ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಐಪಿಎಲ್ 2022 ರ ಕೊನೆಯ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಬುಮ್ರಾ ಈ ಋತುವಿನಲ್ಲಿ ಉತ್ತಮ ಆರಂಭ ಪಡೆಯಲಿಲ್ಲ. ಇಡೀ ಮುಂಬೈ ಇಂಡಿಯನ್ಸ್ ತಂಡದಂತೆ, ಅವರು ಕೂಡ ಕಷ್ಟಪಡುತ್ತಿರುವುದು ಕಂಡುಬಂದಿತ್ತು. ಆದಾಗ್ಯೂ, ಈಗ ಅವರು ತಮ್ಮ ಹಳೆಯ ಫಾರ್ಮ್ ತೋರಿಸಲು ಪ್ರಾರಂಭಿಸಿದ್ದಾರೆ. ಅವರ ಈ ಪ್ರದರ್ಶನದ ಫಲಿತಾಂಶವೆಂದರೆ ಅವರು T20 ಸ್ವರೂಪದಲ್ಲಿ ಭಾರತದ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಿದ್ದಾರೆ.
1 / 5
ಇಡೀ ವಿಶ್ವವೇ ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಸೆಲ್ಯೂಟ್ ಮಾಡುತ್ತಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿದ ರೀತಿಯ ನಂತರ, ಈಗ ಐಸಿಸಿ ಕೂಡ ಬುಮ್ರಾಗೆ ದೊಡ್ಡ ಬಹುಮಾನವನ್ನು ನೀಡಿದೆ. ವಾಸ್ತವವಾಗಿ ಜಸ್ಪ್ರೀತ್ ಬುಮ್ರಾ ICC ODI ಶ್ರೇಯಾಂಕದಲ್ಲಿ ನಂಬರ್ 1 ಬೌಲರ್ ಆಗಿದ್ದಾರೆ.
2 / 5
ಇನಿಂಗ್ಸ್ ನ 20ನೇ ಓವರ್ನ ಕೊನೆಯ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಬೌಲ್ಡ್ ಮಾಡುವ ಮೂಲಕ ಬುಮ್ರಾ 250 ವಿಕೆಟ್ ಪೂರೈಸಿದರು. ಅವರು 205 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಅವರ ನಂತರದ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ 223 ವಿಕೆಟ್ ಪಡೆದಿದ್ದಾರೆ.
3 / 5
ಅಂದಹಾಗೆ, ಈ ಮಾದರಿಯಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್ ಎಂದರೆ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಅಶ್ವಿನ್ 275 ಇನ್ನಿಂಗ್ಸ್‌ಗಳಲ್ಲಿ 274 ವಿಕೆಟ್ ಪಡೆದಿದ್ದಾರೆ. 271 ವಿಕೆಟ್‌ಗಳನ್ನು ಹೊಂದಿರುವ ಯುಜ್ವೇಂದ್ರ ಚಹಾಲ್ ಅವರಿಗೆ ಹತ್ತಿರವಾಗಿದ್ದಾರೆ.
4 / 5
ಈ ಋತುವಿಗೆ ಸಂಬಂಧಿಸಿದಂತೆ, ಬುಮ್ರಾ ಅವರ ತಂಡದ ಅತ್ಯಂತ ಯಶಸ್ವಿ ಬೌಲರ್ ಕೂಡ ಆಗಿದ್ದಾರೆ. ಬುಮ್ರಾ 13 ಪಂದ್ಯಗಳಲ್ಲಿ 29 ಸರಾಸರಿಯೊಂದಿಗೆ 12 ವಿಕೆಟ್ ಪಡೆದಿದ್ದಾರೆ. ಅವರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೇವಲ 10 ರನ್‌ಗಳಿಗೆ 5 ವಿಕೆಟ್ ಪಡೆದರು.