ಕಲಾವಿದನ ಕುಂಚದಿಂದ ಮೂಡಿ ಬಂದ ಎಲ್ಲ ಚಿತ್ರಗಳು ಅದ್ಭುತವಾಗಿರುವತ್ತವೆ ಅವುಗಳನ್ನು ನೋಡುವುದೇ ಚಂದ. ತಮಿಳುನಾಡಿನ (Tamilnadu) ಕಾಂಚೀಪುರಂನ ವ್ಯಕ್ತಿಯೊಬ್ಬರು ಅಪರೂಪದ ಸ್ಕೆಚ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ಗಣೇಶ್ ಎಂಬ ಕಲಾವಿದರು ಮಹೀಂದ್ರಾ ಕಂಪನಿಯ ಮಾಲಿಕಾರದ ಆನಂದ್ ಮಹೀಂದ್ರಾ (Anand Mahindra) ಅವರ ಭಾವಚಿತ್ರವನ್ನು ಚಿತ್ರಿಸಿದ್ದಾರೆ. ಆನಂದ ಮಹೀಂದ್ರಾ ಅವರ ಭಾವಚಿತ್ರವನ್ನು, ಚಿತ್ರಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ
ದಲಿತ ಸ್ವಾಮೀಜಿಗೆ ಸಿಹಿ ತಿನ್ನಿಸಿ ಅವರ ಬಾಯಿಂದ ಎಂಜಲು ತಿಂದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್
ಶಿವಕುಮಾರ ಹೇಳಿದ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಜಾರಿಕೊಂಡರು ಸಿದ್ದರಾಮಯ್ಯ
ಶ್ರೀನಿವಾಸ ಸಾಗರ ಅಣೆಕಟ್ಟು ಹತ್ತಲು ಮುಂದಾದ ಯುವಕ; ಕಾಲು ಜಾರಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಯುವಕ
SBI Personal Loan: ಎಸ್ಬಿಐ ಯೋನೋ ಮೂಲಕ ಫಟಾಫಟ್ ಪರ್ಸನಲ್ ಲೋನ್ ರಿಯಲ್ ಟೈಮ್ ಎಕ್ಸ್ಪ್ರೆಸ್ ಕ್ರೆಡಿಟ್
ಆದರೆ ಗಣೇಶ ಅವರು ಚಿತ್ರವನ್ನು ಸಾಮನ್ಯವಾಗಿ ಬಿಡಿಸಿಲ್ಲ. ಗಣೇಶ್ ಅವರು 741 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ತಮಿಳು ಅಕ್ಷರಗಳಿಂದ ಭಾವಚಿತ್ರವನ್ನು ರಚಿಸಿದ್ದಾರೆ. ಇದನ್ನು ಕಂಡು ಮಹೀಂದ್ರ ಅವರು ಮೂಕವಿಸ್ಮಿತರಾಗಿದ್ದಾರೆ. ಗಣೇಶ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ಟ್ವೀಟ್ ಮಾಡಿದ ಆನಂದ್ ಮಹೀಂದ್ರಾ ಅವರು ವಾಹ್, ನನ್ನ ಚಿತ್ರವನ್ನು 741 ವರ್ಷಗಳ ಪ್ರಾಚೀನ ಇತಿಹಾಸ ಹೊಂದಿರುವ ತಮಿಳು ಅಕ್ಷರಗಳಿಂದ ರೂಪಿಸಲಾಗಿದೆ, ನಾನು ಆಶ್ಚರ್ಯ ಪಡುತ್ತೇನೆ. ಚಿತ್ರ ಬಿಡಿಸಿದವರನ್ನು ಶ್ಲಾಘಿಸಿಸುತ್ತೇನೆ. ನನ್ನ ಮನೆಯಲ್ಲಿ ಭಾವಚಿತ್ರವನ್ನು ಇರಿಸಲು ಬಯಸುತ್ತೇನೆ ಎಂದು ತಮೀಳು ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.
ஆஹா, என் உருப்படம் 741 பழமையான தமிழ் எழுத்துக்களால் வடிவானது , நான் வியக்கிறேன்.தமிழ் மொழி பிரம்மாண்டத்தின் பொருட்டு, உருவாக்கியவரின் பாராட்டாக , உருவ படத்தை என் வீட்டில் வைக்க விருப்பபடுகிறேன்.. https://t.co/9nAyMAlUAK
ವೀಡಿಯೊವನ್ನು 142k ಜನರು ವೀಕ್ಷಿಸಿದ್ದಾರೆ ಮತ್ತು ಸಾಕಷ್ಟು ಕಾಮೇಂಟ್ಗಳು ಬಂದಿವೆ. ಜನರು ಅದ್ಭುತ ಪರಿಕಲ್ಪನೆಯಿಂದ ದಿಗ್ಭ್ರಮೆಗೊಂಡರು ಮತ್ತು ಕಲಾಕೃತಿಯು ನಿಜವಾಗಿಯೂ ನೋಡುವ ದೃಶ್ಯವಾಗಿದೆ ಎಂದು ಬರೆದಿದ್ದಾರೆ. ಇಂತಹ ಕಲಾಕೃತಿಗಳನ್ನು ಇನ್ನಷ್ಟು ಮಾಡುವಂತೆ ಗಣೇಶ್‌ಗೆ ಹಲವರು ವಿನಂತಿಸಿದರು.
ಈ ಹಿಂದೆ ಗಣೇಶ್ ಅವರು ಅನೇಕ ಗಣ್ಯರ ಚಿತ್ರಗಳನ್ನು ತಮೀಳು ಭಾಷೆಯಲ್ಲಿ ಚಿತ್ರಿಸಿದ್ದರು.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ