Vismaya Dowry Death Case: ಪತ್ನಿಯ ಆತ್ಮಹತ್ಯೆಗೆ ಪತಿಯೇ ಕಾರಣವೆಂದು ತೀರ್ಪು ನೀಡಿದ ನ್ಯಾಯಾಲಯ
ವಿಸ್ಮಯಾ ವಿ ನಾಯರ್ (22) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಕೇರಳದ ಕೊಲ್ಲಂ ಜಿಲ್ಲೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆರೋಪಿ ಕಿರಣ್‌ಕುಮಾರ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ.
ಕೇರಳ: ವಿಸ್ಮಯಾ ವಿ ನಾಯರ್ (22) ಆತ್ಮಹತ್ಯೆ ಪ್ರಕರಣಕ್ಕೆ (Vismaya Dowry Death Case) ಸಂಬಂಧಿಸಿದಂತೆ ಸೋಮವಾರ ಕೇರಳದ ಕೊಲ್ಲಂ ಜಿಲ್ಲೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು (Kerala Sessions court) ಆರೋಪಿ ಕಿರಣ್‌ಕುಮಾರ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ವಿಸ್ಮಯಾ ವಿ ನಾಯರ್ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು. ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ. ಅಪರಾಧಿ ಕಿರಣ್‌ಕುಮಾರ್ ರಾಜ್ಯ ಮೋಟಾರು ವಾಹನ ಇಲಾಖೆಯಲ್ಲಿ ಹೆಚ್ಚುವರಿ ವಾಹನ ನಿರೀಕ್ಷಕನಾಗಿದ್ದನು. ಈತನ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೇಳಿ ಬರುತ್ತಿದ್ದಂತೆ ಸರಕಾರಿ ನೌಕರದಿಂದ ವಜಾ ಗೊಳಿಸಲಾಗಿತ್ತು.
ವಿಸ್ಮಯಾ ಜೂನ್ 21, 2021 ರಂದು ಕೊಲ್ಲಂನಲ್ಲಿರುವ ಕುಮಾರ್ ಅವರ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಘಟನೆಯ ನಂತರ, ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ 304-ಬಿ (ವರದಕ್ಷಿಣೆ ಸಾವು) ಸೇರಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆತನ ಮೇಲೆ ಆರೋಪ ಹೊರಿಸಲಾಗಿತ್ತು. ವರದಕ್ಷಿಣೆ ಕಿರುಕುಳದಿಂದ ವಿಸ್ಮಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು 500 ಪುಟಗಳ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಇದನ್ನು ಓದಿ: ಮಂಟಪದಲ್ಲೇ ವರನ ತಲೆಯಿಂದ ಕೆಳಗೆ ಬಿತ್ತು ವಿಗ್; ಮದುವೆಯೇ ಬೇಡವೆಂದ ವಧು!
ವರದಕ್ಷಿಣೆ ಮರಣದ ಹೊರತಾಗಿ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 498-ಎ (ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವಂತಹ ಸ್ವಭಾವದ ಯಾವುದೇ ಉದ್ದೇಶಪೂರ್ವಕ ನಡವಳಿಕೆ) ಅಡಿಯಲ್ಲಿ ಸೋಮವಾರ ನ್ಯಾಯಾಲಯವು ಕುಮಾರ್ ಅವರನ್ನು ಅಪರಾಧಿ ಎಂದು ಘೋಷಿಸಿತು. ಅಲ್ಲದೆ ಆತನ ಜಾಮೀನು ರದ್ದುಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಇದನ್ನು ಓದಿ: ಸರ್ಕಾರಿ ಭೂಮಿ ಕಬಳಿಕೆ ಆರೋಪ: ಬಿಕೆಯು ಒಡಕಿನ ಬಳಿಕ ಟಿಕಾಯತ್ ಸಹೋದರರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ
ದಂಪತಿಗಳು ಮೇ 2020 ರಲ್ಲಿ ವಿವಾಹವಾದರು. ವಿಸ್ಮಯಾ ಅವರ ತಂದೆ ತ್ರಿವಿಕ್ರಮನ್ ನಾಯರ್ ದಂಪತಿಗೆ ಉಡುಗೊರೆಯಾಗಿ ನೀಡಿದ 11 ಲಕ್ಷ ರೂಪಾಯಿ ವೆಚ್ಚದ ಹೊಸ ಕಾರಿನ ಬಗ್ಗೆ ಕುಮಾರ್ ಅತೃಪ್ತನಾಗಿದ್ದ. ತ್ರಿವಿಕ್ರಮನ್ ಅವರು ಕಾರು ಹೊರತುಪಡಿಸಿ 1.25 ಎಕರೆ ಜಮೀನು ಮತ್ತು 100 ಗ್ರಾಂ ಚಿನ್ನವನ್ನು ಕಿರಣ್ ಅವರಿಗೆ ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ನೀಡಿದ್ದರು. ಇಷ್ಟು ನೀಡಿದರೂ ಕಿರಣ್ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದನು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ