AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಕಿ ಚಡ್ಡಿ, ಕರಿ ಟೋಪಿಯಿಂದ ಯಾವ ಧರ್ಮ ಉಳಿಸೋಕೆ ಸಾಧ್ಯ? ಬಿ.ಕೆ ಹರಿಪ್ರಸಾದ್ ಹೇಳಿಕೆ

ಕಂಡವರ ಮಕ್ಕಳನ್ನು ಬಾವಿಗೆ ಹಾಕಿ ಆಳ ನೋಡಿದ್ರು. ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ. ಶಿಕ್ಷಣದಲ್ಲಿ ಸಂಪೂರ್ಣ ಕೇಸರಿಕರಣ ಮಾಡಲಾಗುತ್ತಿದೆ. ಹೆಡಗೇವಾರ್ ಅವರನ್ನು ಪಠ್ಯದಲ್ಲಿ ಸೇರಿಸಿ, ನಾರಾಯಣ ಗುರು, ಕುವೆಂಪು ಅವರನ್ನು ಬಿಟ್ಟಿದ್ದಾರೆ.

ಖಾಕಿ ಚಡ್ಡಿ, ಕರಿ ಟೋಪಿಯಿಂದ ಯಾವ ಧರ್ಮ ಉಳಿಸೋಕೆ ಸಾಧ್ಯ? ಬಿ.ಕೆ ಹರಿಪ್ರಸಾದ್ ಹೇಳಿಕೆ
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್
TV9 Web
| Edited By: |

Updated on: May 22, 2022 | 5:39 PM

Share

ಕಾರವಾರ: ಖಾಕಿ ಚಡ್ಡಿ ಕರಿ ಟೋಪಿಯಿಂದ ಯಾವ ಧರ್ಮ ಉಳಿಸೋಕೆ ಸಾಧ್ಯ. ಛಪ್ಪನ್ ಇಂಚ್ ಕಾ ಛಾತಿ ಹೊಂದಿರುವ ಮೋದಿಗೆ ಚೀನಾ ಎಂದು ಹೇಳಲು ಅವರಿಗೆ ಧೈರ್ಯವಿಲ್ಲ. ಮೋದಿ ಪ್ರಧಾನಿಯಾದ ಬಳಿಕ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಹೇಳಲಿ ಎಂದು ಕುಮಟಾದ ಗಿಬ್ ಮೈದಾನದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ 20 ಡ್ಯಾಂ ಕಾಂಗ್ರೆಸ್ ಕಟ್ಟಿದ್ರೆ, ಬಿಜೆಪಿ ಒಂದು ಕೆರೆನೂ ಕಟ್ಟಿಸಿಲ್ಲ. ಎಲ್ಲಾ‌‌ ಜಾಗವನ್ನು ಬಿಜೆಪಿಯವರು ನುಂಗಿ ಹಾಕಿದ್ದಾರೆ. ಬಿಜೆಪಿ ಲೂಟಿ ಸರಕಾರ, ವೈಪಲ್ಯ ಮುಚ್ಚಿಸಲು ಧರ್ಮದ ನಡುವೆ ಬಿರುಕು ಮೂಡಿಸುತ್ತಾರೆ. ದೇಶದ ಪ್ರಪ್ರಥಮ ಉಗ್ರವಾದಿ ನಾಥೋರಾಮ್ ಗೋಡ್ಸೆ ಗಾಂದಿಯನ್ನು ಕೊಂದ. ಬಾಬರಿ ಮಸೀದಿ ಕೆಡವಿ ರಾಮ ಮಂದಿರ ನಿರ್ಮಿಸಿದ್ರು. ಆದರೆ, ಬಿಜೆಪಿಯವರು ಯಾರೂ ಪ್ರಾಣ ತ್ಯಾಗ ಮಾಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದು ನನ್ನ ಕ್ಯಾಂಪಸ್, ನನ್ನ ವಿಭಾಗ ಎಂಬ ಮನೋಭಾವ ‌ಬೆಳಸಿಕೊಳ್ಳಿ : ಕವಿವಿ ಕುಲಪತಿ ಕೆ.ಬಿ.ಗುಡಸಿ

ಕಂಡವರ ಮಕ್ಕಳನ್ನು ಬಾವಿಗೆ ಹಾಕಿ ಆಳ ನೋಡಿದ್ರು. ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿದ್ದಾರೆ. ಶಿಕ್ಷಣದಲ್ಲಿ ಸಂಪೂರ್ಣ ಕೇಸರಿಕರಣ ಮಾಡಲಾಗುತ್ತಿದೆ. ಹೆಡಗೇವಾರ್ ಅವರನ್ನು ಪಠ್ಯದಲ್ಲಿ ಸೇರಿಸಿ, ನಾರಾಯಣ ಗುರು, ಕುವೆಂಪು ಅವರನ್ನು ಬಿಟ್ಟಿದ್ದಾರೆ. ನಿಮ್ಮ ಮಕ್ಕಳು ಜೈಲಿಗೆ ಹೋಗ್ಬೇಕಾದ್ರೆ ಬಿಜೆಪಿಗೆ ಹೋಗಿ. ಬಿಜೆಪಿಯವರು ತಲವಾರು, ಪಿಸ್ತೂಲು ಎಲ್ಲಾ ಕೊಡುತ್ತಾರೆ. ಒಳ್ಳೆಯ ವಿದ್ಯಾಭ್ಯಾಸ ಪಡೆಯಬೇಕಂದ್ರೆ ಕಾಂಗ್ರೆಸ್ ಬೆಂಬಲಿಸಿ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣವನ್ನ ಕೇಸರಿಕರಣ

ರಾಜ್ಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ಕನ್ನಡ ವಿಷಯದ ಐದನೇ ಪಾಠಕ್ಕೆ ಕೆ. ಬಿ. ಹೆಡ್ಗೆವಾರ್(KB Hedgewar) ಸಾರ್ವಜನಿಕ ಭಾಷಣವನ್ನ ಸೇರಿಸಲು ಶಿಫಾರಸ್ಸು ಮಾಡಿದೆ. ಈ ವಿಚಾರ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಪಠ್ಯದಲ್ಲಿ ಆರ್ಎಸ್ಎಸ್(RSS) ಸಂಸ್ಥಾಪಕರ ಭಾಷಣ ಸೇರಿಸುವುದನ್ನ ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ನಾಗಪುರ ಯುನಿವರ್ಸಿಟಿ ಅಜೆಂಡಾವನ್ನ ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಲ್ಲಿ ಶಿಕ್ಷಣವನ್ನ ಕೇಸರಿಕರಣ ಮಾಡಲಾಗುತ್ತಿದೆ. ಮಕ್ಕಳಲ್ಲಿ ವಿಷ ಬೀಜ ಬಿತ್ತಿ ಭಯಾನಕ ವಾತವರಣ ಸೃಷ್ಠಿ ಮಾಡಲು ಹುನ್ನಾರ ನಡೆಯುತ್ತಿದೆ ಎಂದು ವಿಧಾನ ಸಭೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad) ಆರೋಪಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.