Viral Video: ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ಮನುಷ್ಯರಂತೆ ಕುರ್ಚಿ ಮೇಲೆ ಕುಳಿತ ತುಂಟ ನಾಯಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ಈಜುಕೊಳದ ಬಳಿ ನಾಯಿಯೊಂದು ಕುಳಿತುಕೊಳ್ಳುವ ಹಾಸನದ ಮೇಲೆ ಮನುಷ್ಯರಂತೆ ಕುಳಿತುಕೊಂಡ ವಿಡಿಯೋ ವೈರಲ್ ಆಗುತ್ತಿದ್ದು, ನಾಯಿಯ ತುಂಟಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Viral Video: ಸ್ವಿಮ್ಮಿಂಗ್ ಪೂಲ್ ಪಕ್ಕದಲ್ಲಿ ಮನುಷ್ಯರಂತೆ ಕುರ್ಚಿ ಮೇಲೆ ಕುಳಿತ ತುಂಟ ನಾಯಿ: ಹೃದಯಸ್ಪರ್ಶಿ ವಿಡಿಯೋ ವೈರಲ್
ವೈರಲ್ ಆದ ನಾಯಿ
TV9kannada Web Team

| Edited By: Rakesh Nayak

May 24, 2022 | 11:26 AM

ಪ್ರೀತಿಯಿಂದ ಸಾಕಿರುವ ಬೆಕ್ಕು ಮತ್ತು ನಾಯಿಗಳು (Cat and Dog) ಮಾಡುವ ತುಂಟಾಟಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ಇವುಗಳು ಮನುಷ್ಯರಂತೆ ನಡೆದುಕೊಳ್ಳುತ್ತವೆ. ಇದಕ್ಕೆ ನಿದರ್ಶನವೆಂಬಂತೆ, ಈಜು ಕೊಳ (Swimming Pool)ದ ಬಳಿ ನಾಯಿಯೊಂದು ಮನುಷ್ಯರಂತೆ ಕುಳಿತು ಸಮಯ ಕಳೆಯುವ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮನಸೋತಿದ್ದಾರೆ. ವೈರಲ್ ವಿಡಿಯೋ (Viral video)ದಲ್ಲಿರುವಂತೆ, ಸ್ವಿಮ್ಮಿಂಗ್ ಪೂಲ್​ ಬಳಿ ಕುಳಿತುಕೊಳ್ಳುವ ಹಾಸನದ ವ್ಯವಸ್ಥೆ ಇದೆ. ಇದರ ಮೇಲೆ ನಾಯಿ (Dog)ಯೊಂದು ಕನ್ನಡಕವನ್ನು ಹಾಕಿ ಹಾಯಾಗಿ ಮಲಗಿಕೊಂಡು ವಿಶ್ರಾಂತಿ ಪಡೆಯುತ್ತಿದೆ. ಅಲ್ಲದೆ ಪಕ್ಕದಲ್ಲಿ ದಿಂಬನ್ನೂ ಇಟ್ಟುಕೊಂಡಿದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ನಾಯಿ ವಿಶ್ರಮಿಸುತ್ತಿದ್ದ ಸ್ಥಳವನ್ನು ನಾಯಿಯಿಂದ ಹುಷಾರಾಗಿರಿ ಎಂಬ ಸೂಚನಾ ಫಲಕವನ್ನು ಹಾಕಲಾಗಿದೆ. ಇದರ ವಿಡಿಯೋವನ್ನು AGuyandAGolden ಎಂಬ ಟ್ವಿಟರ್ ಖಾತೆಯಲ್ಲಿ ”ಕಾವಲು ನಾಯಿ ಕರ್ತವ್ಯ” ಎಂಬ ಶೀರ್ಷಿಕೆ ಬರೆದು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Viral Video: ವೀಲ್​ಚೇರ್​​ನಲ್ಲಿ ಕುಳಿತ ಗೆಳೆಯನಿಗೆ ಆಟವಾಡಲು ಸಹಾಯ ಮಾಡಿದ ಬಾಲಕ; ವಿಡಿಯೋ ವೈರಲ್‘

ಬೆಕ್ಕುಗಳು ಮನೆಯಲ್ಲಿ ಹೆಚ್ಚು ತುಂಟಾಟಗಳನ್ನು ನಡೆಸುತ್ತವೆ. ನಾಯಿಗಳನ್ನು ಸಾಮಾನ್ಯವಾಗಿ ಬೀಚ್ ಕಡೆಗಳಿಗೂ ಕೊಂಡೊಯ್ಯುತ್ತಾರೆ. ಹೀಗಾಗಿ ಮಾಲೀಕನ ಮನೆಯಲ್ಲಿ ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲೂ ತುಂಟಾಟಗಳನ್ನು ನಡೆಸುತ್ತವೆ. ನಾಯಿಗಳ ಇಂಥ ಚೇಷ್ಟೆಗಳನ್ನು ಕ್ಯಾಮರಾ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹಂಚುತ್ತಾರೆ. ಇಂಥ ಹೃದಯಸ್ಪರ್ಶಿ ವಿಡಿಯೋಗಳಿಗೆ ನೆಟ್ಟಿಗರು ಮನಸೋತು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: Shocking Video: ಮಂಗಾಟವಾಡಲು ಬೋನಿನ ಬಳಿ ಬಂದ ಯುವಕನ ಕೈ ಕಚ್ಚಿದ ಸಿಂಹ; ಭಯಾನಕ ವಿಡಿಯೋ ವೈರಲ್

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada