- Kannada News Photo gallery Cricket photos IPL 2022: RCB 'Hall of fame', Chris Gayle and AB de Villiers become first players to receive the honor
IPL 2022: ಎಬಿಡಿ, ಕ್ರಿಸ್ ಗೇಲ್ಗೆ RCB ಯ ಹಾಲ್ ಆಫ್ ಫೇಮ್ ಗೌರವ
RCB 'Hall of fame': ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳ್ಳಲು ಕೆಲವು ಷರತ್ತುಗಳಿವೆ. ಇದರಲ್ಲಿ ಆಟಗಾರ ಕನಿಷ್ಠ 3 ವರ್ಷಗಳ ಕಾಲ RCB ಪರ ಆಡಿರಬೇಕು. ಪ್ರಸ್ತುತ, ಅವರು ಐಪಿಎಲ್‌ನ ಭಾಗವಾಗಿರಬಾರದು.
Updated on:May 17, 2022 | 2:57 PM

RCB ತಂಡದ ದಂತಕಥೆಗಳಾದ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್ಗೆ ವಿಶೇಷ ಗೌರವ ನೀಡಲು ಆರ್‌ಸಿಬಿ ಫ್ರಾಂಚೈಸಿ ಮುಂದಾಗಿದೆ. ಆರ್‌ಸಿಬಿ ತಂಡವು ಇದೇ ಮೊದಲ ಬಾರಿಗೆ ಹಾಲ್ ಫೇಮ್ ಪ್ರಶಸ್ತಿಯನ್ನು ಪರಿಚಯಿಸಿದ್ದು, ಈ ಗೌರವಕ್ಕೆ ಎಬಿಡಿ ಹಾಗೂ ಕ್ರಿಸ್ ಗೇಲ್ ಭಾಜನರಾಗಿದ್ದಾರೆ. ಅದರಂತೆ ಮುಂದಿನ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರನ್ನು ಈ ಪ್ರಶಸ್ತಿ ಮೂಲಕ ಗೌರವಿಸಲಾಗುತ್ತದೆ.

ಈ ಬಗ್ಗೆ ಆರ್‌ಸಿಬಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ತಂಡದೊಂದಿಗೆ ಮಾತನಾಡಿದ್ದರು. ಅಲ್ಲದೆ ಈ ಇಬ್ಬರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ವಿರಾಟ್ ಕೊಹ್ಲಿ ಕೂಡ ಸ್ಟಾರ್ ಕ್ರಿಕೆಟಿಗರ ಜೊತೆಗಿನ ಒಡನಾಟವನ್ನು ಸ್ಮರಿಸಿದರು.

ಎಬಿಡಿ ಹಾಲ್ ಆಫ್ ಫೇಮ್‌ಗೆ ಆಯ್ಕೆಯಾಗಿರುವ ಬಗ್ಗೆ ಬರೆದುಕೊಂಡಿರುವ ಆರ್‌ಸಿಬಿ, 'ತಮ್ಮ ಪ್ರತಿಭೆ, ಆಟದ ತಿಳುವಳಿಕೆ ಮತ್ತು ಉತ್ತಮ ಸ್ವಭಾವದಿಂದ ಆರ್‌ಸಿಬಿ ಮತ್ತು ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನು ಸಮಾನವಾಗಿ ಸ್ಪರ್ಶಿಸಿದ ವಿಶೇಷ ಆಟಗಾರ. ಎಬಿ ಡಿವಿಲಿಯರ್ಸ್ ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾದ ಮೊದಲ ಆಟಗಾರ ಎಂದು ತಿಳಿಸಿದೆ.

'ಪವರ್ ಹಿಟ್ಟಿಂಗ್, ಮನರಂಜನೆಯ ಪ್ರತೀಕ ಮತ್ತು ಅತ್ಯುತ್ತಮ T20 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ RCB ಹಾಲ್ ಆಫ್ ಫೇಮ್‌ಗೆ ಸಹ ಸೇರ್ಪಡೆಯಾದ ಮತ್ತೋರ್ವ ಆಟಗಾರ ಎಂದು ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ.

ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳ್ಳಲು ಕೆಲವು ಷರತ್ತುಗಳಿವೆ. ಇದರಲ್ಲಿ ಆಟಗಾರ ಕನಿಷ್ಠ 3 ವರ್ಷಗಳ ಕಾಲ RCB ಪರ ಆಡಿರಬೇಕು. ಪ್ರಸ್ತುತ, ಅವರು ಐಪಿಎಲ್‌ನ ಭಾಗವಾಗಿರಬಾರದು. ಮೈದಾನದಲ್ಲಿ ಮತ್ತು ಹೊರಗೆ RCB ಮೇಲೆ ಗಮನಾರ್ಹ ಪರಿಣಾಮ ಬೀರಬೇಕು. ಇಂತಹ ಸರ್ವ ಶ್ರೇಷ್ಠ ಆಟಗಾರರಿಗೆ ಮಾತ್ರ ಆರ್‌ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡಲಿದೆ.

ಎಬಿ ಡಿವಿಲಿಯರ್ಸ್ ಆರ್‌ಸಿಬಿ ಪರ 11 ವರ್ಷಗಳ ಕಾಲ ಆಡಿದ್ದರು. ಈ ವೇಳೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ತಂಡದ ತಂಡದ ಪ್ರಮುಖ ಭಾಗವಾಗಿದ್ದರು. ಎಬಿಡಿ-ಕೊಹ್ಲಿ ಜೋಡಿ ತಮ್ಮ ಉತ್ತಮ ಜೊತೆಯಾಟದ ಮೂಲಕ ಹಲವು ಬಾರಿ ಗೆಲುವು ತಂದುಕೊಟ್ಟಿದ್ದಾರೆ. ಎಬಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 184 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 3 ಶತಕಗಳು, 40 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಒಟ್ಟು 5162 ರನ್ ಕಲೆಹಾಕಿದ್ದಾರೆ.

ಕ್ರಿಸ್ ಗೇಲ್ ಆರ್‌ಸಿಬಿ ಪರ 7 ವರ್ಷಗಳ ಕಾಲ ಆಡಿದ್ದರು. 2011 ರಿಂದ 2017ರವರೆಗೆ ಈ ತಂಡದಲ್ಲಿದ್ದರು. ಗೇಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 142 ಪಂದ್ಯಗಳಲ್ಲಿ 6 ಶತಕ ಮತ್ತು 31 ಅರ್ಧಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಒಟ್ಟು 4965 ರನ್ ಗಳಿಸಿ ಮಿಂಚಿದ್ದರು. ಅದರಲ್ಲೂ ಈ ಇಬ್ಬರು ಆಟಗಾರರು ಐಪಿಎಲ್‌ನ ಬಹುಭಾಗವನ್ನು ಆರ್‌ಸಿಬಿ ಪರ ಆಡಿದ್ದರು ಎಂಬುದು ವಿಶೇಷ. ಇದೇ ಕಾರಣದಿಂದಾಗಿ ಇದೀಗ ಆರ್‌ಸಿಬಿ ತಂಡದ ಹಾಲ್ ಆಫ್ ಫೇಮ್ ಗೌರವ ಇಬ್ಬರು ದಿಗ್ಗಜರಿಗೆ ಒಲಿದಿದೆ.
Published On - 2:57 pm, Tue, 17 May 22
