IPL 2022: ಕೊಹ್ಲಿ- ರೋಹಿತ್ ಕಳಪೆ ಫಾರ್ಮ್; ಚಿಂತಿಸುವ ಅಗತ್ಯವಿಲ್ಲ ಎಂದ ಸೌರವ್ ಗಂಗೂಲಿ

TV9 Digital Desk

| Edited By: ಪೃಥ್ವಿಶಂಕರ

Updated on: May 14, 2022 | 6:18 PM

IPL 2022: ಸಂದರ್ಶನವೊಂದರಲ್ಲಿ ಮಾತನಾಡಿದ ಗಂಗೂಲಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇಬ್ಬರೂ ಉತ್ತಮ ಮತ್ತು ಪ್ರತಿಭಾವಂತ ಆಟಗಾರರು. ಹೀಗಾಗಿ ಟಿ 20 ವಿಶ್ವಕಪ್ ಇನ್ನೂ ದೂರದಲ್ಲಿದ್ದು, ಇಬ್ಬರೂ ಬೇಗನೇ ಫಾರ್ಮ್​ಗೆ ಮರಳುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.

IPL 2022: ಕೊಹ್ಲಿ- ರೋಹಿತ್ ಕಳಪೆ ಫಾರ್ಮ್; ಚಿಂತಿಸುವ ಅಗತ್ಯವಿಲ್ಲ ಎಂದ ಸೌರವ್ ಗಂಗೂಲಿ
ಸೌರವ್ ಗಂಗೂಲಿ

Follow us on

ಐಪಿಎಲ್ 2022 (IPL 2022)ರಲ್ಲಿ ಸಾಕಷ್ಟು ರನ್‌ಗಳು ಬಂದಿವೆ. ಪ್ರತಿ ಪಂದ್ಯದಲ್ಲೂ ಬ್ಯಾಟ್ಸ್‌ಮನ್‌ಗಳು ರನ್‌ಗಳನ್ನು ಲೂಟಿ ಮಾಡುತ್ತಿದ್ದಾರೆ. ಇವರಲ್ಲಿ ಕೆಲವು ಚಿರಪರಿಚಿತ ಹೆಸರುಗಳಿದ್ದರೆ, ಇದರಲ್ಲಿ ಐಪಿಎಲ್‌ಗೆ ಹೊಸಬರೂ ಇದ್ದಾರೆ. ಆದರೆ ಟೀಂ ಇಂಡಿಯಾದ ನಾಯಕ ರೋಹಿತ್ (Rohit Sharma) ಹಾಗೂ ಮಾಜಿ ನಾಯಕ ಕೊಹ್ಲಿಗೆ ( Virat Kohli) ಈ ಆವೃತ್ತಿಯಲ್ಲಿ ರನ್​ ಗಳಿಸಲಾಗುತ್ತಿಲ್ಲ. ಹಾಗಾದರೆ ಭಾರತದ ಇಬ್ಬರು ಸೂಪರ್‌ಸ್ಟಾರ್‌ಗಳಿಗೆ ಏನಾಯಿತು? ಅವರ ಬ್ಯಾಟ್ ಏಕೆ ರನ್‌ಗಳನ್ನು ಸುರಿಸುತ್ತಿಲ್ಲ? ಪ್ರತಿ ಪಂದ್ಯದಲ್ಲೂ ಅವರ ಪ್ರದರ್ಶನದ ಗ್ರಾಫ್ ಏಕೆ ಕುಸಿಯುತ್ತಿದೆ? ಎಂಬ ಪ್ರಶ್ನೆಗಳು ಭಾರತದ ಕ್ರಿಕೆಟ್​ ಅಭಿಮಾನಿಗಳನ್ನು ಚಿಂತೆಗೀಡು ಮಾಡಿವೆ. ಇದರಲ್ಲಿ ಒಂದು ಈಗಿನ ಟೀಂ ಇಂಡಿಯಾದ ಹೃದಯವಾದರೆ ಇನ್ನೊಂದು ಹೃದಯ ಬಡಿತ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಐಪಿಎಲ್ 2022ರಲ್ಲಿ ಇಬ್ಬರ ಫಾರ್ಮ್​ ಸರಿಯಾಗಿ ಕೈಕೊಟ್ಟಿದೆ. ಈ ಐಪಿಎಲ್​ನಲ್ಲಿ ಕೆಎಲ್ ರಾಹುಲ್ (KL Rahul) ಏಕಾಂಗಿಯಾಗಿ ಗಳಿಸಿರುವ ರನ್​ಗಳನ್ನು 25 ಇನ್ನಿಂಗ್ಸ್‌ಗಳಲ್ಲಿ ಈ ಇಬ್ಬರೂ ಬ್ಯಾಟರ್​ಗಳು ಒಟ್ಟಾಗಿ ಗಳಿಸಿಲ್ಲ. ಇದೀಗ ಟೂರ್ನಿ ಮುಕ್ತಾಯದ ಹಂತದಲ್ಲಿದೆ. ಅಂದರೆ, ಮುಂದೆ ಅಂತಾರಾಷ್ಟ್ರೀಯ ಸರಣಿಯೂ ನಡೆಯಲಿದೆ.ಹೀಗಾಗಿ ಈ ಇಬ್ಬರ ಫಾರ್ಮ್​ ನೋಡಿದರೆ, ಟೀಂ ಇಂಡಿಯಾದ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಆದರೆ, ಈ ಇಬ್ಬರ ವಿಚಾರದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಕಕಾರರ ಬಾಯಿ ಮುಚ್ಚಿಸಿದ್ದಾರೆ.

ಐಪಿಎಲ್ 2022 ರಲ್ಲಿ ರೋಹಿತ್ ಶರ್ಮಾ ಪ್ರದರ್ಶನ ರೋಹಿತ್ ಶರ್ಮಾ ಈ ಸೀಸನ್​ನಲ್ಲಿ ಇದುವರೆಗೆ ಆಡಿದ 12 ಇನ್ನಿಂಗ್ಸ್‌ಗಳಲ್ಲಿ ಕೇವಲ 218 ರನ್ ಗಳಿಸಿದ್ದಾರೆ. ಅವರು ಕೇವಲ 18.17 ರ ಸರಾಸರಿಯಲ್ಲಿ ಈ ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ 125.29 ಆಗಿತ್ತು. ಅರ್ಧಶತಕದ ಬಗ್ಗೆ ಮಾತನಾಡುವುದಾರೆ, ಅವರ ಅತ್ಯುತ್ತಮ ಸ್ಕೋರ್ 43 ರನ್ ಆಗಿರುವುದರಿಂದ ರೋಹಿತ್ ಇದುವರೆಗೆ ಈ ಸೀಸನ್​ನಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಇಲ್ಲಿಯವರೆಗೆ ಆಡಿದ 12 ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಶರ್ಮಾ ಶೂನ್ಯಕ್ಕೆ ಒಮ್ಮೆ ಔಟಾಗಿದ್ದಾರೆ.

ಐಪಿಎಲ್ 2022 ರಲ್ಲಿ ವಿರಾಟ್ ಕೊಹ್ಲಿಯ ಪ್ರದರ್ಶನ ಈಗ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಬಗ್ಗೆ ಹೇಳಬೇಕೆಂದರೆ, ಕೊಹ್ಲಿ ಇದುವರೆಗೆ ಆಡಿರುವ 13 ಇನ್ನಿಂಗ್ಸ್‌ಗಳಲ್ಲಿ 236 ರನ್ ಗಳಿಸಿದ್ದಾರೆ. ಅವರ ಸರಾಸರಿ 19.67 ಆಗಿದ್ದು, ಸ್ಟ್ರೈಕ್ ರೇಟ್ 113.36 ಆಗಿದೆ. 13 ಇನ್ನಿಂಗ್ಸ್‌ಗಳಲ್ಲಿ ವಿರಾಟ್ 1 ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ಮೂರು ಇನ್ನಿಂಗ್ಸ್​ಗಳಲ್ಲಿ ಶೂನ್ಯ ಸಂಪಾದನೆಯ ಸಾಧನೆಯನ್ನು ಮಾಡಿದ್ದಾರೆ.

ಇದನ್ನೂ ಓದಿ

ರೋಹಿತ್ + ವಿರಾಟ್ = 25 ಇನ್ನಿಂಗ್ಸ್, ಐಪಿಎಲ್ 2022 ರಲ್ಲಿ 454 ರನ್ ಈಗ ಐಪಿಎಲ್ 2022 ರಲ್ಲಿ ರೋಹಿತ್ ಮತ್ತು ವಿರಾಟ್ ಅವರ ಪ್ರದರ್ಶನವನ್ನು ಒಂದೊಂದಾಗಿ ನೋಡುವುದಾದರೆ, ಅವರಿಬ್ಬರೂ ಒಟ್ಟಾಗಿ ಕೆಎಲ್ ರಾಹುಲ್‌ಗೆ ಸಮನಾದ ಸ್ಕೋರ್ ಕೂಡ ಮಾಡಲಿಲ್ಲ ಎಂಬುದು ತಿಳಿಯುತ್ತದೆ. ಐಪಿಎಲ್ 2022 ರಲ್ಲಿ ರೋಹಿತ್ ಮತ್ತು ವಿರಾಟ್ ಅವರ ಒಟ್ಟು ಇನ್ನಿಂಗ್ಸ್ 25 ಮತ್ತು ಅವರು ಗಳಿಸಿದ ರನ್ಗಳ ಮೊತ್ತ 454. ಈಗ ನಾವು ಅವರ ಬ್ಯಾಟಿಂಗ್ ಸರಾಸರಿಯ ಸರಾಸರಿಯನ್ನು ತೆಗೆದುಕೊಂಡರೆ, ಅದು 18.92 ಮತ್ತು ಸ್ಟ್ರೈಕ್ ರೇಟ್ 118.85 ಆಗಿದೆ.

ಚಿಂತೆ ಮಾಡುವ ಅವಶ್ಯಕತೆಯಿಲ್ಲ – ಸೌರವ್ ಗಂಗೂಲಿ ಆದರೆ ಈ ಇಬ್ಬರ ಫಾರ್ಮ್​ ಬಗ್ಗೆ ಮಾತನಾಡಿರುವ ಗಂಗೂಲಿ, ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಗಂಗೂಲಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಫಾರ್ಮ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಇಬ್ಬರೂ ಉತ್ತಮ ಮತ್ತು ಪ್ರತಿಭಾವಂತ ಆಟಗಾರರು. ಹೀಗಾಗಿ ಟಿ 20 ವಿಶ್ವಕಪ್ ಇನ್ನೂ ದೂರದಲ್ಲಿದ್ದು, ಇಬ್ಬರೂ ಬೇಗನೇ ಫಾರ್ಮ್​ಗೆ ಮರಳುತ್ತಾರೆ ಎಂದು ನನಗೆ ಖಾತ್ರಿಯಿದೆ. ಈ ಇಬ್ಬರು ಮತ್ತೆ ತಮ್ಮ ಫಾರ್ಮ್​ಗೆ ಯಾವಾಗ ಬರುತ್ತಾರೆ ಎಂಬುದನ್ನು ಕಾಲವೇ ಹೇಳಲಿದೆ ಎಂದಿದ್ದಾರೆ.ಆದರೆ ಸದ್ಯದ ಚಿತ್ರಣ ಭಾರತೀಯ ಕ್ರಿಕೆಟ್‌ನ ದೃಷ್ಟಿಯಿಂದ ಆತಂಕಕಾರಿಯಾಗಿದೆ.

ತಾಜಾ ಸುದ್ದಿ

Related Stories

Click on your DTH Provider to Add TV9 Kannada