AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Thomas Cup 2022: 43 ವರ್ಷಗಳ ಬಳಿಕ ಥಾಮಸ್ ಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ! ದೇಶಕ್ಕೆ ಪದಕ ಖಚಿತ

Thomas Cup 2022: ಗುರುವಾರ ನಡೆದ ಥಾಮಸ್ ಕಪ್‌ನಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಭಾರತ 3-2 ರಿಂದ ಮಲೇಷ್ಯಾವನ್ನು ಸೋಲಿಸಿ 43 ವರ್ಷಗಳ ಕಾಯುವಿಕೆಯ ನಂತರ BWF ಥಾಮಸ್ ಕಪ್‌ನಲ್ಲಿ ದೇಶಕ್ಕೆ ಪದಕ ಖಚಿತಪಡಿಸಿದೆ.

Thomas Cup 2022: 43 ವರ್ಷಗಳ ಬಳಿಕ ಥಾಮಸ್ ಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತ! ದೇಶಕ್ಕೆ ಪದಕ ಖಚಿತ
ಕಿಡಂಬಿ ಶ್ರೀಕಾಂತ್
TV9 Web
| Edited By: |

Updated on:May 13, 2022 | 5:30 PM

Share

ಗುರುವಾರ ನಡೆದ ಥಾಮಸ್ ಕಪ್‌ (Thomas Cup )ನಲ್ಲಿ ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಸೆಮಿ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಭಾರತ 3-2 ರಿಂದ ಮಲೇಷ್ಯಾವನ್ನು ಸೋಲಿಸಿ 43 ವರ್ಷಗಳ ಕಾಯುವಿಕೆಯ ನಂತರ BWF ಥಾಮಸ್ ಕಪ್‌ನಲ್ಲಿ ದೇಶಕ್ಕೆ ಪದಕ ಖಚಿತಪಡಿಸಿದೆ. ಈ ಗೆಲುವಿನೊಂದಿಗೆ ತಂಡ ಕಂಚಿನ ಪದಕವನ್ನಾದರೂ ಖಚಿತಪಡಿಸಿಕೊಂಡಿದೆ. ಆದರೆ, ಉಬರ್ ಕಪ್‌ನಲ್ಲಿ ಭಾರತ ಮಹಿಳಾ ತಂಡ ನಿರಾಸೆ ಅನುಭವಿಸಿತು. ಥಾಯ್ಲೆಂಡ್ ಓಪನ್‌ನಲ್ಲಿ ಮಹಿಳಾ ತಂಡ 0-3 ಅಂತರದಲ್ಲಿ ಸೋಲು ಅನುಭವಿಸಿ ಇದೀಗ ಟೂರ್ನಿಯಿಂದ ಹೊರಬಿದ್ದಿದೆ.

ಐದು ಬಾರಿಯ ಚಾಂಪಿಯನ್ ಮಲೇಷ್ಯಾ ವಿರುದ್ಧ ಭಾರತವನ್ನು ಕಡೆಗಣಿಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ಭಾರತದ ಆರಂಭ ಉತ್ತಮವಾಗಿರಲಿಲ್ಲ ಆದರೆ ಆ ನಂತರ ಅವರು ಪುನರಾಗಮನ ಮಾಡಿದರು. ಇದಕ್ಕೂ ಮುನ್ನ ಭಾರತ ಕಳೆದ ಎರಡು ಪಂದ್ಯಗಳನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಪಂದ್ಯ ಗೆದ್ದಿತ್ತು. ಮಲೇಷ್ಯಾ ವಿರುದ್ಧ ಭಾರತ ಉತ್ತಮ ಆರಂಭ ಕಂಡಿರಲಿಲ್ಲ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು. 46 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಲಕ್ಷ್ಯ 21-239-21ರಿಂದ ವಿಶ್ವ ಚಾಂಪಿಯನ್ ಲಿ ಜಿ ಜಿಯಾ ವಿರುದ್ಧ ಸೋತರು. ಆದರೆ, ಭಾರತ ಇಲ್ಲಿಂದ ಪುನರಾಗಮನ ಮಾಡಿ ಮುಂದಿನ ಎರಡು ಪಂದ್ಯಗಳನ್ನು ಗೆದ್ದಿತು.

ಸಾತ್ವಿಕ್-ಚಿರಾಗ್ ತಂಡಕ್ಕೆ ಜಯ ಭಾರತದ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ವಿಶ್ವದ 13 ನೇ ಶ್ರೇಯಾಂಕಿತ ಗೋಹ್ ಸ್ಜೆ ಫೀ ಮತ್ತು ನೂರ್ ಇಝುದ್ದೀನ್ ಅವರನ್ನು 21-19, 21-15 ರಿಂದ ಸೋಲಿಸಿದರು. ಇದಾದ ಬಳಿಕ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಕಾಂತ್ ಗೆಲುವು ಸಾಧಿಸಿದರು. ಶ್ರೀಕಾಂತ್ 21-11 21-17 ನೇರ ಗೇಮ್‌ಗಳಿಂದ ವಿಶ್ವದ ನಂ.46 ಶ್ರೇಯಾಂಕಿತ ಎನ್‌ಜಿ ಟಿಜೆ ಯೋಂಗ್ ಅವರನ್ನು ಸೋಲಿಸಿದರು. 45 ನೇ ಶ್ರೇಯಾಂಕದ ಜೋಡಿಗಳಾದ ಕೃಷ್ಣ ಪ್ರಸಾದ್ ಗರಗ ಮತ್ತು ವಿಷ್ಣುವರ್ಧನ್ ಗೌರ್ ಪಂಜಾಲ ಅವರು ಆರೋನ್ ಚಿಯಾ ಮತ್ತು ಟಿಯೊ ಯೀ ವಿರುದ್ಧ ಸೋತರು.

ಇದನ್ನೂ ಓದಿ
Image
PBKS vs RR Live Streaming: ಬಲಿಷ್ಠ ರಾಜಸ್ಥಾನಕ್ಕೆ ಪಂಜಾಬ್ ಸವಾಲು; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
Image
PBKS vs RR, Head to Head: ಪ್ಲೇ ಆಫ್​ಗೇರಲು ಇಬ್ಬರಿಗೂ ಗೆಲುವು ಅಗತ್ಯ; ಹಿಂದಿನ ಮುಖಾಮುಖಿ ಫಲಿತಾಂಶ ಇಲ್ಲಿದೆ
Image
IPL 2022: ನಂ.2..! ಐಪಿಎಲ್​ನಲ್ಲಿ ಇರ್ಫಾನ್ ಪಠಾಣ್ ದಾಖಲೆ ಸರಿಗಟ್ಟಿದ ಭುವನೇಶ್ವರ್ ಕುಮಾರ್

ತಂಡದ ಗೆಲುವನ್ನು ನಿರ್ಧರಿಸಿದ ಪ್ರಣಯ್ 23ನೇ ಶ್ರೇಯಾಂಕದ ಆಟಗಾರ ಪ್ರಣಯ್ ಗೆಲುವಿನೊಂದಿಗೆ ಭಾರತ ಮುಂದಿನ ಸುತ್ತಿನಲ್ಲಿ ಸ್ಥಾನ ಪಡೆದಿದೆ. ಪ್ರಣಯ್ ಅವರು ಆರಂಭದಲ್ಲಿ 1-6 ಹಿನ್ನಡೆಯಲ್ಲಿದ್ದರು ಆದರೆ ಅವರು 21-13 ರಿಂದ 22 ವರ್ಷದ ಹುನ್ ಹಾವೊ ಲಿಯಾಂಗ್ ಅವರನ್ನು ಸೋಲಿಸಿ ಭಾರತದ ಗೆಲುವಿಗೆ ನಾಂದಿ ಹಾಡಿದರು. ಈಗ ಸೆಮಿಫೈನಲ್‌ನಲ್ಲಿ ಭಾರತವು ದಕ್ಷಿಣ ಕೊರಿಯಾ ಮತ್ತು ಡೆನ್ಮಾರ್ಕ್ ನಡುವಿನ ಪಂದ್ಯದ ವಿಜೇತ ತಂಡವನ್ನು ಎದುರಿಸಲಿದೆ.

ಗುರುವಾರ ಥಾಯ್ಲೆಂಡ್ ವಿರುದ್ಧ 0-3 ಅಂತರದಲ್ಲಿ ಸೋತ ನಂತರ ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಮಹಿಳಾ ತಂಡ ಉಬರ್‌ನಿಂದ ಹೊರಬಿತ್ತು. ಇಲ್ಲಿನ ಇಂಪ್ಯಾಕ್ಟ್ ಅರೆನಾದಲ್ಲಿ ನಡೆದ ಈ ಪಂದ್ಯದಲ್ಲಿ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಭಾರತಕ್ಕೆ ಗೆಲುವಿನ ಆರಂಭ ನೀಡಲು ಸಾಧ್ಯವಾಗಲಿಲ್ಲ. ಸಿಂಧು ಥಾಯ್ಲೆಂಡ್‌ನ ರಚನೋಕ್ ಇಂಟನಾನ್ ವಿರುದ್ಧ 21-18, 17-21, 12-21 ಅಂತರದಲ್ಲಿ ಸೋಲು ಅನುಭವಿಸಿದರು.

Published On - 5:30 pm, Fri, 13 May 22

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ