ಈ ದೇಶದಲ್ಲಿ ವಾಟ್ಸ್​​​ಆ್ಯಪ್​ ಮೆಸೇಜ್​ಗಳಲ್ಲಿ ರೆಡ್​ ಹಾರ್ಟ್​ ಎಮೋಜಿ ಕಳುಹಿಸಿದರೆ 5 ವರ್ಷ ಜೈಲು: ಯಾಕೆ ಗೊತ್ತಾ?

ಸೌದಿ ಅರೇಬಿಯಾದಲ್ಲಿ ಇಂಥದ್ದೊಂದು ನಿಯಮ ಜಾರಿಯಾಗಿದೆ. ವಾಟ್ಸಾಪ್​​ ಸಂದೇಶ ಕಳುಹಿಸುವಾಗ ರೆಡ್​ ಹಾರ್ಟ್​ ಎಮೋಜಿಗಳನ್ನು ಬಳಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ.

ಈ ದೇಶದಲ್ಲಿ ವಾಟ್ಸ್​​​ಆ್ಯಪ್​ ಮೆಸೇಜ್​ಗಳಲ್ಲಿ ರೆಡ್​ ಹಾರ್ಟ್​ ಎಮೋಜಿ ಕಳುಹಿಸಿದರೆ 5 ವರ್ಷ ಜೈಲು: ಯಾಕೆ ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Feb 20, 2022 | 5:10 PM

ಇಂದಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳ (Social Media) ಬಳಕೆ ದಿನನಿತ್ಯದ ಭಾಗವಾಗಿದೆ.  ಚಾಟ್, ವಿಡಿಯೋ ಕಾಲ್​, ವಾಯ್ಸ್​ ಕಾಲ್​ಗಳ ಜಗತ್ತಿನಲ್ಲಿ ಎಮೋಜಿಗಳನ್ನು(Emojis) ಯಥೇಚ್ಛವಾಗಿ ಬಳಸುತ್ತೇವೆ. ಭಾವನೆಗಳನ್ನು ವಿವರಿಸಲು ಎಮೋಜಿಗಳನ್ನಿಟ್ಟು ಮೆಸೇಜ್​ಗಳನ್ನು ಕಳುಹಿಸುತ್ತೇವೆ. ಕೆಲವರಂತೂ ಖುಷಿಯನ್ನು ವ್ಯಕ್ತಪಡಿಸಲು ಕೆಂಪು ಬಣ್ಣದ ಹಾರ್ಟ್​ ಎಮೋಜಿಗಳನ್ನು ಕಳುಹಿಸುತ್ತಾರೆ. ಇನ್ನೂ ಕೆಲವರಿಗೆ ಎಮೋಜಿಗಳಿಲ್ಲದೆ ಮೆಸೇಜ್​ ಕಳುಹಿಸುವುದೆಂದರೆ ಅಲರ್ಜಿ ಎನ್ನುವಂತಿರುತ್ತದೆ. ಹೀಗಿದ್ದಾಗ ಯಾವುದಾದದರೂ ಒಂದು ಎಮೋಜಿಯನ್ನು ಬ್ಯಾನ್​ಮಾಡಿಬಿಟ್ಟರೆ? ಹೌದು, ಸೌದಿ ಅರೇಬಿಯಾದಲ್ಲಿ (Saudi Arabia) ಇಂಥದ್ದೊಂದು ನಿಯಮ ಜಾರಿಯಾಗಿದೆ. ವಾಟ್ಸಾಪ್​​ ಸಂದೇಶ ಕಳುಹಿಸುವಾಗ ರೆಡ್​ ಹಾರ್ಟ್​ ಎಮೋಜಿಗಳನ್ನು (Red Heart Emojis) ಬಳಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳ ವರದಿ ತಿಳಿಸಿದೆ.

ವಾಟ್ಸಾಪ್​ನಲ್ಲಿ ಕೆಂಪು ಬಣ್ಣದ ಹಾರ್ಟ್​ ಎಮೋಜಿ ಕಳುಹಿಸುವುದು ಕಿರುಕುಳ ನೀಡಿದಂತೆ. ಒಂದು ವೇಳೆ ಮೆಸೇಜ್​ನಲ್ಲಿ ರೆಡ್​ ಹಾರ್ಟ್​ ಎಮೋಜಿ ಕಳುಹಿಸಿರುವುದು ತಿಳಿದು ಬಂದರೆ ಅಂತಹವರಿಗೆ 5 ವರ್ಷ ಜೈಲು ಮತ್ತು 26 ಸಾವಿರ ಡಾಲರ್​ ದಂಡ ವಿಧಿಸಲಾಗುವುದು ಎಂದು ಸೈಬರ್​ ಕ್ರೈಮ್​ ತಜ್ಞರೊಬ್ಬರು ಹೇಳಿಕೆ ನೀಡಿದ್ದಾರೆ. ಸದ್ಯ ಈ ವಿಚಾರ ಜಗತ್ತಿನೆಲ್ಲೆಡೆ ಸುದ್ದಿಯಾಗಿದೆ.

ಸೌದಿ ಅರೇಬಿಯಾದ ಕಾನೂನಿ ಪ್ರಕಾರ ರೆಡ್​ ಹಾರ್ಟ್​ಗಳನ್ನು ಕಳುಹಿಸುವುದು ಲೈಂಗಿಕತೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಆನ್ಲೈನ್​ನಲ್ಲಿ ಚಾಟ್​ ಮಾಡುವ ವೇಳೆ ಈ ರೀತಿ ರೆಡ್​ ಹಾರ್ಟ್​ಗಳನ್ನು ಕಳುಹಿಸುವುದು ಕಿರುಕುಳಕ್ಕೆ ಸಮಾನವಾಗಿದೆ. ಕಾನೂನಿನ ಅಡಿಯಲ್ಲ ಅಂತಹ ಪ್ರಕರಣಗಳು ಸಾಬೀತಾದರೆ ಶಿಕ್ಷೆ ತಪ್ಪಿದ್ದಲ್ಲ ಎಂದು ಸೌದಿ ಅರೇಬಿಯಾದ ಆ್ಯಂಟಿ ಫ್ರಾಡ್​ ಅಸೋಸಿಯೇಷನ್​ನ ಸದಸ್ಯ ಅಲ್ ಮೊತಾಜ್ ಕುಟ್ಬಿ ತಿಳಿಸಿದ್ದು, ಸಾಮಾಜಿಕ ಜಾಲತಾಣಗಳ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅದೇ ರೀತಿಯ ತಪ್ಪು ಪುನಾರಾವರ್ತನೆಯಾದರೆ ದಂಡದ ಮೊತ್ತ ದುಪ್ಪಟ್ಟಾಗುವುದು ಜತೆಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎಂದ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:

1,868 ಮೀಟರ್ ಎತ್ತರದ ಅಗಸ್ತ್ಯರ್ಕೂಡಮ್ ಶಿಖರ ಏರಿದ 62ರ ವೃದ್ಧೆ: ​ವಿಡಿಯೋ ವೈರಲ್

Published On - 5:09 pm, Sun, 20 February 22

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್