೂರು ಯುವಕ; ಡೆಲಿವರಿ ಬಾಯ್ ಏನು ಮಾಡಿದ ಗೊತ್ತಾ?

ಪ್ರಕರಣಕ್ಕೆ ಟ್ವಿಸ್ಟ್; ಸಾಕ್ಷಿ ಸಮೇತ ಓಡಿಹೋದ ಮಂಗ:

ವಿಚಾರಣೆಯು ವರ್ಷಗಳ ಕಾಲ ಹಲವಾರು ಹಂತಗಳಲ್ಲಿ ಸಾಗಿತ್ತು. ಇತ್ತೀಚೆಗೆ ನ್ಯಾಯಾಲಯವು ಸಾಕ್ಷ್ಯವನ್ನು ಪ್ರಸ್ತುತಪಡಿಸಲು ಪೊಲೀಸರನ್ನು ಕೇಳಿದಾಗ, ಅವರು ಅದನ್ನು ಕೋತಿ ಕದ್ದಿದೆ ಎಂದು ಹೇಳಿದ್ದಾರೆ. ಬ್ಯಾಗ್‌ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ 15 ಪ್ರಮುಖ ಸಾಕ್ಷ್ಯಗಳಿದ್ದವು. ಅವುಗಳು ಸಹ ಕಾಣೆಯಾಗಿವೆ. ಪೊಲೀಸರು ಕೆಳ ನ್ಯಾಯಾಲಯದಲ್ಲಿ ಲಿಖಿತ ಹೇಳಿಕೆ ನೀಡಿ ತಮ್ಮ ಬಳಿಯಿರುವ ಸಾಕ್ಷ್ಯಾಧಾರಗಳನ್ನು ಕಳವು ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದಾರೆ.

ಪೊಲೀಸರ ಹೇಳಿಕೆಯಿಂದ ನ್ಯಾಯಾಲಯವು ಅಸಮಾಧಾನಗೊಂಡಿದ್ದು, ಪೊಲೀಸರಿಗೆ ನೋಟಿಸ್ ನೀಡಿದೆ. ನಂತರ ಇಲಾಖೆಯು ‘ಅಜಾಗರೂಕ’ ಕಾರ್ಯನಿರ್ವಹಣೆ ತೋರಿದ ಕಾನ್‌ಸ್ಟೆಬಲ್ ಅವರನ್ನು ದೂಷಿಸಿದೆ. ಘಟನೆಯ ನಂತರ ಕಾನ್‌ಸ್ಟೆಬಲ್ ಅವರನ್ನು ಅಮಾನತುಗೊಳಿಸಲಾಗಿದೆ. ನಂತರದಲ್ಲಿ ಅವರು ನಿವೃತ್ತರಾದರು ಮತ್ತು ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಇನ್ನಷ್ಟು ಕುತೂಹಲಕರ ವಿಚಾರ ಓದಲು ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Fri, 6 May 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್