IPL 2022: 44 ಎಸೆತಗಳಲ್ಲಿ 194 ರನ್ ದೋಚಿದ್ದ ಬ್ಯಾಟರ್ ಈ ಐಪಿಎಲ್‌ನಿಂದ ಔಟ್! ತಂಡದ ಕೋಚ್ ಹೇಳುವುದೇನು?
IPL 2022: ಗುಂಪು ಹಂತದ ಉಳಿದ ಎರಡು ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಜೊತೆ ಡೆಲ್ಲಿ ಆಡಬೇಕಿದೆ. ಆದರೆ ಶೇನ್ ವ್ಯಾಟ್ಸನ್ ಪ್ರಕಾರ, ಪೃಥ್ವಿ ಶಾ ಈ ಎರಡು ಲೀಗ್ ಪಂದ್ಯಗಳಲ್ಲಿ ಆಡುವುದಿಲ್ಲ.
15ನೇ ಆವೃತ್ತಿಯ ಐಪಿಎಲ್ (IPL 2022)ಗೆ ಖ್ಯಾತ ಕ್ರಿಕೆಟಿಗರ ಇಂಜುರಿ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಟೂರ್ನಿಯ ಆರಂಭಕ್ಕೂ ಮುನ್ನವೇ ಅನೇಕ ಆಟಗಾರರು ಇಂಜುರಿಯಿಂದ ಪಂದ್ಯಾವಳಿಯಿಂದ ದೂರ ಉಳಿದರು. ಜೊತೆಗೆ ಟೂರ್ನಿ ಆರಂಭದ ನಂತರವೂ ಕೆಲವು ಆಟಗಾರರು ಇಂಜುರಿಯಿಂದ ಟೂರ್ನಿ ತೊರೆಯಬೇಕಾಯಿತು. ಈ ಇಂಜುರಿ ಸರಣಿ ಆಯಾ ತಂಡಗಳ ಪ್ರದರ್ಶನದ ಮೇಲೆ ಗಾಡ ಪರಿಣಾಮ ಬೀರಿದವು. ಜೊತೆಗೆ ಪಂದ್ಯಾವಳಿಯ ಮಧ್ಯಭಾಗದಿಂದಲೂ ಅನೇಕ ಆಟಗಾರರು ಪಂದ್ಯಾವಳಿಯನ್ನು ತೊರೆದಿದ್ದಾರೆ. ಈಗ ಅದಕ್ಕೆ ಇನ್ನೊಂದು ಹೆಸರನ್ನು ಸೇರಿಸಬಹುದು. ವಾಸ್ತವವಾಗಿ, ಅಂತಹ ಸೂಚನೆಗಳು ದೆಹಲಿ ಕ್ಯಾಪಿಟಲ್ಸ್ (Delhi Capitals) ಶಿಬಿರದಿಂದ ಬಂದಿವೆ. ಆದರೆ, ಚಿತ್ರಣ ಇನ್ನೂ ಸ್ಪಷ್ಟವಾಗಿಲ್ಲ. ತಂಡದ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ನೀಡಿರುವ ಹೇಳಿಕೆಯ ಪ್ರಕಾರ, ಅನಾರೋಗ್ಯದಿಂದ ಬಳಲುತ್ತಿರುವ ಪೃಥ್ವಿ ಶಾ (Prithvi Shaw) ಗ್ರೂಪ್ ಹಂತದ ಉಳಿದ ಪಂದ್ಯಗಳಿಂದ ಹೊರಗುಳಿಯಬಹುದು. ಐಪಿಎಲ್ 2022 ರಲ್ಲಿ, ಪೃಥ್ವಿ ಶಾ ತಮ್ಮ ಕೊನೆಯ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮೇ 1 ರಂದು ಆಡಿದರು. ಅಂದಿನಿಂದ ಅವರು ದೆಹಲಿಯ ಪ್ಲೇಯಿಂಗ್ XI ನ ಭಾಗವಾಗಿಲ್ಲ. ಡೆಲ್ಲಿಯ ಆರಂಭಿಕ ಪಂದ್ಯದಲ್ಲೂ ಶಾ ಅನುಪಸ್ಥಿತಿಯ ಪರಿಣಾಮವು ಪಂದ್ಯದ ಸಮಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಹೀಗಿರುವಾಗ ಇದೀಗ ತಂಡದ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಅವರಿಂದ ಕೇಳಿ ಬಂದಿರುವ ಮಾತು ದೆಹಲಿಯ ಚಿಂತೆಯನ್ನು ಹೆಚ್ಚಿಸಲಿದೆ. ಗುಂಪು ಹಂತದ ಉಳಿದ ಎರಡು ಪಂದ್ಯಗಳನ್ನು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಜೊತೆ ಡೆಲ್ಲಿ ಆಡಬೇಕಿದೆ. ಆದರೆ ಶೇನ್ ವ್ಯಾಟ್ಸನ್ ಪ್ರಕಾರ, ಪೃಥ್ವಿ ಶಾ ಈ ಎರಡು ಲೀಗ್ ಪಂದ್ಯಗಳಲ್ಲಿ ಆಡುವುದಿಲ್ಲ. ಅನಾರೋಗ್ಯದ ಕಾರಣ, ಪೃಥ್ವಿ ಶಾ ಇಲ್ಲಿಯವರೆಗೆ ದೆಹಲಿ ಪರ 3 ಪಂದ್ಯಗಳಿಗೆ ಗೈರಾಗಿದ್ದರು.
ಶಾ ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ – ವ್ಯಾಟ್ಸನ್ ಗ್ರೇಡ್ ಕ್ರಿಕೆಟಿಗನೊಂದಿಗಿನ ಸಂಭಾಷಣೆಯಲ್ಲಿ ವ್ಯಾಟ್ಸನ್, ಪೃಥ್ವಿ ಶಾ ಅವರ ಅನಾರೋಗ್ಯದ ಬಗ್ಗೆ ಮಾತನಾಡಿದರು. ಕಳೆದ ಎರಡು ವಾರಗಳಿಂದ ಅವರಿಗೆ ಜ್ವರ ಇತ್ತು. ಆದರೆ ಇಲ್ಲಿಯವರೆಗಿನ ಚಿಕಿತ್ಸೆಯ ನಂತರವೂ ಅವರ ಆರೋಗ್ಯದಲ್ಲಿ ಸುದಾರಣೆ ಕಂಡುಬಂದಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅವರು ಗುಂಪು ಹಂತದ ಉಳಿದ 2 ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತದೆ ಎಂಬುದನ್ನು ಹೇಳುವುದು ಕಷ್ಟ ಎಂದು ವಾಟ್ಸನ್ ತಿಳಿಸಿದ್ದಾರೆ. ಗ್ರೂಪ್ ಹಂತದ ಪಂದ್ಯದಲ್ಲಿ ಶಾ ಆಡುವುದಿಲ್ಲ ಎಂಬುದು ಖಚಿತವಾಗಿದ್ದರೂ ಡೆಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದರೂ ಪೃಥ್ವಿ ಶಾ ಆಟದ ಬಗ್ಗೆ ಸಸ್ಪೆನ್ಸ್ ಇರಲಿದೆ.
ಶಾ 44 ಎಸೆತಗಳಲ್ಲಿ 194 ರನ್! ಐಪಿಎಲ್ 2022 ರಲ್ಲಿ, ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ಪರ 9 ಪಂದ್ಯಗಳನ್ನು ಆಡಿದ್ದಾರೆ. ಆ 9 ಪಂದ್ಯಗಳಲ್ಲಿ, ಅವರು 160 ರ ಸರಾಸರಿಯಲ್ಲಿ 2 ಅರ್ಧ ಶತಕಗಳೊಂದಿಗೆ 259 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು 35 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅಂದರೆ ಪೃಥ್ವಿ ಶಾ ಕೇವಲ 44 ಎಸೆತಗಳಲ್ಲಿ 194 ರನ್ ಗಳಿಸಿದ್ದಾರೆ.