Chennai Super Kings Report card: ಧೋನಿ ಎಡವಟ್ಟಿನಿಂದ ತಂಡ ಮುಗ್ಗರಿಸಿತಾ? ಇದು ಸಿಎಸ್​ಕೆ ತಂಡದ ಕಂಪ್ಲೀಟ್ ರಿಪೋರ್ಟ್

Chennai Super Kings Report card: ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದಿದೆ. ಅಂದರೆ ಚೆನ್ನೈ ಒಟ್ಟು 10 ಸೋಲುಗಳನ್ನು ಎದುರಿಸಬೇಕಾಯಿತು. ಟೂರ್ನಿಯಲ್ಲಿ ತಂಡ 9ನೇ ಸ್ಥಾನ ಗಳಿಸಿತು.

Chennai Super Kings Report card: ಧೋನಿ ಎಡವಟ್ಟಿನಿಂದ ತಂಡ ಮುಗ್ಗರಿಸಿತಾ? ಇದು ಸಿಎಸ್​ಕೆ ತಂಡದ ಕಂಪ್ಲೀಟ್ ರಿಪೋರ್ಟ್
ಧೋನಿ
Follow us
TV9 Web
| Updated By: ಪೃಥ್ವಿಶಂಕರ

Updated on:May 22, 2022 | 4:38 PM

ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ತಂಡ. ಜೊತೆಗೆ ಹಾಲಿ ಚಾಂಪಿಯನ್ ಕೂಡ. ತಂಡದಲ್ಲಿ ಧೋನಿ (Dhoni)ಯಂತಹ ಸ್ಟಾರ್ ಆಟಗಾರರ ದಂಡೆ ತುಂಬಿದೆ. ಆದರೆ ಐಪಿಎಲ್ 2022 ರಲ್ಲಿ, ಚೆನ್ನೈ ಪ್ಲೇ ಆಫ್​ಗೆ ಎಂಟ್ರಿಕೊಡುವುದಿರಲಿ, ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಿಂದ ಮೇಲಕ್ಕೇರಲಾಗಲಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ 2022 ಪ್ರಾರಂಭವಾದಾಗ, ಚೆನ್ನೈ ಸೂಪರ್ ಕಿಂಗ್ಸ್‌ನ ಸ್ಥಿತಿ ಹೀಗಿರುತ್ತದೆ ಎಂದು ಬಹುಶಃ ಯಾರೂ ಭಾವಿಸಿರಲಿಲ್ಲ. ಬ್ಯಾಟಿಂಗ್, ಬೌಲಿಂಗ್ ಹೊರತಾಗಿ, ತಂಡವು ಎಲ್ಲಾ ವಿಭಾಗದಲ್ಲಿ ವಿಫಲವಾಗಿದೆ ಎಂದು ಸಾಬೀತಾಯಿತು. ಧೋನಿ ಇರುವ ತಂಡದಲ್ಲಿ ಸ್ಟ್ರಾಟೆಜಿಕ್ ಮಿಸ್ಟೇಕ್ ಕಂಡು ಬಂದರೆ ಅಚ್ಚರಿಯಾಗುವುದು ಖಂಡಿತ. ಋತುವಿನ ಆರಂಭಕ್ಕೂ ಮುಂಚೆಯೇ, ಚೆನ್ನೈ ಸೂಪರ್ ಕಿಂಗ್ಸ್ ಅಂತಹ ತಪ್ಪುಗಳನ್ನು ಮಾಡಿದೆ, ಇದು ಪಂದ್ಯಾವಳಿಯಲ್ಲಿ ಅದರ ವೈಫಲ್ಯಕ್ಕೆ ಸ್ಕ್ರಿಪ್ಟ್ ಬರೆದಿದೆ.

ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಗೆದ್ದಿದೆ. ಅಂದರೆ ಚೆನ್ನೈ ಒಟ್ಟು 10 ಸೋಲುಗಳನ್ನು ಎದುರಿಸಬೇಕಾಯಿತು. ಟೂರ್ನಿಯಲ್ಲಿ ತಂಡ 9ನೇ ಸ್ಥಾನ ಗಳಿಸಿತು. ತಂಡ ಇದು 2ನೇ ಬಾರಿಗೆ ಪ್ಲೇಆಫ್‌ಗೆ ಪ್ರವೇಶಿಸುವಲ್ಲಿ ವಿಫಲವಾಯಿತು. ಹೀಗಾಗಿ ಸೀಸನ್ ಉದ್ದಕ್ಕೂ ಚೆನ್ನೈ ಯಾವ ತಪ್ಪುಗಳನ್ನು ಮಾಡಿದೆ? ಅವರ ಆಟಗಾರರ ಪ್ರದರ್ಶನ ಹೇಗಿತ್ತು? ಎಂಬುದರ ಬಗ್ಗೆ ಇಲ್ಲಿದೆ ವಿವರ.

ಇದನ್ನೂ ಓದಿ: IPL 2022: ಐಪಿಎಲ್​ನಿಂದ ರಹಾನೆ ಔಟ್! ಟೀಂ ಇಂಡಿಯಾದಲ್ಲೂ ಇಲ್ಲ ಸ್ಥಾನ; ಅಪಾಯದಲ್ಲಿ ಅಜಿಂಕ್ಯ ವೃತ್ತಿಜೀವನ

ಇದನ್ನೂ ಓದಿ
Image
IPL 2022: ಪ್ಲೇಆಫ್​ಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ RCB ಗೆ ಹೊಸ ಚಿಂತೆ ಶುರು..!
Image
IPL 2022: ಹೇಗಿರಲಿದೆ ಪ್ಲೇಆಫ್: ಇಲ್ಲಿ 2 ತಂಡಗಳಿಗೆ ಡಬಲ್ ಚಾನ್ಸ್​..!

ವ್ಯೂಹಾತ್ಮಕ ರಂಗದಲ್ಲಿ ಚೆನ್ನೈ ವಿಫಲ ಐಪಿಎಲ್ 2022 ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಡಿದ ತಪ್ಪುಗಳು ವಿಭಿನ್ನವಾಗಿವೆ. ಇದಕ್ಕೆ ಉದಾಹರಣೆ ಎಂಬಂತೆ ಪಂದ್ಯಾವಳಿಯ ಮೊದಲು, ರವೀಂದ್ರ ಜಡೇಜಾ ಅವರನ್ನು ನಾಯಕರನ್ನಾಗಿ ಮಾಡಿದ್ದಾಗಿತ್ತು. ನಾಯಕತ್ವದ ಅನುಭವವೇ ಇಲ್ಲದ ಆಟಗಾರ ಏಕಾಏಕಿ ನಾಯಕನಾಗಿ ನೇಮಕಗೊಂಡರು. ಈ ನಿರ್ಧಾರಕ್ಕೆ ಧೋನಿ ಕೂಡ ಒಪ್ಪಿಗೆ ನೀಡಿದ್ದರಲ್ಲಿ ಯಾವುದೇ ಅನುಮಾನವಿಲ್ಲ. ನಾಯಕನಾದ ಕೂಡಲೇ ಜಡೇಜಾ ಒತ್ತಡದಲ್ಲಿ ಸಿಲುಕಿಕೊಂಡರು. ಅವರ ಆಟದ ಮೇಲೆ ಪರಿಣಾಮ ಬೀರಿತು, ಜೊತೆಗೆ ತಂಡವು ಮೊದಲ ನಾಲ್ಕು ಪಂದ್ಯಗಳಲ್ಲಿ ಸೋತಿತು. ಕೆಟ್ಟ ಆರಂಭದ ನಂತರ, ತಂಡವು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಬ್ಯಾಟಿಂಗ್ ಕೂಡ ವಿಫಲ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ, ಚೆನ್ನೈ ಸೂಪರ್ ಕಿಂಗ್ಸ್‌ನ ಒಬ್ಬನೇ ಒಬ್ಬ ಬ್ಯಾಟ್ಸ್‌ಮನ್ ಕೂಡ 400 ರನ್‌ಗಳ ಗಡಿಯನ್ನು ದಾಟಲಿಲ್ಲ. ಇದು ಅವರ ಬ್ಯಾಟ್ಸ್‌ಮನ್‌ಗಳು ಎಷ್ಟು ಕಳಪೆ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಕಳೆದ ಋತುವಿನ ಆರೆಂಜ್ ಕ್ಯಾಪ್ ವಿಜೇತ ರಿತುರಾಜ್ ಗಾಯಕ್ವಾಡ್ 26.28 ರ ಸರಾಸರಿಯಲ್ಲಿ 368 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ರಾಯುಡು 274, ಮೊಯಿನ್ ಅಲಿ 244 ರನ್ ಗಳಿಸಿದರು. ಶಿವಂ ದುಬೆ 289 ರನ್ ಗಳಿಸಿದರು. ಧೋನಿ 232 ರನ್ ಗಳಿಸಿದರು. ಕಾನ್ವೆ ಮಾತ್ರ ಕೊಂಚ ಪ್ರತಿರೋಧ ತೋರಿ 42 ರ ಸರಾಸರಿಯಲ್ಲಿ 252 ರನ್ ಗಳಿಸುವಲ್ಲಿ ಯಶಸ್ವಿಯಾದರು.

ಯುವ ಬೌಲಿಂಗ್‌ನ ಲಾಭ ಪಡೆದ ಎದುರಾಳಿಗಳು ಐಪಿಎಲ್ 2022 ರ ಮುಂಚೆಯೇ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಅತ್ಯಂತ ದುಬಾರಿ ಆಟಗಾರ ದೀಪಕ್ ಚಹಾರ್ ಅವರನ್ನು ಗಾಯದ ಕಾರಣದಿಂದಾಗಿ ಕಳೆದುಕೊಳ್ಳಬೇಕಾಯಿತು. ಆಡಮ್ ಮಿಲ್ನೆ ಕೂಡ ಗಾಯದ ಕಾರಣದಿಂದಾಗಿ ಕೇವಲ ಒಂದು ಪಂದ್ಯವನ್ನು ಆಡಲಷ್ಟೇ ಶಕ್ತರಾದರು. ಇದು ಸಿಎಸ್‌ಕೆಗೆ ಬಾರೀ ಹೊಡೆತ ನೀಡಿತು. ಮುಖೇಶ್ ಚೌಧರಿ, ಸಿಮರ್‌ಜಿತ್ ಸಿಂಗ್ ಅವರಂತಹ ಯುವ ವೇಗದ ಬೌಲರ್‌ಗಳೊಂದಿಗೆ ತಂಡ ಬಂದಿತ್ತು. ಮುಖೇಶ್ ಚೌಧರಿ 16 ವಿಕೆಟ್ ಪಡೆದರು ಆದರೆ ಅವರ ಎಕಾನಮಿ ದರ ಪ್ರತಿ ಓವರ್‌ಗೆ 9.31 ರನ್ ಆಗಿತ್ತು. ಬ್ರಾವೋ ಕೂಡ 16 ವಿಕೆಟ್ ಪಡೆದರು. ಮಹಿಷ್ ತೀಕ್ಷಣ 9 ಪಂದ್ಯಗಳಲ್ಲಿ 12 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಉಳಿಸಿಕೊಂಡ ಆಟಗಾರರು ನಿರಾಸೆ ಮೂಡಿಸಿದರು ಚೆನ್ನೈ ಸೂಪರ್ ಕಿಂಗ್ಸ್ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಂಡ ಆಟಗಾರರು ಈ ಋತುವಿನಲ್ಲಿ ವಿಫಲರಾಗಿದ್ದಾರೆ. ಜಡೇಜಾ ಅವರು 10 ಪಂದ್ಯಗಳಲ್ಲಿ 5 ವಿಕೆಟ್‌ಗಳನ್ನು ಪಡೆದು, ಕೇವಲ 19.33 ಸರಾಸರಿಯಲ್ಲಿ ತಮ್ಮ ಬ್ಯಾಟ್‌ನಿಂದ 116 ರನ್ ಗಳಿಸಿದರು. ಗಾಯಕ್ವಾಡ್ ವಿಫಲರಾದರು, ಮೊಯೀನ್ ಅಲಿ ವಿಫಲರಾದರು. ಆದರೆ ಧೋನಿ ಗೇಮ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.

ಈ ಸೀಸನ್​ನಲ್ಲಿ ಚೆನ್ನೈ ಪಡೆದುಕೊಂಡಿದ್ದೇನು? ಡೆವೊನ್ ಕಾನ್ವೆಯಂತಹ ಶ್ರೇಷ್ಠ ಓಪನರ್ ಸಿಕ್ಕಿರುವುದು ಚೆನ್ನೈ ಸೂಪರ್ ಕಿಂಗ್ಸ್‌ಗೆ ಒಳ್ಳೆಯ ಸಂಗತಿ. ಜೊತೆಗೆ ತೀಕ್ಷಣ ಅವರಂತಹ ಸ್ಪಿನ್ನರ್ ಸಿಕ್ಕಿದ್ದಾರೆ. ಡೆತ್ ಮತ್ತು ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಅವರಿಗಿದೆ. ಜೂನಿಯರ್ ಮಾಲಿಂಗ ಪತಿರಾನ ಕೂಡ ಎರಡು ಪಂದ್ಯಗಳಲ್ಲಿ ತಮ್ಮ ಕೌಶಲ್ಯವನ್ನು ತೋರಿಸಿದ್ದಾರೆ, ಇದನ್ನು ಧೋನಿ ಕೂಡ ಒಪ್ಪಿಕೊಂಡಿದ್ದಾರೆ. ಮುಂದಿನ ಸೀಸನ್‌ನಲ್ಲಿ ಈ ತಂಡ ಯಾವ ಮನಸ್ಥಿತಿ ಮತ್ತು ತಂಡದೊಂದಿಗೆ ಬರುತ್ತದೆ ಎಂಬುದು ಕಾದು ನೋಡಬೇಕಾಗಿದೆ.

Published On - 4:38 pm, Sun, 22 May 22