AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಡೆತ್ ಓವರ್‌ಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಅಪಾಯಕಾರಿ ಬ್ಯಾಟರ್​ಗಳು ಇವರೇ..!

IPL 2022: ದಿನೇಶ್ ಕಾರ್ತಿಕ್‌ಗೆ ಈ ಸೀಸನ್ ಅದ್ಭುತವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಡೆತ್ ಓವರ್‌ಗಳಲ್ಲಿ ಅವರ 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ದಿನೇಶ್ ಕಾರ್ತಿಕ್ ಈ ಋತುವಿನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ 21 ಸಿಕ್ಸರ್ ಬಾರಿಸಿದ್ದಾರೆ.

ಪೃಥ್ವಿಶಂಕರ
|

Updated on:May 14, 2022 | 4:01 PM

Share
ಡೆತ್ ಓವರ್ ಎಂದರೆ 16 ರಿಂದ 20 ಓವರ್​ಗಳು ಟಿ20 ಕ್ರಿಕೆಟ್​ನಲ್ಲಿ ಬಹಳ ಮುಖ್ಯ. ಈ ಓವರ್‌ಗಳಲ್ಲಿ ಆಟಗಾರರಿಗೆ ಆಟದ ದಿಕ್ಕನ್ನೆ ಬದಲಿಸುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಬ್ಯಾಟ್ ಅಬ್ಬರಿಸಿದರೆ, ಕೆಲವೊಮ್ಮೆ ಚೆಂಡು ಮೇಲುಗೈ ಸಾಧಿಸುತ್ತದೆ. ಆದರೆ, ನಾವು ಇಲ್ಲಿ ಐಪಿಎಲ್ 2022 ಬ್ಯಾಟ್ಸ್‌ಮನ್‌ಗಳ ಬಗ್ಗೆ ಮಾತನಾಡುವುದಾದರೆ, ಡೆತ್ ಓವರ್‌ಗಳಲ್ಲಿ ಬೌಲರ್​ಗಳು ಪ್ರಾಬಲ್ಯ ಸಾಧಿಸಲು ಅವರು ಬಿಡುವುದಿಲ್ಲ. ಐಪಿಎಲ್ 15ನೇ ಸೀಸನ್‌ನ ಡೆತ್ ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರು ಯಾರು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

1 / 5
ಶಿಮ್ರಾನ್ ಹೆಟ್ಮೆಯರ್ - ಐಪಿಎಲ್ 2022 ರಲ್ಲಿ ಇದುವರೆಗೆ 11 ಪಂದ್ಯಗಳಲ್ಲಿ 21 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅವರು ಡೆತ್ ಓವರ್‌ಗಳಲ್ಲಿ 19 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುವುದೇ ಇದಕ್ಕೆ ಪ್ರಮುಖ ಕಾರಣ.

2 / 5
ದಿನೇಶ್ ಕಾರ್ತಿಕ್- IPL 2022 ದಿನೇಶ್ ಕಾರ್ತಿಕ್‌ಗೆ ಅದ್ಭುತವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಡೆತ್ ಓವರ್‌ಗಳಲ್ಲಿ ಅವರ 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ದಿನೇಶ್ ಕಾರ್ತಿಕ್ ಈ ಋತುವಿನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ 21 ಸಿಕ್ಸರ್ ಬಾರಿಸಿದ್ದಾರೆ. ಅದರಲ್ಲಿ ಅವರು ಡೆತ್ ಓವರ್‌ಗಳಲ್ಲಿ 18 ಸಿಕ್ಸರ್‌ಗಳನ್ನು ಬಾರಿಸಿರುವುದು ತಂಡಕ್ಕೆ ಬಹುಮುಖ್ಯ ಕೊಡುಗೆಯಾಗಿದೆ.

3 / 5
ರಾಹುಲ್ ತೆವಾಟಿಯಾ - ಗುಜರಾತ್ ಟೈಟಾನ್ಸ್‌ನ ರಾಹುಲ್ ತೆವಾಟಿಯಾ ಅವರು ಐಪಿಎಲ್ 2022 ರಲ್ಲಿ ತಮ್ಮ ತಂಡದ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ರಾಹುಲ್ ತೆವಾಟಿಯಾ ಈ ಋತುವಿನಲ್ಲಿ ಇದುವರೆಗೆ 12 ಪಂದ್ಯಗಳಲ್ಲಿ ಒಟ್ಟು 9 ಸಿಕ್ಸರ್ ಬಾರಿಸಿದ್ದಾರೆ. ಅದರಲ್ಲಿ ಅವರು ಡೆತ್ ಓವರ್‌ಗಳಲ್ಲಿ 8 ಸಿಕ್ಸರ್‌ ಬಾರಿಸಿರುವುದು ವಿಶೇಷ.

4 / 5
ಎಂಎಸ್ ಧೋನಿ - ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ 12 ಪಂದ್ಯಗಳಲ್ಲಿ 9 ಸಿಕ್ಸರ್ ಬಾರಿಸಿದ್ದಾರೆ. ಆದಾಗ್ಯೂ, ಅವರು ಈ 9 ಸಿಕ್ಸರ್‌ಗಳಲ್ಲಿ ಡೆತ್ ಓವರ್‌ಗಳಲ್ಲಿ 7 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಋತುವಿನಲ್ಲಿ ಚೆನ್ನೈ ಪ್ರಶಸ್ತಿ ರೇಸ್‌ನಿಂದ ನಿರ್ಗಮಿಸಿದರೂ, ಧೋನಿ ಬ್ಯಾಟಿಂಗ್ ಸುದ್ದಿಯಲ್ಲಿದೆ.

5 / 5

Published On - 3:42 pm, Sat, 14 May 22

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್