Mumbai Indians Report Card: ಮುಂಬೈ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವದರೊಳಗೆ ಪ್ಲೇ ಆಫ್ ಬಾಗಿಲು ಮುಚ್ಚಿ ಹೋಗಿತ್ತು

Mumbai Indians Report Card: ಮುಂಬೈ ಇಂಡಿಯನ್ಸ್ ಐಪಿಎಲ್ 2022 ರ ಅಂಕ ಪಟ್ಟಿಯಲ್ಲಿ 10 ತಂಡಗಳಲ್ಲಿ ಕೊನೆಯ ಸ್ಥಾನದಲ್ಲಿದೆ. 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಈ ತಂಡಕ್ಕೆ ಈ ಬಾರಿ 5 ಪಂದ್ಯಗಳನ್ನೂ ಗೆಲ್ಲಲು ಸಾಧ್ಯವಾಗಿಲ್ಲ.

Mumbai Indians Report Card: ಮುಂಬೈ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವದರೊಳಗೆ ಪ್ಲೇ ಆಫ್ ಬಾಗಿಲು ಮುಚ್ಚಿ ಹೋಗಿತ್ತು
Mumbai Indians
Follow us
TV9 Web
| Updated By: ಪೃಥ್ವಿಶಂಕರ

Updated on:May 22, 2022 | 5:25 PM

ಅಂತ್ಯವು ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ. ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪಯಣವೂ ಚೆನ್ನಾಗಿ ಕೊನೆಗೊಂಡಿದೆ. ಸತತ 8 ಸೋಲಿನೊಂದಿಗೆ ಆರಂಭವಾದ ತಂಡದ ಪಯಣ ಗೆಲುವಿನೊಂದಿಗೆ ಅಂತ್ಯಗೊಂಡಿತು. ಈ ಗೆಲುವು ತಂಡಕ್ಕೆ ಟಾನಿಕ್ ಆಗಿ ಕಾರ್ಯನಿರ್ವಹಿಸಲಿದೆ. ಮುಂದಿನ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಬಹುಶಃ ಮುಂದಿನ ಋತುವಿನಲ್ಲಿ ಮುಂಬೈ ತಂಡವು ಈ ವಿಜಯದ ಪಾಯಿಂಟ್‌ನಿಂದ ಪ್ರಾರಂಭಿಸಬಹುದು. ಈ ವರ್ಷ ಐಪಿಎಲ್‌ (IPL)ನ ಅತ್ಯಂತ ಯಶಸ್ವಿ ತಂಡವು ತನ್ನ ಪ್ರಯಾಣದಲ್ಲಿ ಹೆಚ್ಚು ಸೋಲುಗಳನ್ನು ಅನುಭವಿಸಬೇಕಾಯಿತು. ಮುಂಬೈ ಇಂಡಿಯನ್ಸ್ ಈ ಋತುವಿನ ಆರಂಭದಲ್ಲಿ ಮಾಡಿದ ತಪ್ಪುಗಳನ್ನು ಸಮರ್ಥವಾಗಿ ನಿಭಾಯಿಸಿತು. ಆದರೆ ಅಷ್ಟರಲ್ಲಾಗಲೇ ಸಮಯ ಮೀರಿ ಹೋಗಿತ್ತು.

ಮುಂಬೈ ಇಂಡಿಯನ್ಸ್ ಐಪಿಎಲ್ 2022 ರ ಅಂಕ ಪಟ್ಟಿಯಲ್ಲಿ 10 ತಂಡಗಳಲ್ಲಿ ಕೊನೆಯ ಸ್ಥಾನದಲ್ಲಿದೆ. 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ಈ ತಂಡಕ್ಕೆ ಈ ಬಾರಿ 5 ಪಂದ್ಯಗಳನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಗ್ರೂಪ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಮಾತ್ರ ಗೆದ್ದ ತಂಡ, 10 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ ಅವರು ಕೇವಲ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದರು.

ಇದನ್ನೂ ಓದಿ:IPL 2022: ಕೊಹ್ಲಿ- ರೋಹಿತ್ ಕಳಪೆ ಫಾರ್ಮ್; ಚಿಂತಿಸುವ ಅಗತ್ಯವಿಲ್ಲ ಎಂದ ಸೌರವ್ ಗಂಗೂಲಿ

ಇದನ್ನೂ ಓದಿ
Image
Chennai Super Kings Report card: ಧೋನಿ ಎಡವಟ್ಟಿನಿಂದ ತಂಡ ಮುಗ್ಗರಿಸಿತಾ? ಇದು ಸಿಎಸ್​ಕೆ ತಂಡದ ಕಂಪ್ಲೀಟ್ ರಿಪೋರ್ಟ್
Image
IPL 2022: ಪ್ಲೇಆಫ್​ಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ RCB ಗೆ ಹೊಸ ಚಿಂತೆ ಶುರು..!
Image
IPL 2022: ಹೇಗಿರಲಿದೆ ಪ್ಲೇಆಫ್: ಇಲ್ಲಿ 2 ತಂಡಗಳಿಗೆ ಡಬಲ್ ಚಾನ್ಸ್​..!

ರೋಹಿತ್ ಆಗಲಿ ಕಿಶನ್ ಆಗಲಿ ಮಿಂಚಲಿಲ್ಲ ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ ಕಳಪೆ ಪ್ರದರ್ಶನ ತೋರಲು ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರೂ ರನ್‌ ಗಳಿಸಲು ವಿಫಲವಾಗಿರುವುದು ಇದಕ್ಕೆ ದೊಡ್ಡ ಕಾರಣ. ರೋಹಿತ್ ಶರ್ಮಾ ಅಥವಾ ಇಶಾನ್ ಕಿಶನ್ ಮುಂಬೈ ಪರ ಅಬ್ಬರಿಸಲಿಲ್ಲ. ನಾಯಕ ರೋಹಿತ್ ಶರ್ಮಾ 14 ಪಂದ್ಯಗಳಲ್ಲಿ ಕೇವಲ 268 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಬ್ಯಾಟಿಂಗ್ ಸರಾಸರಿಯು 20 ಕ್ಕಿಂತ ಕಡಿಮೆಯಿತ್ತು.

ರೋಹಿತ್ ಹೊರತಾಗಿ, ಇಶಾನ್ ಕಿಶನ್ ಕೂಡ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಇಬ್ಬರು ಲಯ ಕಂಡುಕೊಳ್ಳುವಷ್ಟರಲ್ಲಿ ಪ್ಲೇ ಆಫ್ ಬಾಗಿಲು ಮುಚ್ಚಿ ಹೋಗಿತ್ತು. ಇಶಾನ್ ಕಿಶನ್ 14 ಪಂದ್ಯಗಳಲ್ಲಿ 418 ರನ್ ಗಳಿಸಿದ್ದಾರೆ. ಆದರೆ ಅವರ ಸ್ಟ್ರೈಕ್ ರೇಟ್ 120.11 ಮಾತ್ರ.

ಟಿಮ್ ಡೇವಿಡ್ ತಂಡದಲ್ಲಿರಲಿಲ್ಲ ಇಬ್ಬರೂ ಓಪನರ್‌ಗಳು ಅಬ್ಬರಿಸಲಿಲ್ಲ. ಮೊದಲ ಕೇವಲ 2 ಪಂದ್ಯಗಳನ್ನು ಆಡಿದ ನಂತರ ಟಿಮ್ ಡೇವಿಡ್ ಅವರನ್ನು ಹೊರಹಾಕುವ ನಿರ್ಧಾರವನ್ನು ತಂಡದ ನಿರ್ವಹಣೆ ತೆಗೆದುಕೊಂಡಿತು. ಆದರೂ ತಂಡ ಸತತವಾಗಿ ಪಂದ್ಯವನ್ನು ಸೋಲುತ್ತಾ ಬಂತು. ತಮ್ಮ ತಪ್ಪಿನ ಅರಿವಾದಾಗ ಮುಂಬೈ ಮತ್ತೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಟಿಮ್ ಡೇವಿಡ್ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಅದ್ಭುತ ಗೆಲುವುಗಳನ್ನು ನೀಡಿದರು. ಆದರೆ ಶತಪ್ರಯತ್ನದ ನಡುವೆಯೂ ಮುಂಬೈ ಪ್ಲೇ ಆಫ್​ಗೇರಲಾಗಲಿಲ್ಲ.

ಉಳಿಸಿಕೊಂಡಿದ್ದ ಆಟಗಾರರು ವಿಫಲ IPL 2022 ಆರಂಭಕ್ಕೂ ಮುನ್ನ ಮುಂಬೈ ತಂಡ 4 ಆಟಗಾರರನ್ನು ಉಳಿಸಿಕೊಂಡಿತ್ತು. ಆದರೆ ಉಳಿಸಿಕೊಂಡವರಲ್ಲಿ ಯಾರೊಬ್ಬರು ನಿರೀಕ್ಷಿತ ಪ್ರದರ್ಶನ ನೀಡಲಾಗಲಿಲ್ಲ. ಅವರೆಲ್ಲರಲ್ಲೂ ರೋಹಿತ್ ಶರ್ಮಾ ಋತುವಿನ ಉದ್ದಕ್ಕೂ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಜಸ್ಪ್ರೀತ್ ಬುಮ್ರಾ ಋತುವಿನ ಮೊದಲಾರ್ಧದಲ್ಲಿ ದುಬಾರಿಯಾದರು. ಸೂರ್ಯ ಕುಮಾರ್ ಯಾದವ್ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಮತ್ತು, ಬ್ಯಾಟ್‌ನೊಂದಿಗೆ 11 ಪಂದ್ಯಗಳಲ್ಲಿ 144 ರನ್ ಗಳಿಸಿದ ಹೊರತಾಗಿ, ಕೀರನ್ ಪೊಲಾರ್ಡ್ ಬಾಲ್‌ನೊಂದಿಗೆ ಕೇವಲ 4 ವಿಕೆಟ್‌ಗಳನ್ನು ಗಳಿಸಲು ಸಾಧ್ಯವಾಯಿತು. ಹೀಗಾಗಿ ಅಗ್ರಮಾನ್ಯ ಆಟಗಾರರು ಕಳಪೆ ಪ್ರದರ್ಶಣ ನೀಡಿದರೆ ಏನಾಗುತ್ತದೋ ಮುಂಬೈ ತಂಡಕ್ಕೂ ಅದೇ ಆಯಿತು.

ಮುಂಬೈಗೆ ಸಿಕ್ಕ ಹೊಸ ಪ್ರತಿಭೆಗಳು ಮುಂಬೈ ಇಂಡಿಯನ್ಸ್ ಐಪಿಎಲ್ 2022 ರಲ್ಲಿ ತಮ್ಮ ಪ್ರಯಾಣದ ಕೊನೆಯಲ್ಲಿ ಡೇವಿಡ್ ಆಟಗಾರರನ್ನು ಆಯ್ಕೆ ಮಾಡಿತು. ಇದರಿಂದ ಅವರ ಸಾಮಥ್ರ್ಯ ಇಡೀ ತಂಡಗಳಿಗೆ ಕಾಣಿಸಿತು. ಡೇವಿಡ್​ ಮೂಲಕ ಮುಂಬೈ ಪೊಲಾರ್ಡ್‌ಗೆ ಬದಲಿ ಆಟಗಾರನನ್ನು ಕಂಡುಕೊಂಡಿದ್ದಾರೆ. ಈ ಸೀಸನ್​ನ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಸೀಸನ್​ಗೆ ಮುಂಬೈ ಹೇಗೆ ಕಾಲಿಡಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

Published On - 5:25 pm, Sun, 22 May 22