1,868 ಮೀಟರ್ ಎತ್ತರದ ಅಗಸ್ತ್ಯರ್ಕೂಡಮ್ ಶಿಖರ ಏರಿದ 62ರ ವೃದ್ಧೆ: ವಿಡಿಯೋ ವೈರಲ್
62 ವರ್ಷದ ನಾಗರತ್ನಮ್ಮ ಎನ್ನುವ ವೃದ್ಧೆ ಕೇರಳದ ಎರಡನೇ ಅತೀ ಎತ್ತರದ ಗುಡ್ಡ ಅಗಸ್ತ್ಯರ್ಕೂಡಮ್ ಅನ್ನು ಏರಿ ಸಾಧನೆಗೈದಿದ್ದಾರೆ. ಸದ್ಯ ಈ ವಿಚಾರ ಎಲ್ಲರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಟ್ರೆಕ್ಕಿಂಗ್ (Trekking), ಸಾಹಸಗಳು ಕೇವಲ ಯುವ ಜನರಿಗೆ ಮಾತ್ರ ಎನ್ನುವ ಮನೋಭಾವವಿದೆ. ಆದರೆ ಅದಕ್ಕೆ ವಯಸ್ಸಿನ ಹಂಗಿಲ್ಲ ಎಂದು 62 ವರ್ಷದ ವೃದ್ಧೆಯೊಬ್ಬರು ಸಾಬಿತುಪಡಿಸಿದ್ದಾರೆ. ಹೌದು, 62 ವರ್ಷದ ನಾಗರತ್ನಮ್ಮ ಎನ್ನುವ ವೃದ್ಧೆ ಕೇರಳದ (Kerala) ಎರಡನೇ ಅತೀ ಎತ್ತರದ ಗುಡ್ಡ ಅಗಸ್ತ್ಯರ್ಕೂಡಮ್ (Agasthyarkoodam)ಅನ್ನು ಏರಿ ಸಾಧನೆಗೈದಿದ್ದಾರೆ. 1,868-ಮೀಟರ್ ಎತ್ತರವಿರುವ ಈ ಶಿಖರ ಏರಿದ ವಿಚಾರ ಸದ್ಯ ಎಲ್ಲರನ್ನೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ನಾಗರತ್ನಮ್ಮ ಗುಡ್ಡವನ್ನು ಏರುತ್ತಿರುವ ಕಿರು ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಅದರ ವಿಡಿಯೋವು ಸಖತ್ ವೈರಲ್ ಆಗಿದೆ.
View this post on Instagram
ಇನ್ಸ್ಟಾಗ್ರಾಮ್ನಲ್ಲಿ ವಿಷ್ನು ಎನ್ನುವ ಬಳಕೆದಾರರೊಬ್ಬರು ವೃದ್ಧೆ ಅಗಸ್ತ್ಯರ್ಕೂಡಮ್ ಪರ್ವತವನ್ನು ಏರುವ ವಿಡಿಯೋ ಹಂಚಿಕೊಂಡಿದ್ದಾರೆ. 62ರ ಹರೆಯದಲ್ಲಿಯೂ ಕುಗ್ಗದ ಉತ್ಸಾಹ, ಕಲ್ಲಿನಿಂದ ಕೂಡಿದ ಗುಡ್ದ ಏರುವ ಚಾಕಚಕ್ಯತೆ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿಸಿದೆ. ನಾಗರತ್ನಮ್ಮ ಮದುವೆಯಾಗಿ 40 ವರ್ಷಗಳವರೆಗೂ ಮನೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದರು. ಇದೀಗ ಕೆರಳದ ಎರಡನೇ ಅತೀ ಎತ್ತರದ ಬೆಟ್ಟವನ್ನು ಏರುವ ಮೂಲಕ ತಮ್ಮ ಆಸೆಯನ್ನೂ ಪೂರೈಸಿಕೊಂಡಿದ್ದಾರೆ. ಜತೆಗೆ ಯುವ ಜನತೆ ಸೆಡ್ಡು ಹೊಡೆದು ತಮ್ಮ ಉತ್ಸಾಹವನ್ನು ಪ್ರದರ್ಶಿಸಿದ್ದಾರೆ.
ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಿಂದೆ 72 ವರ್ಷದ ಕೇರಳದ ಮಹಿಳೆಯೊಬ್ಬರು ಜಿಪ್ ಲೈನಿಂಗ್ ಮಾಡುವ ಮೂಲಕ ಗುರುತಿಸಿಕೊಂಡಿದ್ದರು. ಇದೀಗ ಟ್ರೆಕ್ಕಿಂಗ್ ಮಾಡುವ ಮೂಲಕ 62 ವರ್ಷದ ವೃದ್ಧೆ ಗುರುತಿಸಿಕೊಂಡಿದ್ದಾರೆ.
ಅಗಸ್ತ್ಯರ್ಕೂಡಮ್ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಗುಡ್ಡ. ಇದು 1,868-ಮೀಟರ್ ಎತ್ತರವಿದೆ. ಈ ಶಿಖರವು ಅಗಸ್ತ್ಯಮಲಾ ಬಯೋಸ್ಫಿಯರ್ ರಿಸರ್ವ್‌ನ ಒಂದು ಭಾಗವಾಗಿದೆ, ಇದು ಭಾರತದ ರಾಜ್ಯಗಳಾದ ತಮಿಳುನಾಡು, ತಿರುನಲ್ವೇಲಿ ಜಿಲ್ಲೆ ಮತ್ತು ಕೇರಳ, ತಿರುವನಂತಪುರಂ ಜಿಲ್ಲೆಯ ಗಡಿಯಲ್ಲಿದೆ. ಕೇರಳದ ಎರಡನೇ ಅತೀ ಎತ್ತರದ ಶಿಖರ ಎಂದು ಗುರುತಿಸಿಕೊಂಡಿದೆ.
ಇದನ್ನೂ ಓದಿ:
ಈ ವೃತ್ತದಲ್ಲಿ ಎಷ್ಟು ಸಂಖ್ಯೆ ಕಾಣುತ್ತಿದೆ? ಉತ್ತರ ಹುಡುಕಲು ತಲೆಕೆಡಿಸಿಕೊಂಡ ನೆಟ್ಟಿಗರು
Published On - 4:07 pm, Sun, 20 February 22