- Kannada News Photo gallery Cricket photos Pakistan all-rounder Kainat Imtiaz's cricket-themed wedding photoshoot goes viral
Kainat Imtiaz: ಮದುವೆ ಡ್ರೆಸ್ನಲ್ಲಿ ಮಿಂಚಿದ ಕೊಹ್ಲಿಯ ಪಾಕ್ ಅಭಿಮಾನಿ
Kainat Imtiaz photoshoot: 29 ವರ್ಷದ ಕೈನಾತ್ ಇಮ್ತಿಯಾಜ್ 2010 ರಲ್ಲಿ ಪಾಕಿಸ್ತಾನ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ಪಾಕ್ ಪರ 15 ಏಕದಿನ ಹಾಗೂ 15 ಟಿ20 ಪಂದ್ಯಗಳನ್ನಾಡಿದ್ದಾರೆ.
Updated on:May 17, 2022 | 6:30 PM

ಮದುವೆಗೂ ಮುಂಚೆ ಫೋಟೋಶೂಟ್ ಮಾಡಿಸಿಕೊಳ್ಳುವುದು ಹೊಸ ಟ್ರೆಂಡ್. ನೀವು ಕೂಡ ನಾನಾ ರೀತಿಯ ಪ್ರೀ ವೆಡ್ಡಿಂಗ್ ಫೋಟೋಗಳನ್ನು ನೋಡಿರುತ್ತೀರಿ. ಆದರೆ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಆಟಗಾರ್ತಿ ಕೈನಾತ್ ಇಮ್ತಿಯಾಜ್ ಮಾತ್ರ ತನ್ನ ವೃತ್ತಿಜೀವನವನ್ನು ಪ್ರತಿಬಿಂಬಿಸುವ ಲುಕ್ನಲ್ಲೇ ಪ್ರೀ ವೆಡ್ಡಿಂಗ್ ಫೋಟೋ ಶೂಟ್ನಲ್ಲಿ ಕಾಣಿಸಿಕೊಂಡು ಇದೀಗ ವೈರಲ್ ಆಗಿದ್ದಾರೆ.

ಪಾಕ್ ಆಟಗಾರ್ತಿ ಕೈನಾತ್ ಇಮ್ತಿಯಾಜ್ 2020 ರಲ್ಲಿ ತನ್ನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಮದುವೆಯು 2 ವರ್ಷಗಳ ನಂತರ ನಡೆಯಿತು. ಮಾರ್ಚ್ 30 ರಂದು ಕೈನಾತ್ ವಕಾರ್ ಉದ್ದೀನ್ ಎಂಬವರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಕ್ಕೂ ಮುನ್ನ ತೆಗೆದ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಫೋಟೋಶೂಟ್ನಲ್ಲಿ ಕೈನಾತ್ ಇಮ್ತಿಯಾಜ್ ಮದುವೆ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬ್ಯಾಟ್ ಹಾಗೂ ಬಾಲ್ಗಳೊಂದಿಗೆ ಪೋಸ್ ನೀಡಿರುವುದು ವಿಶೇಷ. ಇದೇ ಕಾರಣದಿಂದ ಇದೀಗ ಕೈನಾತ್ ಅವರ ಕ್ರಿಕೆಟ್ ಸ್ಟೈಲ್ ಫೋಟೋಶೂಟ್ ವೈರಲ್ ಆಗಿದೆ.

ಅಂದಹಾಗೆ ಕೈನಾತ್ ಇಮ್ತಿಯಾಜ್ ವಿರಾಟ್ ಕೊಹ್ಲಿಯ ಅಪ್ಪಟ ಅಭಿಮಾನಿ. ಕೊಹ್ಲಿ ಟೀಮ್ ಇಂಡಿಯಾ ನಾಯಕತ್ವವನ್ನು ತೊರೆದಾಗ ಪಾಕ್ ಆಟಗಾರ್ತಿ ಕೂಡ ಖೇದ ವ್ಯಕ್ತಪಡಿಸಿದ್ದರು. “7 ವರ್ಷಗಳ ನಿರ್ಭೀತ ಕ್ರಿಕೆಟ್. ನಾವು ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು. ಹ್ಯಾಟ್ಸ್ ಆಫ್ ವಿರಾಟ್ ಕೊಹ್ಲಿ. ರಿಯಲ್ ಗೋಟ್, ನೀವೇ ನಿಜವಾದ ಸ್ಫೂರ್ತಿ. ” ಎಂದು ಬರೆದುಕೊಂಡು ಅಭಿಮಾನ ಮೆರೆದಿದ್ದರು.

29 ವರ್ಷದ ಕೈನಾತ್ ಇಮ್ತಿಯಾಜ್ 2010 ರಲ್ಲಿ ಪಾಕಿಸ್ತಾನ್ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ಪಾಕ್ ಪರ 15 ಏಕದಿನ ಹಾಗೂ 15 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 18 ವಿಕೆಟ್ಗಳನ್ನು ಕಬಳಿಸಿದ್ದರು.

ಕೈನಾತ್ ಇಮ್ತಿಯಾಜ್

ಕೈನಾತ್ ಇಮ್ತಿಯಾಜ್

ಕೈನಾತ್ ಇಮ್ತಿಯಾಜ್
Published On - 6:29 pm, Tue, 17 May 22




