IPL 2022: ಚೆನ್ನೈಗೆ ಭಾರೀ ಹೊಡೆತ! ಇಂಜುರಿಯಿಂದ್ದಾಗಿ ಐಪಿಎಲ್​ ತೊರೆದ 8 ಸ್ಟಾರ್ ಕ್ರಿಕೆಟಿಗರು ಇವರೇ..

IPL 2022: ಈ ತಂಡಗಳ ಕಳಪೆ ಪ್ರದರ್ಶನಕ್ಕೆ ಕೇವಲ ಹರಾಜೊಂದೆ ಕಾರಣವಾಗಿಲ್ಲ. ಬದಲಿಗೆ, ಇಂಜುರಿಯಿಂದಾಗಿ ಪಂದ್ಯಾವಳಿ ತೊರೆದ ಆಟಗಾರರು ಸಹ ಇದಕ್ಕೆ ಕಾರಣರಾಗಿದ್ದಾರೆ.

ಪೃಥ್ವಿಶಂಕರ
|

Updated on:May 13, 2022 | 6:55 PM

ಐಪಿಎಲ್ 2022 ರ ಸೀಸನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ನಂತಹ ತಂಡಗಳಿಗೆ ಉತ್ತಮವಾಗಿಲ್ಲ. ಈ ಋತುವಿನಲ್ಲಿ ಎರಡು ಯಶಸ್ವಿ ಐಪಿಎಲ್ ತಂಡಗಳು ಪ್ಲೇ ಆಫ್​ನಿಂದ ಹೊರಬಿದ್ದಿವೆ. ಎರಡೂ ತಂಡಗಳ ಪ್ರದರ್ಶನ ತೀರಾ ಕಳಪೆಯಾಗಿತ್ತು. ಹೀಗಾಗಿ ತಂಡದ ಹರಾಜು ತಂತ್ರದ ಮೇಲೆ ಎಲ್ಲರೂ ಪ್ರಶ್ನೆಗಳನ್ನು ಎತ್ತಿದ್ದರು. ಆದರೆ ಈ ತಂಡಗಳ ಕಳಪೆ ಪ್ರದರ್ಶನಕ್ಕೆ ಕೇವಲ ಹರಾಜೊಂದೆ ಕಾರಣವಾಗಿಲ್ಲ. ಬದಲಿಗೆ, ಇಂಜುರಿಯಿಂದಾಗಿ ಪಂದ್ಯಾವಳಿ ತೊರೆದ ಆಟಗಾರರು ಸಹ ಇದಕ್ಕೆ ಕಾರಣರಾಗಿದ್ದಾರೆ.

1 / 8
ಮೊದಲನೆಯದಾಗಿ, ಇಂಜುರಿ ಸಮಸ್ಯೆಗೆ ಹೆಚ್ಚು ತುತ್ತಾಗಿದ್ದು CSK ತಂಡ. ಪಂದ್ಯಾವಳಿ ಪ್ರಾರಂಭವಾಗುವ ಒಂದು ತಿಂಗಳ ಮೊದಲು, ತಂಡದ ಪ್ರಮುಖ ಬೌಲರ್ ದೀಪಕ್ ಚಹಾರ್ ಗಾಯಗೊಂಡರು. CSK ಹರಾಜಿನಲ್ಲಿ 14 ಕೋಟಿಗೆ ಚಹರ್ ಅವರನ್ನು ಖರೀದಿಸಿತ್ತು.  ಆದರೆ ಚಹಾರ್​ಗೆ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.

2 / 8
ನ್ಯೂಜಿಲೆಂಡ್ ವೇಗಿ ಆಡಮ್ ಮಿಲ್ನೆ ರೂಪದಲ್ಲಿ ಸಿಎಸ್‌ಕೆಗೆ ಮತ್ತೊಂದು ಹಿನ್ನಡೆಯಾಗಿದೆ. ಜೋಶ್ ಹ್ಯಾಜಲ್‌ವುಡ್ ಕೊರತೆಯನ್ನು ನೀಗಿಸಲು ಮಿಲ್ನೆ ಅವರನ್ನು CSK ಖರೀದಿಸಿತು, ಆದರೆ ಅವರು ಋತುವಿನ ಮೊದಲ ಪಂದ್ಯದಲ್ಲಿ ಗಾಯಗೊಂಡು ಪಂದ್ಯಾವಳಿಯಿಂದ ಹೊರಗುಳಿದರು.

3 / 8
CSK ಗೆ ಈ ಆವೃತ್ತಿ ಗಾಯದಿಂದ ಆರಂಭವಾಗಿ, ಅದೇ ರೀತಿಯಲ್ಲಿ ಕೊನೆಗೊಳ್ಳುತ್ತಿದೆ. ತಂಡದ ನಾಯಕರಾಗಿದ್ದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡಿದ್ದಲ್ಲದೆ, ನಾಯಕತ್ವವನ್ನೂ ಕಳೆದುಕೊಂಡು ಟೂರ್ನಿಯ ಕೊನೆಯ 3-4 ಪಂದ್ಯಗಳಿಂದ ಹೊರಗುಳಿದಿದ್ದರು.

4 / 8
ಸಿಎಸ್‌ಕೆ ಮಾತ್ರವಲ್ಲ, ಮುಂಬೈ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಸೂರ್ಯಕುಮಾರ್ ಯಾದವ್ ಗಾಯದಿಂದ ತಂಡಕ್ಕೆ ಈ ಋತುವಿನಲ್ಲಿ ಎರಡು ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. MI ಈ ಎರಡೂ ಪಂದ್ಯಗಳಲ್ಲಿ ಸೋತಿತು ಮತ್ತು ಕಳಪೆ ಆರಂಭವು ಸೂರ್ಯಕುಮಾರ್ ಮರಳುವುದರೊಂದಿಗೆ ಮುಂದುವರೆಯಿತು. ಇದೀಗ ಅವರೂ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.

5 / 8
ಈ ವಿಚಾರದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಸ್ಟಾರ್ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪ್ಲೇಆಫ್ ರೇಸ್‌ಗಾಗಿ ಕೆಕೆಆರ್ ಕೊನೆಯ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ, ಆದರೆ 7.25 ಕೋಟಿ ಮೌಲ್ಯದ ಕಮ್ಮಿನ್ಸ್ ಗಾಯದ ಕಾರಣದಿಂದ ಹೊರಗುಳಿದಿದ್ದಾರೆ.

6 / 8
ರಾಜಸ್ಥಾನ್ ರಾಯಲ್ಸ್‌ನ ಆಸ್ಟ್ರೇಲಿಯಾದ ಮಧ್ಯಮ ವೇಗಿ ನಾಥನ್ ಕೌಲ್ಟರ್-ನೈಲ್ ಕೂಡ ಪಂದ್ಯಾವಳಿಯ ಆರಂಭದಲ್ಲೇ ಗಾಯಗೊಂಡರು. ಕೌಲ್ಟರ್-ನೈಲ್ ರಾಜಸ್ಥಾನ ಪರ ಕೇವಲ ಒಂದು ಪಂದ್ಯವನ್ನಾಡಿ ಮನೆಗೆ ವಾಪಸ್ಸಾದರು.

7 / 8
ಈ ದೊಡ್ಡ ಆಟಗಾರರ ಹೊರತಾಗಿ, ಕೆಲವು ಯುವ ಆಟಗಾರರು ಕೂಡ ಗಾಯದ ಕಾರಣದಿಂದಾಗಿ ಮಧ್ಯ ಋತುವಿನಿಂದ ಮರಳಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆಲ್ ರೌಂಡರ್ ಲವನೀತ್ ಸಿಸೋಡಿಯಾ ಅಭ್ಯಾಸದ ವೇಳೆ ಗಾಯಗೊಂಡು ಒಂದೂ ಪಂದ್ಯವನ್ನಾಡದೆ ಪಂದ್ಯಾವಳಿಯಿಂದ ಹೊರನಡೆದರು. ಅದೇ ಸಮಯದಲ್ಲಿ, ಕೆಕೆಆರ್ ವೇಗದ ಬೌಲರ್ ರಸಿಖ್ ಸಲಾಂ ಕೂಡ ಫಿಟ್ನೆಸ್ ಸಮಸ್ಯೆಯಿಂದ ಪಂದ್ಯಾವಳಿ ತೊರೆದರು.

8 / 8

Published On - 6:39 pm, Fri, 13 May 22

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ