ತಜೀಂದರ್ ಸಿಂಗ್ ಬಗ್ಗಾ ಬಂಧನ ವಿವಾದ: ಬಿಜೆಪಿಯ ಕಪಿಲ್ ಮಿಶ್ರಾಗೆ ಬೆದರಿಕೆ ಹಾಕಿದ ಆಪ್ ವಕ್ತಾರ
ಟ್ವೀಟ್ಗೆ ಪ್ರತಿಕ್ರಿಯಿಸಿದ ಘನೇಂದ್ರ ಭಾರದ್ವಾಜ್ ಅವರು ಮಿಶ್ರಾ ಜೀ, ನೀವು ತುಂಬಾನೇ ವಿಷ ಕಾರುತ್ತಿದ್ದೀರಿ , ನೀವು ಬೇಗನೆ ನಿಮ್ಮ ದಾರಿ ಸರಿ ಪಡಿಸಿಕೊಳ್ಳಿ ,ಇಲ್ಲವಾದರೆ ಮುಂದಿನ ಬಾರಿ ನಿಮಗೂ ಇದೇ ರೀತಿ ಆಗುತ್ತದೆ ಎಂದಿದ್ದಾರೆ.
ದೆಹಲಿ: ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ (Tajinder Pal Singh Bagga) ಅವರನ್ನು ಪಂಜಾಬ್ ಪೊಲೀಸರು ಬಂಧಿಸಿರುವ ರಾಜಕೀಯ ಗದ್ದಲದ ನಡುವೆ, ದೆಹಲಿ ಎಎಪಿ (AAP) ವಕ್ತಾರ ಘನೇಂದ್ರ ಭಾರದ್ವಾಜ್ (Ghanendra Bhardwaj) ಅವರು ಕಪಿಲ್ ಮಿಶ್ರಾ ಅವರಿಗೆ ಬೆದರಿಕೆ ಹಾಕಿರುವ ಟ್ವೀಟ್ ವೈರಲ್ ಆಗಿದೆ. ತೇಜಿಂದರ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರ 50 ಸಿಬ್ಬಂದಿಗಳು ಬಂಧಿಸಿ ಕರೆದೊಯ್ದಿದ್ದಾರೆ. ಬಗ್ಗಾ ಅವರು ಒಬ್ಬ ನಿಜವಾದ ಸರ್ದಾರ್ ಆಗಿದ್ದರೆ ಇಂಥಾ ಕೆಲಸದಿಂದ ಅವರನ್ನು ಹೆದರಿಸಲೂ ಆಗುವುದಿಲ್ಲ, ದುರ್ಬಲರನ್ನಾಗಿ ಮಾಡಲೂ ಸಾಧ್ಯವಿಲ್ಲ. ಒಬ್ಬ ನಿಜವಾದ ಸರ್ದಾರ್ನಿಂದ ಇಷ್ಟೊಂದು ಭಯ ಯಾಕೆ ಎಂದು ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಘನೇಂದ್ರ ಭಾರದ್ವಾಜ್ ಅವರು ಮಿಶ್ರಾ ಜೀ, ನೀವು ತುಂಬಾನೇ ವಿಷ ಕಾರುತ್ತಿದ್ದೀರಿ , ನೀವು ಬೇಗನೆ ನಿಮ್ಮ ದಾರಿ ಸರಿ ಪಡಿಸಿಕೊಳ್ಳಿ ,ಇಲ್ಲವಾದರೆ ಮುಂದಿನ ಬಾರಿ ನಿಮಗೂ ಇದೇ ರೀತಿ ಆಗುತ್ತದೆ ಎಂದಿದ್ದಾರೆ. “ಎಎಪಿಯ ಪೋಲೀಸ್, ಜೈಲು, ಸರ್ವಾಧಿಕಾರವು ನಮ್ಮನ್ನು ಮೌನವಾಗಿರಿಸಲು ಅಥವಾ ಹೆದರಿಸಲು ಸಾಧ್ಯವಿಲ್ಲ. ಬೆಳಗ್ಗೆಯಿಂದ ಎಎಪಿ ಕಾರ್ಯಕರ್ತರ ಇಂತಹ ಬೆದರಿಕೆಗಳು ಕೇಜ್ರಿವಾಲ್ ಈಗ ಪಂಜಾಬ್ ಪೊಲೀಸರನ್ನು ಬಳಸಿಕೊಂಡು ವಿಪಕ್ಷವನ್ನು ಮೌನಗೊಳಿಸುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.ಈ ಬಂಧನ ಪ್ರಕರಣದಲ್ಲಿ ಹರ್ಯಾಣ ಪೊಲೀಸರು ಭಾಗಿಯಾಗುವುದರೊಂದಿಗೆ ಪ್ರಮುಖ ರಾಜಕೀಯ ವಿವಾದವಾಗಿ ಹೊರಹೊಮ್ಮಿತು. ಹರ್ಯಾಣದ ಕುರುಕ್ಷೇತ್ರದಲ್ಲಿ, ಬಗ್ಗಾ ಅವರ ನಿವಾಸದಿಂದ ಬಲವಂತವಾಗಿ ಎತ್ತಿಕೊಂಡು ಹೋಗಲಾಗಿದೆ ಎಂಬ ಮಾಹಿತಿಯನ್ನು ಪರಿಶೀಲಿಸಲು ಹರ್ಯಾಣ ಪೊಲೀಸರು ಪಂಜಾಬ್ ಪೊಲೀಸರನ್ನು ತಡೆದರು. ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿಯ ಜನಕಪುರಿಯಲ್ಲಿರುವ ಅವರ ಮನೆಗೆ ಕೆಲವರು ಬಂದಿದ್ದಾರೆ ಎಂದು ಬಗ್ಗಾ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ.
मिश्रा जी आप भी बहुत जहर उगलते रहते हो, आप भी जल्द ही सुधर जाओ, नहीं तो अगली बारी आप की भी हो सकती है! https://t.co/z7AIjmKrrz
ಇದನ್ನೂ ಓದಿ— Ghanendra Bhardwaj (@GhanendraB) May 6, 2022
ತನಿಖೆಗೆ ಸಹಕರಿಸುವಂತೆ ಆರೋಪಿಗೆ ಐದು ನೋಟಿಸ್‌ಗಳನ್ನು ನೀಡಲಾಗಿದೆ ಅವರು ಪ್ರತಿಕ್ರಿಯಿಸಲಿಲ್ಲ ಎಂದು ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. ಪಂಜಾಬ್‌ನಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಟ್ವೀಟ್ ಮಾಡಿದ್ದಕ್ಕಾಗಿ ತಜೀಂದರ್ ಬಗ್ಗಾ ಅವರನ್ನು ಬಂಧಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
#WATCH | Team of Delhi Police leaves with BJP leader Tajinder Pal Singh Bagga from Thanesar Sadar Police station in Haryana’s Kurukshetra
Bagga was arrested by Punjab Police today from Delhi. pic.twitter.com/rAn21Z24p5
— ANI (@ANI) May 6, 2022
ನಿನ್ನೆ ಸಂಜೆಯಿಂದ ದೆಹಲಿ ಪೊಲೀಸರು ಪಂಜಾಬ್ ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ: ಎಎಪಿ ಪಂಜಾಬ್ ಪೊಲೀಸರು ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಿದ್ದಾರೆ. ತಜೀಂದರ್ ಪಾಲ್ ಸಿಂಗ್ ಬಗ್ಗಾ ಬಂಧನದ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ದೆಹಲಿ ಪೊಲೀಸರು ನಿನ್ನೆ ಸಂಜೆಯಿಂದ ಪಂಜಾಬ್ ಪೊಲೀಸರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಶುಕ್ರವಾರ ಹೇಳಿದೆ. “ಬಿಜೆಪಿ, ದೆಹಲಿ ಪೊಲೀಸರು, ಹರ್ಯಾಣ ಪೊಲೀಸರು ಇಂದು ಗಲಭೆಕೋರ, ಗೂಂಡಾಗಿರಿ ಮಾಡುವ, ತಜೀಂದರ್ ಬಗ್ಗಾ ಅವರನ್ನು ಕಾಪಾಡಲು ಇದನ್ನೆಲ್ಲ ಮಾಡಿದ್ದಾರೆ. ಇದು ಗಲಭೆಕೋರರ ಪಕ್ಷವಾಗಿರುವ ಬಿಜೆಪಿ ಗಲಭೆಕೋರರನ್ನು ರಕ್ಷಿಸಲು ಯಾವುದೇ ಹಂತಕ್ಕೂ ಹೋಗಬಹುದು ಎಂಬುದನ್ನು ಇದು ಸಾಬೀತುಪಡಿಸುತ್ತದೆ” ಎಂದು ಅತಿಶಿ ಹೇಳಿದ್ದಾರೆ. ಅಂತಹ ಯಾವುದೇ ಬಂಧನಕ್ಕೂ ಮುನ್ನ ಪಂಜಾಬ್ ಪೊಲೀಸರು ದೆಹಲಿ ಪೊಲೀಸರಿಗೆ ತಿಳಿಸಬೇಕು. ಪಂಜಾಬ್ ಪೊಲೀಸರು ಜನಕಪುರಿ ಪೊಲೀಸ್ ಠಾಣೆಗೆ ಹೋದಾಗ, ಅವರನ್ನು ಅಕ್ರಮವಾಗಿ ಒತ್ತೆಯಾಳಾಗಿ ಇರಿಸಲಾಗಿತ್ತು. ನಂತರ ಇಂದು ಪಂಜಾಬ್ ಪೊಲೀಸರು ಬಗ್ಗಾ ಅವರನ್ನು ವಶಕ್ಕೆ ತೆಗೆದುಕೊಂಡಾಗ, ಅವರನ್ನು ಹರ್ಯಾಣ ಪೊಲೀಸರು ಅಕ್ರಮವಾಗಿ ತಡೆದರು ಎಂದು ಅತಿಶಿ ಹೇಳಿದರು.
ಇದೇ ತಜೀಂದರ್ ಬಗ್ಗಾ ಎಂಬಾತನೇ ಸುಪ್ರೀಂ ಕೋರ್ಟ್ ಆವರಣಕ್ಕೆ ನುಗ್ಗಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು. ಇದೇ ತಜೀಂದರ್ ಬಗ್ಗಾ ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬರಹಗಾರರೊಬ್ಬರ ಮೇಲೆ ಹಲ್ಲೆ ನಡೆಸಿದ್ದು .ಈ ವಿಚಾರವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಲಾಗುವುದು ಎಂದು ಎಎಪಿ ನಾಯಕಿ ಹೇಳಿದ್ದಾರೆ. ದೆಹಲಿ ಪೊಲೀಸರು ದಾಖಲಿಸಿರುವ ಅಪಹರಣ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅತಿಶಿ, “ಆ ಅಪಹರಣ ಪ್ರಕರಣದಲ್ಲಿ ಹುರುಳಿದ್ದರೆ ದೆಹಲಿ ಪೊಲೀಸರು ತಜೀಂದರ್ ಬಗ್ಗಾರನ್ನು ಮಾತ್ರ ಏಕೆ ವಾಪಸ್ ಕರೆತರುತ್ತಿದ್ದಾರೆ ಎಂದು ಕೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:36 pm, Fri, 6 May 22