ಐಪಿಎಲ್ 2022 ರ ಸೀಸನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ನಂತಹ ತಂಡಗಳಿಗೆ ಉತ್ತಮವಾಗಿಲ್ಲ. ಈ ಋತುವಿನಲ್ಲಿ ಎರಡು ಯಶಸ್ವಿ ಐಪಿಎಲ್ ತಂಡಗಳು ಪ್ಲೇ ಆಫ್ನಿಂದ ಹೊರಬಿದ್ದಿವೆ. ಎರಡೂ ತಂಡಗಳ ಪ್ರದರ್ಶನ ತೀರಾ ಕಳಪೆಯಾಗಿತ್ತು. ಹೀಗಾಗಿ ತಂಡದ ಹರಾಜು ತಂತ್ರದ ಮೇಲೆ ಎಲ್ಲರೂ ಪ್ರಶ್ನೆಗಳನ್ನು ಎತ್ತಿದ್ದರು. ಆದರೆ ಈ ತಂಡಗಳ ಕಳಪೆ ಪ್ರದರ್ಶನಕ್ಕೆ ಕೇವಲ ಹರಾಜೊಂದೆ ಕಾರಣವಾಗಿಲ್ಲ. ಬದಲಿಗೆ, ಇಂಜುರಿಯಿಂದಾಗಿ ಪಂದ್ಯಾವಳಿ ತೊರೆದ ಆಟಗಾರರು ಸಹ ಇದಕ್ಕೆ ಕಾರಣರಾಗಿದ್ದಾರೆ.
1 / 8
ಮೊದಲನೆಯದಾಗಿ, ಇಂಜುರಿ ಸಮಸ್ಯೆಗೆ ಹೆಚ್ಚು ತುತ್ತಾಗಿದ್ದು CSK ತಂಡ. ಪಂದ್ಯಾವಳಿ ಪ್ರಾರಂಭವಾಗುವ ಒಂದು ತಿಂಗಳ ಮೊದಲು, ತಂಡದ ಪ್ರಮುಖ ಬೌಲರ್ ದೀಪಕ್ ಚಹಾರ್ ಗಾಯಗೊಂಡರು. CSK ಹರಾಜಿನಲ್ಲಿ 14 ಕೋಟಿಗೆ ಚಹರ್ ಅವರನ್ನು ಖರೀದಿಸಿತ್ತು. ಆದರೆ ಚಹಾರ್ಗೆ ಒಂದು ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.