Kannada News National Narendra Modi meets top business leaders on Day 1 Japan visit ahead of Quad summit 2022
Quad summit 2022 ಕ್ವಾಡ್ ಶೃಂಗಸಭೆಗೆ ಮುನ್ನ ಜಪಾನ್ನಲ್ಲಿ ಉದ್ಯಮಿಗಳನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ಮೋದಿ ಮತ್ತು ಎನ್‌ಇಸಿ ಮುಖ್ಯಸ್ಥರು ಭಾರತದಲ್ಲಿ ಕೈಗಾರಿಕಾ ಅಭಿವೃದ್ಧಿ, ತೆರಿಗೆ ಮತ್ತು ಕಾರ್ಮಿಕ ಸೇರಿದಂತೆ ವ್ಯಾಪಾರವನ್ನು ಸುಲಭಗೊಳಿಸಲು ಕೈಗೊಳ್ಳಲಾಗುತ್ತಿರುವ ಹಲವಾರು ಸುಧಾರಣೆಗಳ ಕುರಿತು ಚರ್ಚಿಸಿದ್ದಾರೆ.
ತಡಶಿ ಯಾನೈ ಜೊತೆ ಪ್ರಧಾನಿ ಮೋದಿImage Credit source: Twitter
ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಎರಡು ದಿನಗಳ ಜಪಾನ್ (Japan) ಪ್ರವಾಸದ ಮೊದಲ ದಿನದಂದು ಅಲ್ಲಿನ ಅಗ್ರ ಗಣ್ಯ ಉದ್ಯಮಿಗಳನ್ನು ಭೇಟಿಯಾದರು. ಕ್ವಾಡ್ ಶೃಂಗಸಭೆ 2022ರ (Quad Summit 2022)ಮೊದಲು ಮೋದಿ ಜಾಗತಿಕ ಮನ್ನಣೆಯನ್ನು ಗಳಿಸಿದ ಜಪಾನಿನ ಪ್ರಮುಖ ಸಂಸ್ಥೆಗಳ ಸಿಇಒಗಳನ್ನು ಭೇಟಿ ಮಾಡಿದರು. ಟೋಕಿಯೊದಲ್ಲಿ ಎನ್‌ಇಸಿ ಕಾರ್ಪೊರೇಷನ್ ಅಧ್ಯಕ್ಷ ಡಾ ನೊಬುಹಿರೊ ಎಂಡೊ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದು ಸಂವಾದದ ಸಮಯದಲ್ಲಿ ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಎನ್‌ಇಸಿ ಪಾತ್ರವನ್ನು ಶ್ಲಾಘಿಸಿದರು. ಅವರು ಭಾರತದಲ್ಲಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಅವಕಾಶಗಳನ್ನು ಚರ್ಚಿಸಿದರು ಎಂದು ಎಂಇಎ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಎನ್‌ಇಸಿ ಮುಖ್ಯಸ್ಥರು ಭಾರತದಲ್ಲಿ ಕೈಗಾರಿಕಾ ಅಭಿವೃದ್ಧಿ, ತೆರಿಗೆ ಮತ್ತು ಕಾರ್ಮಿಕ ಸೇರಿದಂತೆ ವ್ಯಾಪಾರವನ್ನು ಸುಲಭಗೊಳಿಸಲು ಕೈಗೊಳ್ಳಲಾಗುತ್ತಿರುವ ಹಲವಾರು ಸುಧಾರಣೆಗಳ ಕುರಿತು ಚರ್ಚಿಸಿದ್ದಾರೆ. “ಇಂದು ನಮಗೆ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸಲು ಉತ್ತಮ ಅವಕಾಶ ಸಿಕ್ಕಿದೆ. ಡಿಎಕ್ಸ್ ಅನ್ನು ಹೇಗೆ ಅಳವಡಿಸಬೇಕು ಮತ್ತು ಸ್ಮಾರ್ಟ್ ಸಿಟಿಗಳಿಗೆ ಹೇಗೆ ಕೊಡುಗೆ ನೀಡಬೇಕು ಎಂಬುದರ ಕುರಿತು ನಾವು ಮಾತನಾಡಿದ್ದೇವೆ. ಪ್ರಸ್ತುತ ಸರ್ಕಾರವು ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿನ ಯೋಜನೆಗಳನ್ನು ಹೊಂದಿದೆ ಎಂದು ಎಂಡೋ ಪ್ರಧಾನ ಮಂತ್ರಿ ಮೋದಿ ಜತೆಗಿನ ಭೇಟಿ ನಂತರ ಹೇಳಿದ್ದಾರೆ.
PM @narendramodi interacted with Mr. Tadashi Yanai, Chairman, President and CEO of @UNIQLO_JP. Mr. Yanai appreciated the entrepreneurial zeal of the people of India. PM Modi asked Mr. Yanai to take part in the PM-Mitra scheme aimed at further strengthening the textiles sector. pic.twitter.com/fKCjWwYNH2
ಇದನ್ನೂ ಓದಿ
ಖಾಕಿ ಚಡ್ಡಿ, ಕರಿ ಟೋಪಿಯಿಂದ ಯಾವ ಧರ್ಮ ಉಳಿಸೋಕೆ ಸಾಧ್ಯ? ಬಿ.ಕೆ ಹರಿಪ್ರಸಾದ್ ಹೇಳಿಕೆ
Narendra Modi: ಇಡೀ ಭಾರತವೇ ನಿಮ್ಮ ಸಾಧನೆ ಕೊಂಡಾಡಿದೆ: ಥಾಮಸ್ ಕಪ್ ಆಟಗಾರರನ್ನು ಶ್ಲಾಘಿಸಿದ ಪ್ರಧಾನಿ ಮೋದಿ
Quad Summit 2022: 40 ಗಂಟೆಗಳಲ್ಲಿ 23 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿ
ಭಾಷಾ ವೈವಿಧ್ಯತೆ ದೇಶದ ಹೆಮ್ಮೆ ಆದರೆ ಭಾಷೆಯ ವಿಷಯದಲ್ಲಿ ವಿವಾದ ಹುಟ್ಟು ಹಾಕುವ ಯತ್ನ ಮಾಡಲಾಗುತ್ತಿದೆ: ಪ್ರಧಾನಿ ಮೋದಿ
ನಂತರ ಜಪಾನ್‌ನ ಪ್ರಮುಖ ಉಡುಪು ಬ್ರ್ಯಾಂಡ್ ಯುನಿಕ್ಲೋ ಅಧ್ಯಕ್ಷ ಮತ್ತು ಸಿಇಒ ತಡಾಶಿ ಯಾನೈ ಅವರನ್ನು ಪ್ರಧಾನಿ ಮೋದಿ ಭೇಟಿಯಾದರು. “ಯಾನೈ ಅವರು ಭಾರತದ ಜನರ ಉದ್ಯಮಶೀಲತೆಯ ಉತ್ಸಾಹವನ್ನು ಶ್ಲಾಘಿಸಿದರು. ಜವಳಿ ವಲಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪಿಎಂ-ಮಿತ್ರ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಪಿಎಂ ಮೋದಿ ಅವರು ಯಾನೈ ಅವರನ್ನು ಕೇಳಿಕೊಂಡರು” ಎಂದು ಪಿಎಂಒ ಟ್ವೀಟ್ ಮಾಡಿದೆ.
ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ಸ್ ಮತ್ತು ಅಪೆರಲ್ (PM MITRA) ಪಾರ್ಕ್‌ಗಳ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಡೆತನ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಜವಳಿ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಪ್ರತಿ ಪಾರ್ಕ್ ಇನ್ಕ್ಯುಬೇಶನ್ ಕೇಂದ್ರ, ಸಾಮಾನ್ಯ ಸಂಸ್ಕರಣಾ ಮನೆ ಮತ್ತು ಸಾಮಾನ್ಯ ತ್ಯಾಜ್ಯನೀರಿನ ಸಂಸ್ಕರಣಾ ಘಟಕ ಮತ್ತು ವಿನ್ಯಾಸ ಕೇಂದ್ರಗಳು ಮತ್ತು ಪರೀಕ್ಷಾ ಕೇಂದ್ರಗಳಂತಹ ಇತರ ಜವಳಿ ಸಂಬಂಧಿತ ಸೌಲಭ್ಯಗಳನ್ನು ಹೊಂದಿರುತ್ತದೆ. ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸಲು ಮಾಸ್ಟರ್ ಡೆವಲಪರ್ ಮಾತ್ರ ಇದ್ದರೆ ಸಾಲದು ರಿಯಾಯಿತಿ ಅವಧಿಯಲ್ಲಿ ಅದನ್ನು ನಿರ್ವಹಿಸಬೇಕಾಗುತ್ತದೆ.
ಆಟೋಮೊಬೈಲ್ ದೈತ್ಯ ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಸಲಹೆಗಾರ ಒಸಾಮು ಸುಜುಕಿ ಮತ್ತು ನಂತರ ಸಾಫ್ಟ್‌ಬ್ಯಾಂಕ್ ಗ್ರೂಪ್ ಕಾರ್ಪೊರೇಷನ್‌ನ ಮಂಡಳಿಯ ನಿರ್ದೇಶಕ ಮಸಯೋಶಿ ಸನ್ ಅವರನ್ನೂ ಮೋದಿ ಭೇಟಿ ಮಾಡಿದರು. ಇಂದು ಸಂಜೆ ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್ ವರ್ಕ್ ಪ್ರಾರಂಭಿಸಲು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕರೆದಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಬ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದಾರೆ.