AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಮಾರಕ ದಾಳಿಯಿಂದಾಗಿ ಈ ಐಪಿಎಲ್​ನಲ್ಲಿ ಮಿಂಚಿದ ಭಾರತದ ಅನ್​ಕ್ಯಾಪ್ಡ್ ಬೌಲರ್​ಗಳಿವರು..!

IPL 2022: ಮಲಿಕ್ ಈ ಸೀಸನ್​ನಲ್ಲಿ 11 ಪಂದ್ಯಗಳಲ್ಲಿ 24.26 ಸರಾಸರಿ ಮತ್ತು 9.10 ರ ಎಕಾನಮಿಯೊಂದಿಗೆ 15 ವಿಕೆಟ್ಗಳನ್ನು ಪಡೆದಿದ್ದಾರೆ. ಈ ವೇಗಿ ಸುಮಾರು 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ.

IPL 2022: ಮಾರಕ ದಾಳಿಯಿಂದಾಗಿ ಈ ಐಪಿಎಲ್​ನಲ್ಲಿ ಮಿಂಚಿದ ಭಾರತದ ಅನ್​ಕ್ಯಾಪ್ಡ್ ಬೌಲರ್​ಗಳಿವರು..!
ಅನ್‌ಕ್ಯಾಪ್ಡ್ ಇಂಡಿಯನ್ ಬೌಲರ್‌ಗಳು
TV9 Web
| Edited By: |

Updated on: May 14, 2022 | 4:38 PM

Share

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2022) 15 ನೇ ಆವೃತ್ತಿಯಲ್ಲಿ ಬಹಳಷ್ಟು ಪ್ರತಿಭೆಗಳು ಬೆಳಕಿಗೆ ಬಂದವು. ಅನೇಕ ಅನ್‌ಕ್ಯಾಪ್ ಆಟಗಾರರು ತಮ್ಮ ವೃತ್ತಿಜೀವನದಲ್ಲಿ ಮಿಂಚುತ್ತಿದ್ದಾರೆ. ಅವರಲ್ಲಿ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ಇದ್ದಾರೆ. ಐಪಿಎಲ್ 2022ರಲ್ಲಿ ಸಾರ್ವಜನಿಕರ ಗಮನ ಸೆಳೆಯಲಿರುವ ಕೆಲವು ಅನ್‌ಕ್ಯಾಪ್ಡ್ ವೇಗಿಗಳ ಪಟ್ಟಿಯೂ ಸೇರಿದೆ. ಅವರೆಲ್ಲರೂ ತಮ್ಮ ಪ್ರತಿಭೆಯಿಂದ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯಲು ಕರ್ಚೀಫ್ ಹಾಕಿದ್ದಾರೆ. ಈಗ ಈ ಪಟ್ಟಿಯಲ್ಲಿ ಯಾರಿದ್ದಾರೆ ಎಂದು ನೋಡೋಣ..

ಉಮ್ರಾನ್ ಮಲಿಕ್ ಉಮ್ರಾನ್ ಮಲಿಕ್ ಈ ಋತುವಿನಲ್ಲಿ ಹೆಚ್ಚು ಸದ್ದು ಮಾಡಿದ ಆಟಗಾರನಾಗಿದ್ದಾರೆ. ವೇಗದ ಬೌಲಿಂಗ್ ಸೆನ್ಸೇಷನ್ ಎಂದೇ ಹೆಸರಾಗಿರುವ SRH ಎಕ್ಸ್‌ಪ್ರೆಸ್ ತನ್ನ ವೇಗ ಮತ್ತು ನಿಖರತೆಯಿಂದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಿದ್ದಾರೆ. ಅವರು SRH ಪರ ನೆಟ್ ಬೌಲರ್ ಆಗಿ ತಮ್ಮ IPL ವೃತ್ತಿಜೀವನವನ್ನು ಪ್ರಾರಂಭಿಸಿದರು. ಸದ್ಯ ಟೀಮ್ ಪೇಸ್ ಅಟ್ಯಾಕ್​ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಮಲಿಕ್ ಈ ಸೀಸನ್​ನಲ್ಲಿ 11 ಪಂದ್ಯಗಳಲ್ಲಿ 24.26 ಸರಾಸರಿ ಮತ್ತು 9.10 ರ ಎಕಾನಮಿಯೊಂದಿಗೆ 15 ವಿಕೆಟ್ಗಳನ್ನು ಪಡೆದಿದ್ದಾರೆ. ಈ ವೇಗಿ ಸುಮಾರು 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಜೊತೆಗೆ ಮಲಿಕ್ ಈ ಆವೃತ್ತಿಯ ಅತಿ ವೇಗದ ಬೌಲರ್ ಎಂಬ ಖ್ಯಾತೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ
Image
IPL 2022: ಡೆತ್ ಓವರ್‌ಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಅಪಾಯಕಾರಿ ಬ್ಯಾಟರ್​ಗಳು ಇವರೇ..!
Image
RCB vs PBKS Highlights, IPL 2022: ಕಳಪೆ ಪ್ರದರ್ಶನ; ಪಂಜಾಬ್ ಎದುರು ಮತ್ತೊಮ್ಮೆ ಸೋತ ಆರ್​ಸಿಬಿ
Image
IPL 2022: ಚೆನ್ನೈಗೆ ಭಾರೀ ಹೊಡೆತ! ಇಂಜುರಿಯಿಂದ್ದಾಗಿ ಐಪಿಎಲ್​ ತೊರೆದ 8 ಸ್ಟಾರ್ ಕ್ರಿಕೆಟಿಗರು ಇವರೇ..
Image
Thomas Cup 2022: 43 ವರ್ಷಗಳ ಬಳಿಕ ಥಾಮಸ್ ಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ! ದೇಶಕ್ಕೆ ಪದಕ ಖಚಿತ

ಮೊಹ್ಸಿನ್ ಖಾನ್ (ಲಕ್ನೋ ಸೂಪರ್ ಜೈಂಟ್ಸ್) .. ಭಾರತದ ಎಡಗೈ ವೇಗಿ ಮೊಹ್ಸಿನ್ ಖಾನ್ ಲಕ್ನೋ ಸೂಪರ್ ಜೈಂಟ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಯುವ ಸ್ಪೀಡ್‌ಸ್ಟರ್ 5.19 ರ ಅತ್ಯುತ್ತಮ ಎಕಾನಮಿಯೊಂದಿಗೆ ಕೇವಲ 6 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ.

ಯಶ್ ದಯಾಳ್ (ಗುಜರಾತ್ ಟೈಟಾನ್ಸ್). ಪಟ್ಟಿಯಲ್ಲಿರುವ ಮತ್ತೊಬ್ಬ ಯುವ ಎಡಗೈ ವೇಗಿ ಯಶ್ ದಯಾಳ್ ಈ ಆವೃತ್ತಿಯಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದರು. ಈ ಆಟಗಾರ ಗುಜರಾತ್ ಟೈಟಾನ್ಸ್ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದಯಾಳ್ ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮಥ್ಯ್ರ ಹೊಂದಿದ್ದಾರೆ. ಅವರು 9.44 ರ ಎಕಾನಮಿಯೊಂದಿಗೆ ಕೇವಲ ಐದು ಪಂದ್ಯಗಳಲ್ಲಿ ಒಂಬತ್ತು ವಿಕೆಟ್ಗಳನ್ನು ಪಡೆದಿದ್ದಾರೆ.

ಮುಖೇಶ್ ಚೌಧರಿ (ಚೆನ್ನೈ ಸೂಪರ್ ಕಿಂಗ್ಸ್) .. ವಿಜಯ್ ಹಜಾರೆ ಟ್ರೋಫಿ 2021-22 ರಲ್ಲಿ ಮಹಾರಾಷ್ಟ್ರದ ಪ್ರಮುಖ ವಿಕೆಟ್ ಟೇಕರ್ ಆಗಿದ್ದ ಮುಖೇಶ್ ಚೌಧರಿ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವೀರೋಚಿತ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ಮೆಚ್ಚಿಸಿದರು. ಮೆಗಾ ಹರಾಜಿನಲ್ಲಿ ರೂ. 20 ಲಕ್ಷ ಮೂಲ ಬೆಲೆಗೆ CSK ಸೇರಿದ ಎಡಗೈ ವೇಗಿ ಈ ಐಪಿಎಲ್ ಋತುವಿನಲ್ಲಿ ಇದುವರೆಗೆ ಹತ್ತು ಪಂದ್ಯಗಳಲ್ಲಿ 13 ವಿಕೆಟ್ಗಳನ್ನು ಪಡೆದಿದ್ದಾರೆ.

ಅರ್ಷದೀಪ್ ಸಿಂಗ್ (ಪಂಜಾಬ್ ಕಿಂಗ್ಸ್) .. ಅರ್ಷದೀಪ್ ಸಿಂಗ್ ಅವರಿಗೆ ಸಾಕಷ್ಟು ವಿಕೆಟ್ ಇಲ್ಲದಿರಬಹುದು. ಆದರೆ, ಪಂಜಾಬ್ ಕಿಂಗ್ಸ್‌ಗೆ, ವೇಗಿ ಈ ಋತುವಿನಲ್ಲಿ ಅತ್ಯಂತ ಮಿತವಾಗಿ ಬೌಲಿಂಗ್ ಮಾಡುವ ಮೂಲಕ ಪ್ರಭಾವ ಬೀರಿದ್ದಾರೆ. ಎಡಗೈ ವೇಗಿ ಯಾವುದೇ ಸಂದರ್ಭದಲ್ಲಿ ಮತ್ತು ಪಂದ್ಯದ ಯಾವುದೇ ಹಂತದಲ್ಲಿ ರನ್ಗಳ ಪ್ರವಾಹವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಣದ ಹುಣ್ಣಿಮೆಗೆ ಜನಸಾಗರ, ಬೆಳಗಾವಿಯಲ್ಲಿ ಬಸ್ ಕೊರತೆಯಿಂದ ಭಕ್ತರ ಪರದಾಟ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಬಿಗ್ ಬಾಸ್​​ನಲ್ಲಿ ಸುದೀಪ್ ಚರ್ಚೆ ಮಾಡಬೇಕಿರುವ ವಿಷಯಗಳ ಪಟ್ಟಿ ದೊಡ್ಡದಿದೆ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ
ಸರ್ಕಾರದ ಗ್ಯಾರಂಟಿ ಯೋಜನೆ ವಿರುದ್ಧ ಗುಡುಗಿದ ಹೆಚ್​​ಡಿ ದೇವೇಗೌಡ
ಅಶ್ವಿನಿ ಗೌಡಗೆ ಮಾತಿನ ಮೂಲಕವೇ ಬುದ್ಧಿ ಕಲಿಸಿದ ಗಿಲ್ಲಿ ನಟ
ಅಶ್ವಿನಿ ಗೌಡಗೆ ಮಾತಿನ ಮೂಲಕವೇ ಬುದ್ಧಿ ಕಲಿಸಿದ ಗಿಲ್ಲಿ ನಟ