ಈ ವೃತ್ತದಲ್ಲಿ ಎಷ್ಟು ಸಂಖ್ಯೆ ಕಾಣುತ್ತಿದೆ? ಉತ್ತರ ಹುಡುಕಲು ತಲೆಕೆಡಿಸಿಕೊಂಡ ನೆಟ್ಟಿಗರು

ಈ ವೃತ್ತದಲ್ಲಿ ಎಷ್ಟು ಸಂಖ್ಯೆ ಕಾಣುತ್ತಿದೆ? ಉತ್ತರ ಹುಡುಕಲು ತಲೆಕೆಡಿಸಿಕೊಂಡ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಕಿರು ವಿಡಿಯೋವೊಂದು ನೆಟ್ಟಿಗರ ತಲೆಕೆಡಸಿದೆ. ವೃತ್ತದಲ್ಲಿ ಎಷ್ಟು ಸಂಖ್ಯೆಗಳು ಕಾಣಿಸುತ್ತವೆ ಎಂದು ಪತ್ತೆ ಹಚ್ಚುವ ಈ ಆಪ್ಡಟಿಕಲ್​ ಇಲ್ಯಶನ್​ನ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

TV9kannada Web Team

| Edited By: Pavitra Bhat Jigalemane

Feb 20, 2022 | 3:14 PM

ಆಪ್ಟಿಕಲ್​ ಇಲ್ಯುಶನ್ (Optical illusions)​ ಗೊಂದಲಕ್ಕೆ ಈಡುಮಾಡುವುದು ಸಹಜ. ಆದರೆ ಅವು ಬುದ್ದಿಗೆ ಗುದ್ದು ನೀಡಿ, ಚುರುಕುತನ ಮೂಡಿಸುತ್ತವೆ. ಸಾಮಾಜಿಕ ಜಾಲತಾಣದಲ್ಲಿ(Social Media) ಇಂತಹ ಭ್ರಮೆ ಹುಟ್ಟಿಸುವ ಫೋಟೋಗಳು, ವಿಡಿಯೋಗಳು ಆಗಾಗ ವೈರಲ್(Viral)​ ಆಗುತ್ತಲೇ ಇರುತ್ತವೆ. ಬಳಕೆದಾರರು ಈ ರೀತಿಯ ಆಟಗಳಲ್ಲಿ ಭಾಗವಹಿಸಿ ಎಂಜಾಯ್​ ಮಾಡುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಕಿರು ವಿಡಿಯೋವೊಂದು ನೆಟ್ಟಿಗರ ತಲೆಕೆಡಿಸಿದೆ. ವೃತ್ತದಲ್ಲಿ ಎಷ್ಟು ಸಂಖ್ಯೆಗಳು ಕಾಣಿಸುತ್ತವೆ ಎಂದು ಪತ್ತೆ ಹಚ್ಚುವ ಈ ಆಪ್ಡಟಿಕಲ್​ ಇಲ್ಯಶನ್​ನ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

Benonwine ಎನ್ನುವ ಟ್ವಿಟರ್​ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದೆ. ತಿರುಗು ವೃತ್ತದಲ್ಲಿ ಸಂಖ್ಯೆಗಳು ಕಾಣಿಸುತ್ತಿವೆಯೇ? ಯಾವೆಲ್ಲಾ ಸಂಖ್ಯೆಗಳು ಕಾಣಿಸುತ್ತಿವೆ ಎಂದು  ಕ್ಯಾಪ್ಷನ್​ ನೀಡುವ ಮೂಲಕ ಹಂಚಿಕೊಂಡ ವಿಡಿಯೋ ವೈರಲ್​ ಆಗಿದೆ. ಒಂದೊಂದು ಸಲ ಒಂದೊಂದು ನಂಬರ್​ ನೋಡುತ್ತಿರುವ ನೆಟ್ಟಿಗರು ನಿಜವಾಗಿ ಕಾಣಿಸುತ್ತಿರುವ ಸಂಖ್ಯೆ ಎಷ್ಟು ಎಂದು ತಲೆಕೆಡಿಸಿಕೊಂಡಿದ್ದಾರೆ.

ಸದ್ಯ ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 1,700ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಗಳಿಸಿದ್ದು, ಕಾಮೆಂಟ್​ ಸೆಕ್ಷನ್​ನಲ್ಲಿ ಬಳಕೆದಾರರು ಕಂಡ ಸಂಖ್ಯೆಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ ನೀವು ಕೂಡ ಯಾವ ಸಂಖ್ಯೆ ಕಾಣಿಸುತ್ತಿದೆ ಎಂದು ಹೇಳಬಹದು.

ಇದನ್ನೂ ಓದಿ:

Viral Video: ಬಾಯಲ್ಲಿ ಕಚ್ಚಿಕೊಂಡು ಹೊರಟ ಚಿರತೆಯನ್ನು ಕಚ್ಚಿದ ಮರಿ ಹೆಬ್ಬಾವು: ಮುಂದೇನಾಯ್ತು?

Follow us on

Related Stories

Most Read Stories

Click on your DTH Provider to Add TV9 Kannada