AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಕೆ ಮೃಗಾಲಯದಲ್ಲಿ ಜನಿಸಿದೆ ಅಪರೂಪದ ಆರ್ಡ್​ವರ್ಕ್​; ಇಲ್ಲಿದೆ ಡೊಬಿ ಚಿತ್ರಣ

ಚೆಸ್ಟರ್ ಮೃಗಾಲಯ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಡೊಬಿಯ ಜನನಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿಕೊಂಡಿವೆ. ಈ ವಿಶಿಷ್ಟ ಪ್ರಾಣಿಯು ತನ್ನ 8 ವರ್ಷದ ತಾಯಿ ಓಣಿ ಮತ್ತು 6 ವರ್ಷದ ತಂದೆ ಕಾಸ್‌ಗೆ ಜನಿಸಿದೆ.

ಯುಕೆ ಮೃಗಾಲಯದಲ್ಲಿ ಜನಿಸಿದೆ ಅಪರೂಪದ ಆರ್ಡ್​ವರ್ಕ್​; ಇಲ್ಲಿದೆ ಡೊಬಿ ಚಿತ್ರಣ
ಆರ್ಡ್‌ವರ್ಕ್ ಮರಿ
TV9 Web
| Updated By: preethi shettigar|

Updated on:Feb 21, 2022 | 9:26 AM

Share

ಯುಕೆಯಲ್ಲಿರುವ ಚೆಸ್ಟರ್ ಮೃಗಾಲಯವು(Chester zoo) ಅಪರೂಪದ ಮರಿ ಪ್ರಾಣಿಯನ್ನು ತಮ್ಮ ಮೃಗಾಲಯದ ಕುಟುಂಬಕ್ಕೆ ಸ್ವಾಗತಿಸಿದೆ. ಸದ್ಯ ಈ ಪುಟ್ಟ ಆರ್ಡ್‌ವರ್ಕ್(Aardvark) ಮರಿಗೆ ಡೊಬಿ(Dobby) ಎಂದು ಹೆಸರಿಡಲಾಗಿದೆ. ಡೊಬಿ ಜನವರಿ 4 ರಂದು ಜನಿಸಿದ ಹೆಣ್ಣು ಆರ್ಡ್‌ವರ್ಕ್ ಆಗಿದೆ. ದೊಡ್ಡ ಕಿವಿಗಳು, ಕೂದಲುರಹಿತ ಸುಕ್ಕುಗಟ್ಟಿದ ಚರ್ಮ ಮತ್ತು ದೈತ್ಯ ಉಗುರುಗಳೊಂದಿಗೆ ಜನಿಸಿದ ಈ ಆರ್ಡ್​ವರ್ಕ್​ ಮರಿ ಆಫ್ರಿಕಾ ಮೂಲದ ಸಸ್ತನಿಯಾಗಿದೆ. ಇದರ ಮೂತಿ ನೋಡಿದರೆ ಹಂದಿ ಮರಿಯಂತೆ ಕಾಣುತ್ತದೆ. ಆದರೆ ಇದರ ದೇಹ ರಚನೆಯು ಕಾಂಗರೂವಿನಂತೆ ಇದೆ.

ಚೆಸ್ಟರ್ ಮೃಗಾಲಯ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಡೊಬಿಯ ಜನನಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿಕೊಂಡಿವೆ. ಈ ವಿಶಿಷ್ಟ ಪ್ರಾಣಿಯು ತನ್ನ 8 ವರ್ಷದ ತಾಯಿ ಓಣಿ ಮತ್ತು 6 ವರ್ಷದ ತಂದೆ ಕಾಸ್‌ಗೆ ಜನಿಸಿದೆ. ಹ್ಯಾರಿ ಪಾಟರ್ ಸರಣಿಯ ಯಕ್ಷಿಣಿಯೊಂದಿಗೆ ವಿಲಕ್ಷಣವಾದ ಹೋಲಿಕೆಯನ್ನು ಹೊಂದಿದೆ. ಹೀಗಾಗಿ ಮೃಗಾಲಯ ಸಿಬ್ಬಂದಿಗಳು ನವಜಾತ ಆರ್ಡ್‌ವರ್ಕ್​ಗೆ ಡೊಬಿ ಎಂದು ಅಡ್ಡಹೆಸರು ನೀಡಿದ್ದಾರೆ.

ದಿನವಿಡೀ ಅಮ್ಮ ಓಣಿಯೊಂದಿಗೆ ಬಾಂಧವ್ಯ ಹೊಂದಿರುವ ಡೊಬಿಯನ್ನು ರಾತ್ರಿ ಮೃಗಾಲಯದ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗುತ್ತದೆ. ಈ ವೇಳೆ ಪ್ರತಿ ಒಂದು ಗಂಟೆಗೆ ಡೊಬಿಗೆ ಬೆಚ್ಚಗಿನ ಹಾಲನ್ನು ನೀಡಲಾಗುತ್ತದೆ. ಡೊಬಿ ಮತ್ತು ಅಮ್ಮ ಇಬ್ಬರೂ ಉತ್ತಮ ಒಡನಾಟ ಹೊಂದಿದ್ದಾರೆ. ಸದ್ಯ ಮೃಗಾಲಯದಲ್ಲಿರುವ ಪ್ರತಿಯೊಬ್ಬರೂ ಹೊಸ ಅತಿಥಿಯ ಆಗಮನದಿಂದ ಸಂತೋಷಗೊಂಡಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಚೆಸ್ಟರ್ ಮೃಗಾಲಯ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಪೋಸ್ಟ್​ ಹಂಚಿಕೊಂಡಿದೆ.

View this post on Instagram

A post shared by Chester Zoo (@chesterzoo)

ಇದನ್ನೂ ಓದಿ:

Literature: ನೆರೆನಾಡ ನುಡಿಯೊಳಗಾಡಿ; ‘ಕಾಡುಪ್ರಾಣಿಗಳನ್ನು ಒಮ್ಮೆಲೆ ನೋಡಿದರೆ ಹೇಗಿರುತ್ತದೆಯೋ ಹಾಗಿದ್ದಾಳೆ ಆ ಹೆಂಗಸು!’

ಪ್ರಸವದ ವೇಳೆ ಕೆಸರಿನಲ್ಲಿ ಜಾರಿ ಬಿದ್ದ ಆನೆ ಮರಿ ಮೇಲೆತ್ತಲು ತಾಯಿ ಆನೆ ಪರದಾಟ, ಮನ ಕಲಕುವಂತ ವಿಡಿಯೋ

Published On - 9:21 am, Mon, 21 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ