AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತವು ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಬೇಕು, ‘ಆತ್ಮನಿರ್ಭರ್’ ಆಗಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳ ಮತ್ತು ವಿದ್ಯುತ್ ಬೇಡಿಕೆಯೊಂದಿಗೆ ಕಲ್ಲಿದ್ದಲಿನ ಅಗತ್ಯವು 2040 ರ ವೇಳೆಗೆ ದ್ವಿಗುಣಗೊಳ್ಳಲಿದೆ. ಆದ್ದರಿಂದ ಈ ಬೆಳೆಯುತ್ತಿರುವ ಇಂಧನ ಅಗತ್ಯವನ್ನು ಪೂರೈಸಲು ನಾವು ನಮ್ಮ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ" ಎಂದ ಜೋಶಿ

ಭಾರತವು ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಬೇಕು, 'ಆತ್ಮನಿರ್ಭರ್' ಆಗಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: May 06, 2022 | 6:46 PM

Share

ಮುಂಬೈ: ಇಂಧನಕ್ಕಾಗಿ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಭಾರತವು ದೇಶೀಯ ಕಲ್ಲಿದ್ದಲು ಉತ್ಪಾದನೆಯನ್ನು(coal production) ಹೆಚ್ಚಿಸಬೇಕಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಶುಕ್ರವಾರ ಹೇಳಿದ್ದಾರೆ. “ಎಲೆಕ್ಟ್ರಿಕ್ ವಾಹನಗಳ ಹೆಚ್ಚಳ ಮತ್ತು ವಿದ್ಯುತ್ ಬೇಡಿಕೆಯೊಂದಿಗೆ ಕಲ್ಲಿದ್ದಲಿನ ಅಗತ್ಯವು 2040 ರ ವೇಳೆಗೆ ದ್ವಿಗುಣಗೊಳ್ಳಲಿದೆ. ಆದ್ದರಿಂದ ಈ ಬೆಳೆಯುತ್ತಿರುವ ಇಂಧನ ಅಗತ್ಯವನ್ನು ಪೂರೈಸಲು ನಾವು ನಮ್ಮ ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ” ಎಂದು ಜೋಶಿ ಮುಂಬೈನಲ್ಲಿ ಹೂಡಿಕೆದಾರರ ಸಭೆಯಲ್ಲಿ ಹೇಳಿದರು. ಥರ್ಮಲ್ ಕಲ್ಲಿದ್ದಲಿನ ಆಮದನ್ನು ಕಡಿಮೆ ಮಾಡುವುದು ಮತ್ತು ಈ ವಲಯದಲ್ಲಿ ದೇಶವನ್ನು ‘ಆತ್ಮನಿರ್ಭರ್’ (Aatmanirbhar) ಮಾಡುವುದು ಕಲ್ಲಿದ್ದಲು ಸಚಿವಾಲಯದ ಗುರಿಯಾಗಿದೆ ಎಂದು ಅವರು ಹೇಳಿದರು. ಅಧಿವೇಶನದಲ್ಲಿ ಉಪಸ್ಥಿತರಿರುವ ಹೂಡಿಕೆದಾರರಿಗೆ ಅವಕಾಶಗಳನ್ನು ಹೈಲೈಟ್ ಮಾಡಿದ ಜೋಶಿ , “ತುಂಬಾ ಹಿಂದೆ ಜನರು ಕಲ್ಲಿದ್ದಲಿನ ಅಗತ್ಯವು ಕಡಿಮೆಯಾಗಲಿದೆ ಎಂದು ಹೇಳುತ್ತಿದ್ದರು. ಆದರೆ ನಾವು ಪ್ರಸ್ತುತ ಕಲ್ಲಿದ್ದಲು ಬೇಡಿಕೆಗಳಲ್ಲಿ ಹೆಚ್ಚಳವನ್ನು ನೋಡುತ್ತಿದ್ದೇವೆ ಎಂದಿದ್ದಾರೆ.

“ಮುಚ್ಚಿದ ಅಥವಾ ಕೈಬಿಡಲಾದ ಕಲ್ಲಿದ್ದಲು ಗಣಿಗಳಲ್ಲಿ ಹೊರತೆಗೆಯಬಹುದಾದ ಮೀಸಲು ಸುಮಾರು 380 ಮಿಲಿಯನ್ ಟನ್​​ಗಳಿದ್ದು, 30-40 ಮಿಲಿಯನ್ ಟನ್ ಕಲ್ಲಿದ್ದಲನ್ನು ಈ ಗಣಿಗಳಿಂದ ಸುಲಭವಾಗಿ ಹೊರತೆಗೆಯಬಹುದು. ಗಣಿಗಾರಿಕೆ ಚಟುವಟಿಕೆಗಳ ಮುಂದುವರಿಕೆಯು ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.”ನಾವು ನವೀಕರಿಸಬಹುದಾದ ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡುತ್ತಿರುವಾಗ, ಕಲ್ಲಿದ್ದಲು ಇನ್ನೂ ಇಂಧನ ಉತ್ಪಾದನೆಯಲ್ಲಿ ಪ್ರಮುಖ ಕೊಡುಗೆದಾರರಲ್ಲಿ ಒಂದಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ
Image
ಕಲ್ಲಿದ್ದಲು ಬಳಕೆ ಹೆಚ್ಚಾಗಿದೆ ಆದ್ರೆ ಕೊರತೆ ಆಗಲ್ಲ, ಸ್ಥಗಿತಗೊಂಡಿದ್ದ 20 ಗಣಿಗಳಿಗೆ ಮರು ಚಾಲನೆ

ಈ ಉದ್ದೇಶಕ್ಕಾಗಿ, ಕೋಲ್ ಇಂಡಿಯಾ ಲಿಮಿಟೆಡ್ (CIL) ತನ್ನ 20 ಮುಚ್ಚಿದ ಅಥವಾ ಕೈಬಿಟ್ಟ ಅಂಡರ್ ಗ್ರೌಂಡ್ ಕಲ್ಲಿದ್ದಲು ಗಣಿಗಳನ್ನು ಖಾಸಗಿ ವಲಯಕ್ಕೆ ಪುನಃ ತೆರೆಯಲು ಮತ್ತು ಆದಾಯ ಹಂಚಿಕೆ ಮಾದರಿಯಲ್ಲಿ ಉತ್ಪಾದನೆಗೆ ತರಲು ಯೋಜಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.  “ಕಲ್ಲಿದ್ದಲು ಅಗತ್ಯವು 2014 ರಿಂದ ಮಾರ್ಚ್ 2022 ರವರೆಗೆ 818 ಮಿಲಿಯನ್ ಟನ್‌ಗಳಿಗೆ 43 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಇದು 2014 ರಲ್ಲಿ 570 ಮಿಲಿಯನ್ ಟನ್‌ಗಳಷ್ಟಿತ್ತು. ಈ ಅವಶ್ಯಕತೆಯು ಮತ್ತಷ್ಟು ಹೆಚ್ಚಲಿದ್ದು 2040 ರ ವೇಳೆಗೆ ದ್ವಿಗುಣಗೊಳ್ಳುವ ಸಾಧ್ಯತೆಯಿದೆ. ವಾಣಿಜ್ಯ ಗಣಿಗಾರಿಕೆಯು ಇದನ್ನು ಪೂರೈಸಲು ಸಹಾಯ ಮಾಡುತ್ತದೆ. ಭಾರತೀಯ ಆರ್ಥಿಕತೆಯಲ್ಲಿ ಇಂಧನಕ್ಕಾಗಿ ನಿರಂತರವಾಗಿ ಬೆಳೆಯುತ್ತಿರುವ ಬೇಡಿಕೆ ಮತ್ತು ಕಲ್ಲಿದ್ದಲು ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ಪ್ರಧಾನ ಮಂತ್ರಿ ಹೇಳುವಂತೆ ಕಲ್ಲಿದ್ದಲಿನಲ್ಲಿ ಸ್ವಾವಲಂಬಿಯಾಗುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ ಜೋಶಿ.

2024ರ ವೇಳೆಗೆ ದೇಶೀಯ ಕಲ್ಲಿದ್ದಲು ಉತ್ಪಾದನೆಯನ್ನು 1.2 ಶತಕೋಟಿ ಮೆಟ್ರಿಕ್ ಟನ್‌ಗೆ ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೇಂದ್ರ ಕಲ್ಲಿದ್ದಲು ಕಾರ್ಯದರ್ಶಿ ಅನಿಲ್ ಕುಮಾರ್ ಜೈನ್ ಮಾತನಾಡಿ, ಹೂಡಿಕೆದಾರರಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಿದ್ದಾರೆ.

“ಈ ಮುಚ್ಚಿದ ಗಣಿಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ, ಇದರರ್ಥ ಮೂಲಸೌಕರ್ಯವು ಉತ್ತಮವಾಗಿದೆ ಮತ್ತು ಸಿದ್ಧವಾಗಿದೆ. ಪ್ರವೇಶ ಅಡೆತಡೆಗಳು ಮತ್ತು ಹಣಕಾಸಿನ ಅಡೆತಡೆಗಳು ಕನಿಷ್ಠವಾಗಿವೆ  ಎಂದು ಅವರು ಹೇಳಿದರು.

ಸಿಐಎಲ್ ಕಲ್ಲಿದ್ದಲು ಉತ್ಪಾದನೆ ಮತ್ತು 2022-23 ಕ್ಕೆ ತಲಾ 700 ಮಿಲಿಯನ್ ಟನ್‌ಗಳ ಆಫ್ಟೇಕ್ ಗುರಿಗಳನ್ನು ನಿಗದಿಪಡಿಸಿದೆ. ಕಂಪನಿಯು ಕಳೆದ ಹಣಕಾಸು ವರ್ಷದಲ್ಲಿ 622.30 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಮತ್ತು 661.90 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯನ್ನು ದಾಖಲಿಸಿದೆ. ಸಿಐಎಲ್ ದೇಶೀಯ ಕಲ್ಲಿದ್ದಲು ಉತ್ಪಾದನೆಯ ಶೇಕಡಾ 80 ಕ್ಕಿಂತ ಹೆಚ್ಚು ಪಾಲು ಹೊಂದಿದೆ.

ಇಂದು ಮುಂಬೈಯಲ್ಲಿ ರಾಜಸ್ಥಾನ್, ಕರ್ನಾಟಕ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ ಉಷ್ಣ ವಿದ್ಯುತ್ ಉತ್ಪಾದನಾ ಸಂಸ್ಥೆಗಳೊಂದಿಗೆ ಕಲ್ಲಿದ್ದಲು ಪೂರೈಕೆ ಕುರಿತು ಚರ್ಚೆ ನಡೆಸಲಾಯಿತು. ಕಲ್ಲಿದ್ದಲು ಉತ್ಪಾದನೆ ಮತ್ತು ಉಷ್ಣ ಸ್ಥಾವರಗಳಿಗೆ ಅವುಗಳ ಪೂರೈಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪಾಲುದಾರರ ನಡುವೆ ಉತ್ತಮ ಸಮನ್ವಯತೆಯ ಅವಶ್ಯಕತೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಪ್ರತಿರಾಜ್ಯವು ಕೇಂದ್ರ ಸರ್ಕಾರದ ಸಹಯೋಗ ಮತ್ತು ಸಂಯೋಜನೆಗೆ ತಮ್ಮ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದು ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಸಿಐಎಲ್ ಆರ್.ಸಿ.ಅರ್ ಮೋಡ್ ಮೂಲಕ 5.75 MT ಕಲ್ಲಿದ್ದಲನ್ನು ಹೆಚ್ಚುವರಿಯಾಗಿ ನೀಡುವ ಪ್ರಸ್ತಾಪ ಸಲ್ಲಿಸಿದೆ. ಕಲ್ಲಿದ್ದಲು ಕೊಂಡೊಯ್ಯುವ ಪ್ರಕ್ರಿಯೆಯ ಸಿಂಧುತ್ವವನ್ನು ಹೆಚ್ಚಿಸಲಾಗಿದ್ದು ಇದರಿಂದ ಆರ್.ಸಿ.ಆರ್ ಮೋಡ್ ಮೂಲಕ ಸುಮಾರು 12 MT ಹೆಚ್ಚುವರಿ ಕಲ್ಲಿದ್ದಲನ್ನು ಪವರ್ ಹೌಸ್‌ಗಳಿಗೆ ನೀಡಲಾಗುವುದು ಎಂದು ಜೋಶಿ  ಟ್ವೀಟ್ ಮಾಡಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ