ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಪಿಎಲ್ 2022 ರ ಕೊನೆಯ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಬುಮ್ರಾ ಈ ಋತುವಿನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಇಡೀ ಮುಂಬೈ ಇಂಡಿಯನ್ಸ್ ತಂಡದಂತೆ, ಅವರು ಕೂಡ ಕಷ್ಟಪಡುತ್ತಿರುವುದು ಕಂಡುಬಂದಿತ್ತು. ಆದಾಗ್ಯೂ, ಈಗ ಅವರು ತಮ್ಮ ಹಳೆಯ ಫಾರ್ಮ್ ತೋರಿಸಲು ಪ್ರಾರಂಭಿಸಿದ್ದಾರೆ. ಅವರ ಈ ಪ್ರದರ್ಶನದ ಫಲಿತಾಂಶವೆಂದರೆ ಅವರು T20 ಸ್ವರೂಪದಲ್ಲಿ ಭಾರತದ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಿದ್ದಾರೆ.
1 / 5
ಮೇ 17, ಮಂಗಳವಾರ ವಾಂಖೆಡೆ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ವಿಶೇಷ ಸಾಧನೆ ಮಾಡಿದರು. ಬುಮ್ರಾ ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಭಾರತದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2 / 5
ಇನಿಂಗ್ಸ್ ನ 20ನೇ ಓವರ್ನ ಕೊನೆಯ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಬೌಲ್ಡ್ ಮಾಡುವ ಮೂಲಕ ಬುಮ್ರಾ 250 ವಿಕೆಟ್ ಪೂರೈಸಿದರು. ಅವರು 205 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಅವರ ನಂತರದ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ 223 ವಿಕೆಟ್ ಪಡೆದಿದ್ದಾರೆ.
3 / 5
ಅಂದಹಾಗೆ, ಈ ಮಾದರಿಯಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎಂದರೆ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಅಶ್ವಿನ್ 275 ಇನ್ನಿಂಗ್ಸ್‌ಗಳಲ್ಲಿ 274 ವಿಕೆಟ್ ಪಡೆದಿದ್ದಾರೆ. 271 ವಿಕೆಟ್‌ಗಳನ್ನು ಹೊಂದಿರುವ ಯುಜ್ವೇಂದ್ರ ಚಹಾಲ್ ಅವರಿಗೆ ಹತ್ತಿರವಾಗಿದ್ದಾರೆ.
4 / 5
ಈ ಋತುವಿಗೆ ಸಂಬಂಧಿಸಿದಂತೆ, ಬುಮ್ರಾ ಅವರ ತಂಡದ ಅತ್ಯಂತ ಯಶಸ್ವಿ ಬೌಲರ್ ಕೂಡ ಆಗಿದ್ದಾರೆ. ಬುಮ್ರಾ 13 ಪಂದ್ಯಗಳಲ್ಲಿ 29 ಸರಾಸರಿಯೊಂದಿಗೆ 12 ವಿಕೆಟ್ ಪಡೆದಿದ್ದಾರೆ. ಅವರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 10 ರನ್‌ಗಳಿಗೆ 5 ವಿಕೆಟ್ ಪಡೆದರು.