PM Modi in Japan ಭಾರತದ ಅಭಿವೃದ್ಧಿ ಪಯಣದಲ್ಲಿ ಜಪಾನ್ ಪ್ರಮುಖ ಪಾತ್ರ ವಹಿಸಿದೆ: ಜಪಾನ್​​ನಲ್ಲಿ ಮೋದಿ ಭಾಷಣ

PM Modi in Japan ಭಾರತದ ಅಭಿವೃದ್ಧಿ ಪಯಣದಲ್ಲಿ ಜಪಾನ್ ಪ್ರಮುಖ ಪಾತ್ರ ವಹಿಸಿದೆ: ಜಪಾನ್​​ನಲ್ಲಿ ಮೋದಿ ಭಾಷಣ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ಲಸಿಕೆಗಳು ಲಭ್ಯವಾದಾಗ ಭಾರತವು ತನ್ನ ಕೋಟಿಗಟ್ಟಲೆ ನಾಗರಿಕರಿಗೆ 'ಮೇಡ್ ಇನ್ ಇಂಡಿಯಾ' ಲಸಿಕೆಗಳನ್ನು ಪೂರೈಸಿದೆ ಮತ್ತು ಅವುಗಳನ್ನು ವಿಶ್ವದ 100 ಕ್ಕೂ ಹೆಚ್ಚು ದೇಶಗಳಿಗೆ ಕಳುಹಿಸಿದೆ. ಭಾರತವು ಗೌತಮ ಬುದ್ಧನ ಆಶೀರ್ವಾದವನ್ನು ಪಡೆಯುವಷ್ಟು ಅದೃಷ್ಟಶಾಲಿಯಾಗಿದೆ.

TV9kannada Web Team

| Edited By: Rashmi Kallakatta

May 23, 2022 | 6:06 PM

ಟೋಕಿಯೊ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಪಾನ್‌ನ ಟೋಕಿಯೊದಲ್ಲಿ(Tokyo) ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದು ಭಾರತ ಮತ್ತು ಜಪಾನ್ (Japan) ‘ನೈಸರ್ಗಿಕ ಪಾಲುದಾರರು’ ಎಂದಿದ್ದಾರೆ. ಈ ಸಂಬಂಧವು ಅನ್ಯೋನ್ಯತೆ,ಆಧ್ಯಾತ್ಮಿಕತೆ, ಸಹಕಾರ ಮತ್ತು ಒಗ್ಗೂಡಿವಿಕೆಯಿಂದ ಕೂಡಿದೆ ಎಂದು ಮೋದಿ ಹೇಳಿದ್ದಾರೆ. “ಭಾರತೀಯರು ನಮ್ಮ ‘ಕರ್ಮಭೂಮಿ’ಯೊಂದಿಗೆ ಹೃದಯಸಂಬಂಧವನ್ನಿಟ್ಟುಕೊಂಡಿರುತ್ತಾರೆ. ಆದರೆ ನಮ್ಮ ‘ಮಾತೃಭೂಮಿ’ ಮೇಲಿನ ಪ್ರೀತಿ ಎಂದಿಗೂ ಮರೆಯಾಗುವುದಿಲ್ಲ. ನಾವು ನಮ್ಮ ಮಾತೃಭೂಮಿಯಿಂದ ದೂರವಿರಲು ಸಾಧ್ಯವಿಲ್ಲ. ಇದು ನಮ್ಮ ದೊಡ್ಡ ಸಾಮರ್ಥ್ಯಗಳಲ್ಲಿ ಒಂದಾಗಿದೆ ಎಂದು ಮೋದಿ ಹೇಳಿದ್ದಾರೆ. ಚಿಕಾಗೋಗೆ ಹೋಗುವ ಮೊದಲು, ಸ್ವಾಮಿ ವಿವೇಕಾನಂದರು ಜಪಾನ್‌ಗೆ ಬಂದರು. ದೇಶವು ಅವರ ಮನಸ್ಸಿನಲ್ಲಿ ದೊಡ್ಡ ಛಾಪು ಮೂಡಿಸಿದೆ.  ಭಾರತದ ಯುವಕರು ತನ್ನ ಜೀವನದಲ್ಲಿ ಒಮ್ಮೆಯಾದರೂ ಜಪಾನ್‌ಗೆ ಭೇಟಿ ನೀಡಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಸ್ವಾಮಿ ವಿವೇಕಾನಂದರ ಈ ಸದ್ಭಾವನೆಯನ್ನು ಮುಂದಿಟ್ಟುಕೊಂಡು, ಜಪಾನ್‌ನ ಯುವ ಜನಾಂಗ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಬೇಕೆಂದು ನಾನು ಬಯಸುತ್ತೇನೆ ಎಂದು ಮೋದಿ ಹೇಳಿದ್ದಾರೆ. ಲಸಿಕೆಗಳು ಲಭ್ಯವಾದಾಗ ಭಾರತವು ತನ್ನ ಕೋಟಿಗಟ್ಟಲೆ ನಾಗರಿಕರಿಗೆ ‘ಮೇಡ್ ಇನ್ ಇಂಡಿಯಾ’ ಲಸಿಕೆಗಳನ್ನು ಪೂರೈಸಿದೆ ಮತ್ತು ಅವುಗಳನ್ನು ವಿಶ್ವದ 100 ಕ್ಕೂ ಹೆಚ್ಚು ದೇಶಗಳಿಗೆ ಕಳುಹಿಸಿದೆ. ಭಾರತವು ಗೌತಮ ಬುದ್ಧನ ಆಶೀರ್ವಾದವನ್ನು ಪಡೆಯುವಷ್ಟು ಅದೃಷ್ಟಶಾಲಿಯಾಗಿದೆ. ಎಷ್ಟೇ ದೊಡ್ಡ ಸವಾಲು ಎದುರಾದರೂ ಭಾರತವು ಮಾನವೀಯತೆಯ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ, ಭಾರತವು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತದೆ. ಕಳೆದ 100 ವರ್ಷಗಳಲ್ಲಿ ಅತಿದೊಡ್ಡ ಬಿಕ್ಕಟ್ಟು ಕೊವಿಡ್ ಸಮಯದಲ್ಲಿ, ಭಾರತವು ಜಗತ್ತಿನಾದ್ಯಂತ ಜನರಿಗೆ ಸಹಾಯ ಮಾಡಿದೆ ಎಂದಿದ್ದಾರೆ ಮೋದಿ.

ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು, ದೆಹಲಿ-ಮುಂಬೈ ಕೈಗಾರಿಕಾ ಕಾರಿಡಾರ್ ಅಥವಾ ಮೀಸಲಾದ ಸರಕು ಸಾಗಣೆ ಕಾರಿಡಾರ್ ಆಗಿರಲಿ, ಇವು ಭಾರತ-ಜಪಾನ್ ಸಹಕಾರಕ್ಕೆ ಉತ್ತಮ ಉದಾಹರಣೆಗಳಾಗಿವೆ. ಇಂದು, ಭಾರತವು ತನ್ನ ಮೂಲಸೌಕರ್ಯ ಮತ್ತು ಸಾಮರ್ಥ್ಯದ ನಿರ್ಮಾಣವನ್ನು ಹೆಚ್ಚಿಸುವ ವೇಗ ಮತ್ತು ಪ್ರಮಾಣವನ್ನು ಜಗತ್ತು ಅರಿತುಕೊಳ್ಳುತ್ತಿದೆ. ನಮ್ಮ ಈ ಸಾಮರ್ಥ್ಯವನ್ನು ಬೆಳೆಸುವಲ್ಲಿ ಜಪಾನ್ ಪ್ರಮುಖ ಪಾಲುದಾರ ಎಂದು ಮೋದಿ ಹೇಳಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು

ಇದನ್ನೂ ಓದಿ

  1. ನಾನು ಇಲ್ಲಿಗೆ ಬಂದಾಗಲೆಲ್ಲಾ ನನಗೆ ತುಂಬಾ ಪ್ರೀತಿ ಸಿಗುತ್ತದೆ. ನಿಮ್ಮಲ್ಲಿ ಅನೇಕರು ಇಷ್ಟು ದಿನ ಇಲ್ಲಿ ನೆಲೆಸಿದ್ದೀರಿ. ಜಪಾನ್‌ನಲ್ಲಿರುವ ಭಾರತೀಯ ಸಮುದಾಯದ ಆತ್ಮೀಯ ಸ್ವಾಗತಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ “ಜಪಾನಿನ ಭಾಷೆ, ಉಡುಗೆ, ಸಂಸ್ಕೃತಿ ಮತ್ತು ಆಹಾರವು ಒಂದು ರೀತಿಯಲ್ಲಿ ನಿಮ್ಮ ಜೀವನದ ಭಾಗವಾಗಿದೆ.
  2. ಸ್ವಾಮಿ ವಿವೇಕಾನಂದರು ತಮ್ಮ ಐತಿಹಾಸಿಕ ಭಾಷಣಕ್ಕಾಗಿ ಚಿಕಾಗೋಗೆ ಹೋಗುತ್ತಿದ್ದಾಗ, ಅದಕ್ಕೂ ಮೊದಲು ಅವರು ಜಪಾನ್‌ಗೆ ಸಹ ಬಂದಿದ್ದರು. ಜಪಾನ್ ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿತು. ಜಪಾನ್ ಜನರ ದೇಶಪ್ರೇಮ, ಜಪಾನ್ ಜನರ ಆತ್ಮವಿಶ್ವಾಸ, ಸ್ವಚ್ಛತೆಯ ಬಗ್ಗೆ ಜಪಾನ್ ಜನರ ಜಾಗೃತಿಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದರು.
  3. “ಜಪಾನ್‌ನೊಂದಿಗಿನ ನಮ್ಮ ಸಂಬಂಧವು ಶಕ್ತಿ, ಗೌರವದಿಂದ ಕೂಡಿದೆ. ಜಪಾನ್‌ನೊಂದಿಗಿನ ನಮ್ಮ ಸಂಬಂಧವು ಬುದ್ಧ, ಜ್ಞಾನ ಮತ್ತು ಧ್ಯಾನದ ಸಂಬಂಧವಾಗಿದೆ. ಭಗವಾನ್ ಬುದ್ಧ ತೋರಿಸಿದ ಮಾರ್ಗದಲ್ಲಿ ಇಂದಿನ ಜಗತ್ತು ನಡೆಯಬೇಕಾಗಿದೆ. ಹಿಂಸಾಚಾರ, ಅರಾಜಕತೆ, ಭಯೋತ್ಪಾದನೆ ಅಥವಾ ಹವಾಮಾನ ಬದಲಾವಣೆಯಿಂದ ಇಂದು ಜಗತ್ತು ಎದುರಿಸುತ್ತಿರುವ ಎಲ್ಲಾ ಸವಾಲುಗಳಿಂದ ಮಾನವೀಯತೆಯನ್ನು ಉಳಿಸುವ ಮಾರ್ಗ ಇದು.
  4. ಭಾರತವು ತನ್ನ ಆರೋಗ್ಯ ಕ್ಷೇತ್ರವನ್ನು ಸುಧಾರಿಸಲು ಹೂಡಿಕೆ ಮಾಡುತ್ತಿದೆ. ವಿಶ್ವ ಆರೋಗ್ಯಸಂಸ್ಥೆಯ ಡೈರೆಕ್ಟರ್ ಜನರಲ್ಸ್ ಗ್ಲೋಬಲ್ ಹೆಲ್ತ್ ಲೀಡರ್ಸ್ ಪ್ರಶಸ್ತಿ ಪಡೆದ ಆಶಾ ಕಾರ್ಯಕರ್ತೆಯರ ಇತ್ತೀಚಿನ ಸಾಧನೆಗಳನ್ನು ಅವರು ಶ್ಲಾಘಿಸಿದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada