ಮದುವೆ ಮನೆಗೆ ಆಹ್ವಾನಿಸದೆ ಬಂದ ಅತಿಥಿಗಳು ಯಾರು ಗೊತ್ತಾ..! ಇಲ್ಲಿದೆ ವೈರಲ್ ವಿಡಿಯೋ
ಮದುವೆಯ ಆರತಕ್ಷತೆ ಪಾರ್ಟಿಯಲ್ಲಿ ಈ ಘಟನೆ ಸಂಭವಿಸಿದ್ದು, ಅಲ್ಲಿ ಇಬ್ಬರು ಆಹ್ವಾನಿಸದ 'ಅತಿಥಿಗಳು' ಸಮಾರಂಭಕ್ಕೆ ಆಗಮಿಸಿದ್ದರು. ಹೀಗೆ ಕರೆಯದೇ ಬಂದ ಆ ಅತಿಥಿಗಳು ಯಾರು ಅಂದರೇ ಕರಡಿಯೊಂದರ (Bear) ಕುಟುಂಬ.
viral video ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ಬಂದು ಅಡ್ಡಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲಿರುತ್ತವೆ. ಕೆಲವೊಮ್ಮೆ ಹೀಗೆ ವೈರಲಾಗುವ ವಿಡಿಯೋಗಳು ಜನರು ಊಹಿಸುವುದಕ್ಕಿಂತ ಹೆಚ್ಚು ಸಾಮಾನ್ಯವಾಗಿರುತ್ತವೆ ಮತ್ತು ಕೆಲವೊಮ್ಮೆ ಭಯಾನಕವಾಗಿಯೂ ಇರುತ್ತವೆ. ಈ ಹಿಂದೂಮ್ಮೆ ಹಳ್ಳಿಯ ಪ್ರದೇಶವೊಂದರಲ್ಲಿ ಸಿಂಹಿಣಿಯೊಂದು ನಡುರಸ್ತೆಯಲ್ಲಿ ಪ್ರತ್ಯಕ್ಷವಾಗಿತ್ತು. ಈಗ ಅಂತಹದೇ ಒಂದು ಘಟನೆ ಮತ್ತೇ ಸಂಭವಿಸಿದೆ. ಹೌದು ಛತ್ತೀಸ್‌ಗಢದ ಕಂಕೇರ್‌ನಲ್ಲಿ ನಡೆದ ಮದುವೆಯ ಆರತಕ್ಷತೆ ಪಾರ್ಟಿಯಲ್ಲಿ ಈ ಘಟನೆ ಸಂಭವಿಸಿದ್ದು, ಅಲ್ಲಿ ಇಬ್ಬರು ಆಹ್ವಾನಿಸದ ‘ಅತಿಥಿಗಳು’ ಸಮಾರಂಭಕ್ಕೆ ಆಗಮಿಸಿದ್ದರು. ಹೀಗೆ ಕರೆಯದೇ ಬಂದ ಆ ಅತಿಥಿಗಳು ಯಾರು ಅಂದರೇ ಕರಡಿಯೊಂದರ (Bear) ಕುಟುಂಬ.
They are not happy with the arrangement. It seems. https://t.co/9Af4fErhdb
— Parveen Kaswan, IFS (@ParveenKaswan) February 16, 2022
ತಾಯಿ ಕರಡಿ ಮತ್ತು ಅದರ ಮರಿ ಮದುವೆ ಮನೆಗೆ ಆಗಮಿಸಿ ವೇದಿಕೆಯ ಮೇಲೆ ಅಡ್ಡಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕರಡಿ ಮಾಡುವ ಕೆಲಸವೆಂದರೆ ಮುಖ್ಯ ವೇದಿಕೆಯ ಕಡೆಗೆ ಹೋಗಿ ತನ್ನ ಮೂಗನ್ನು ನೆಲಕ್ಕೆ ಸವರಿಕೊಂಡು ಹಿಂತಿರುಗುತ್ತದೆ. ಅದೃಷ್ಟವಶಾತ್, ಕರಡಿ ಮತ್ತು ಅದರ ಮರಿಗಳು ಒಳಗೆ ಪ್ರವೇಶಿಸಿದ ಸಮಯದಲ್ಲಿ ಅತಿಥಿಗಳು ಯಾರೊಬ್ಬರೂ ಗಾಯಗೊಂಡಿಲ್ಲ. ಸ್ಥಳದಲ್ಲಿದ್ದ ಕೆಲಸಗಾರನು ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಜೊತೆಗೆ ಅವರಿಬ್ಬರೂ ಮಾತನಾಡಿಕೊಂಡಿದ್ದು, ಅದು ನಮ್ಮ ಮೇಲೆ ದಾಳಿ ಮಾಡುವುದಿಲ್ಲ ತಾನೆ ಎನ್ನುವ ಸಂಭಾಷಣೆಯನ್ನು ವಿಡೀಯೋದಲ್ಲಿ ಕೇಳಬಹುದಾಗಿದೆ.
ಕೊನೆಗೆ ಕರಡಿಗಳ ಕುಟುಂಬವು ಯಾವುದೇ ಹಾನಿಯಾಗದಂತೆ ಮದುವೆ ಮನೆಯಿಂದ ನಿರ್ಗಮಿಸಿವೆ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪರ್ವೀನ್ ಕಸನ್ ಅವರು ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ. ಇಡೀ ಘಟನೆಯ ಬಗ್ಗೆ ನಕಾರಾತ್ಮಕ ಆಲೋಚನೆಗಳನ್ನು ಹೊಂದಿದ್ದು ಅವರು ಈ ವ್ಯವಸ್ಥೆಯಿಂದ ಸಂತೋಷವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಇಲ್ಲಿಯವರೆಗೂ ಈ ವಿಡಿಯೋವನ್ನು 24.3 ಸಾವಿರ ಜನ ವಿಕ್ಷಣೆ ಮಾಡಿದ್ದು, ಸುಮಾರು 500 ಲೈಕ್ಸ್ ಬಂದಿವೆ.
ಇದನ್ನೂ ಓದಿ:
Viral Video: ಬಾಯಲ್ಲಿ ಕಚ್ಚಿಕೊಂಡು ಹೊರಟ ಚಿರತೆಯನ್ನು ಕಚ್ಚಿದ ಮರಿ ಹೆಬ್ಬಾವು: ಮುಂದೇನಾಯ್ತು?