- Kannada News Photo gallery Cricket photos Ajinkya rahane ruled out of ipl 2022 england tour due to hamstring injury
IPL 2022: ಐಪಿಎಲ್ನಿಂದ ರಹಾನೆ ಔಟ್! ಟೀಂ ಇಂಡಿಯಾದಲ್ಲೂ ಇಲ್ಲ ಸ್ಥಾನ; ಅಪಾಯದಲ್ಲಿ ಅಜಿಂಕ್ಯ ವೃತ್ತಿಜೀವನ
IPL 2022: ಇತ್ತೀಚಿನ ವರದಿಗಳ ಪ್ರಕಾರ, ಅಜಿಂಕ್ಯ ರಹಾನೆ ಅವರ ಗಾಯವು ಗಂಭೀರವಾಗಿದ್ದು, ಅವರು ಜೂನ್-ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವುದಿಲ್ಲ. ಅಜಿಂಕ್ಯ ರಹಾನೆ ಈಗಾಗಲೇ ಟೆಸ್ಟ್ ತಂಡದಿಂದ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.
Updated on:May 16, 2022 | 5:42 PM

ಅಜಿಂಕ್ಯ ರಹಾನೆ ಅವರ ಬ್ಯಾಟ್ ದೀರ್ಘಕಾಲದಿಂದ ಮೌನವಾಗಿದೆ. ರಹಾನೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗಲಿಲ್ಲ, ಇಂಗ್ಲೆಂಡ್ ಅಥವಾ ಐಪಿಎಲ್‌ನಲ್ಲಿ ಅವರ ಬ್ಯಾಟ್ ಮಾತನಾಡಲಿಲ್ಲ. ಅಜಿಂಕ್ಯ ರಹಾನೆ ಈಗ ಗಾಯದಿಂದ ಬಳಲುತ್ತಿದ್ದು ಈ ಕಾರಣದಿಂದಾಗಿ ಅವರು ಪ್ರಸಕ್ತ ಐಪಿಎಲ್ ಋತುವಿನಿಂದಲೂ ಹೊರಗುಳಿದಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಅಜಿಂಕ್ಯ ರಹಾನೆ ಅವರ ಗಾಯವು ಗಂಭೀರವಾಗಿದ್ದು, ಅವರು ಜೂನ್-ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವುದಿಲ್ಲ. ಅಜಿಂಕ್ಯ ರಹಾನೆ ಈಗಾಗಲೇ ಟೆಸ್ಟ್ ತಂಡದಿಂದ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರ ಬದಲಿಗೆ ಹನುಮ ವಿಹಾರಿ ಮತ್ತು ಶ್ರೇಯಸ್ ಅಯ್ಯರ್ ಸ್ಥಾನ ಪಡೆಇದಿದ್ದು, ಅವರು ಗಾಯದ ನಂತರ ಮರಳುವುದು ಹೆಚ್ಚು ಕಷ್ಟಕರವಾಗಿದೆ.

ಕೋಲ್ಕತ್ತಾ ನೈಟ್ ರೈಡರ್ಸ್‌ನ ಬಯೋ ಬಬಲ್‌ನಿಂದ ಅಜಿಂಕ್ಯ ರಹಾನೆ ಹೊರಬರಲಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ಫೀಲ್ಡಿಂಗ್ ಮಾಡುವಾಗಲೂ ಅವರು ಕಾಣಿಸಲಿಲ್ಲ. ವರದಿಗಳ ಪ್ರಕಾರ, ರಹಾನೆ ಅವರನ್ನು ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಕಳುಹಿಸಲಾಗುವುದು, ಅಲ್ಲಿ ಅವರು 4 ವಾರಗಳ ಕಾಲ ಇರಲಿದ್ದಾರೆ.

ಈ ಋತುವಿನಲ್ಲಿ ರಹಾನೆಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ 1 ಕೋಟಿ ಮೂಲ ಬೆಲೆಗೆ ಖರೀದಿಸಿದೆ. 7 ಪಂದ್ಯಗಳಲ್ಲಿ, ರಹಾನೆಗೆ ಅವಕಾಶ ಸಿಕ್ಕಿತು ಆದರೆ ಅವರು ಕೇವಲ 19 ರ ಸರಾಸರಿಯಲ್ಲಿ 133 ರನ್ ಗಳಿಸಿದರು.

ಅಜಿಂಕ್ಯ ರಹಾನೆ ಜತೆಗೆ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಚೇತೇಶ್ವರ ಪೂಜಾರ ಇಂಗ್ಲೆಂಡ್ ವಿರುದ್ಧದ ಉಳಿದ ಒಂದು ಟೆಸ್ಟ್ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಪೂಜಾರ ಪ್ರಸ್ತುತ ಸಸೆಕ್ಸ್‌ಗಾಗಿ ಕೌಂಟಿ ಕ್ರಿಕೆಟ್‌ನಲ್ಲಿ ಎರಡು ದ್ವಿಶತಕಗಳನ್ನು ಗಳಿಸಿದ್ದಾರೆ.
Published On - 5:41 pm, Mon, 16 May 22




