AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಕುಟುಂಬ ಸಮೇತರಾಗಿ ಮರದ ಮೇಲೆ ಮಲಗಿದ ಸಿಂಹಗಳು; ವಿಡಿಯೋ ವೈರಲ್

ಸಿಂಹಗಳು ಬೇಟೆಯಾಡುವ ಅದೆಷ್ಟೋ ಸುದ್ದಿಗಳನ್ನು ಓದಿದ್ದೇವೆ ಹಾಗೂ ವಿಡಿಯೋಗಳನ್ನು ನೋಡಿದ್ದೇವೆ. ಆದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸಿಂಹಗಳು ಸಾಲಾಗಿ ತನ್ನ ಕುಟುಂಬಸ್ಥರೊಂದಿಗೆ ಮಲಗಿವೆ. ಇದನ್ನೂ ಕಂಡ ನೆಟ್ಟಿಗರು ಕೂಡ ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ.

Video Viral: ಕುಟುಂಬ ಸಮೇತರಾಗಿ ಮರದ ಮೇಲೆ ಮಲಗಿದ ಸಿಂಹಗಳು; ವಿಡಿಯೋ ವೈರಲ್
ಸಿಂಹಗಳು
TV9 Web
| Updated By: preethi shettigar|

Updated on: Feb 21, 2022 | 12:47 PM

Share

ಅರಣ್ಯ ಲೋಕದಲ್ಲಿ ಎಲ್ಲವೂ ನಿಜಕ್ಕೂ ವಿಚಿತ್ರ. ಇಲ್ಲಿ, ಯಾರು ಯಾರನ್ನು ಬೇಟೆಯಾಡುತ್ತಾರೆ ಎಂಬುದರ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ. ಆದರೆ ಅನೇಕ ಬಾರಿ ಕೂತುಹಲ ಹುಟ್ಟಿಸುವ ಅನೇಕ ಘಟನೆಗಳು ನಡೆಯುತ್ತವೆ. ಅಂತಹ ವೀಡಿಯೊವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ(Social media) ವೈರಲ್​ ಆಗಿದೆ. ಸಾಮಾನ್ಯವಾಗಿ ಒಂದು ಮನೆಯಲ್ಲಿ ಕುಟುಂಬಸ್ಥರೆಲ್ಲಾ(Family) ಸೇರಿ ಗುಂಪು ಗುಂಪಾಗಿ ಮಲಗುವುದು ರೂಢಿ ಇದೆ. ಆದರೆ ಇದೇ ಪದ್ಧತಿ ಕಾಡಿನಲ್ಲಿಯೂ ಮುಂದುವರಿದಿದೆ. ಸಿಂಹಗಳು ಮರದ ಮೇಲೆ ಒಟ್ಟಾಗಿ ಮಲಗಿರುವ ವಿಡಿಯೋ ಸದ್ಯ ವೈರಲ್(Viral)​ ಆಗಿದೆ.

ಸಿಂಹಗಳು ಬೇಟೆಯಾಡುವ ಅದೆಷ್ಟೋ ಸುದ್ದಿಗಳನ್ನು ಓದಿದ್ದೇವೆ ಹಾಗೂ ವಿಡಿಯೋಗಳನ್ನು ನೋಡಿದ್ದೇವೆ. ಆದರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸಿಂಹಗಳು ಸಾಲಾಗಿ ತನ್ನ ಕುಟುಂಬಸ್ಥರೊಂದಿಗೆ ಮಲಗಿವೆ. ಇದನ್ನೂ ಕಂಡ ನೆಟ್ಟಿಗರು ಕೂಡ ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊವನ್ನು ನೋಡಿದರೆ, ಸಿಂಹವು ಸಹ ಕುಟುಂಬಸ್ಥ ಜೀವಿ. ಅದು ಕೂಡ ತನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತದೆ ಎಂದು ನಿಮಗೆ ಅರ್ಥವಾಗುತ್ತದೆ. ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಸಿಂಹಗಳ ಕುಟುಂಬವೊಂದು ಸಂತಸದಿಂದ ಮರದ ಮೇಲೆ ಮಲಗಿರುವುದನ್ನು ನೋಡಬಹುದು. ಈ ವೀಡಿಯೋ ನೋಡಿದರೆ ಸಿಂಹವೂ ಮಧ್ಯಾಹ್ನದ ನಿದ್ದೆಯನ್ನು ಬಹಳ ಮೋಜಿನಿಂದಲೇ ಮಾಡುತ್ತಿವೆ ಎನಿಸುತ್ತದೆ. ಈ ವಿಡಿಯೋ ಕ್ಲಿಪ್ ಅನ್ನು ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿಯಲಾಗಿದೆ. ವೈರಲ್​ ಆದ ವಿಡಿಯೋದಲ್ಲಿ ಆನೆಯು ಕೂಡ ಹಾದು ಹೋಗುತ್ತದೆ.

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಹಂಚಿಕೊಂಡಿದ್ದಾರೆ. ಸದ್ಯ 16 ಸಾವಿರಕ್ಕೂ ಹೆಚ್ಚು ವ್ಯೂವ್ಸ್​  ಪಡೆದುಕೊಂಡಿರುವ ಈ ವಿಡಿಯೋ ನೆಟ್ಟಿಗರನ್ನು ತನ್ನತ್ತ ಆಕರ್ಷಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ಈ ವಿಡಿಯೋವನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಅನೇಕ ಬಳಕೆದಾರರು ವೀಡಿಯೊದಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಕಮೆಂಟ್​ ಮೂಲಕ ವ್ಯಕ್ತಪಡಿಸಿದ್ದಾರೆ. ಊಟದ ನಂತರ ಒಳ್ಳೆಯ ನಿದ್ದೆ ಬೇಕು ಎಂದು ಒಬ್ಬರು ಕಮೆಂಟ್​ ಮಾಡಿದರೆ, ಮತ್ತೊಬ್ಬರು ಕೌಟುಂಬಿಕ ಸಮಯ, ಅದ್ಭುತ! ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Viral Video: ಮದುವೆಯಲ್ಲಿ ವರನನ್ನು ಪದೇಪದೆ ತಬ್ಬಿಕೊಂಡ ಬುರ್ಖಾಧಾರಿ ಮಹಿಳೆ; ಅಸಲಿ ವಿಚಾರ ತಿಳಿದು ಶಾಕ್ ಆದ ವಧು!

ವ್ಯಕ್ತಿ ನುಡಿಸಿದ ಬಾಂಜೋ ನಾದಕ್ಕೆ ಕಿವಿಯಾಡಿಸಿದ ನರಿ; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ