ಮಡಿಕೇರಿಯಲ್ಲಿ ನಡೆದಿರುವಂತ ಒಂದು ಘಟನೆ ನೋಡುಗರ ಮನ ಕಲಕುವಂತೆ ಮಾಡಿದೆ. ತಾಯಿ ಆನೆಯೊಂದು ಪ್ರಸವದ ವೇಳೆ ಮರಿ ಆನೆಗೆ ಜನ್ಮ ಕೊಟ್ಟಿದೆ. ಈ ವೇಳೆ ಕೆಸರಿನಲ್ಲಿ ಸಿಲುಕಿ ಒದ್ದಾಡಿದ ಮರಿಯನ್ನ ರಕ್ಷಿಸೋಕೆ ತಾಯಿ ಆನೆ ಹರಸಾಹಸ ಪಟ್ಟಿರುವಂತಾ ಘಟನೆ ನಡೆದಿದೆ.
ಮಡಿಕೇರಿ ಸಮೀಪದ ಏಳನೇ ಹೊಸಕೋಟೆ ಗ್ರಾಮದಲ್ಲಿ ಪ್ರಸವದ ವೇಳೆ ನವಜಾತ ಆನೆಮರಿ ಕೆಸರಿಗೆ ಜಾರಿ ಬಿದ್ದಿದ್ದು ಕೆಸರಿನಲ್ಲಿ ಸಿಲುಕಿ ಒದ್ದಾಡಿದೆ. ಆನೆ ಮರಿ ಮೇಲೆತ್ತಲು ತಾಯಿ ಆನೆ ಪರದಾಡಿದೆ. ಸದ್ಯ ಅರಣ್ಯ ಇಲಾಖೆ ಆನೆ ಮರಿ ರಕ್ಷಣೆಗೆ ಮುಂದಾಗಿದೆ.